Site icon Vistara News

ನಿಮ್ಮ ನಾಯಕಿ ವಸುಂಧರಾ ರಾಜೆನಾ, ಸೋನಿಯಾ ಗಾಂಧಿ ಅಲ್ವಾ?; ಅಶೋಕ್​ ಗೆಹ್ಲೋಟ್​ಗೆ ಸಚಿನ್ ಪೈಲಟ್​ ವ್ಯಂಗ್ಯ

His Leader is Vasundhara Raje Sachin Pilot slammes At Ashok Ashok Gehlot

#image_title

ರಾಜಸ್ಥಾನ ಕಾಂಗ್ರೆಸ್​​ನಲ್ಲಿ ಮುಖ್ಯಮಂತ್ರಿ ಅಶೋಕ್​ ಗೆಹ್ಲೋಟ್ (Ashok Gehlot) ಮತ್ತು ಯುವ ನಾಯಕ ಸಚಿನ್​ ಪೈಲಟ್ (Sachin Pilot)​ ಪರಸ್ಪರ ವಿರುದ್ಧ ದಿಕ್ಕಿಗೆ ಮುಖ ಮಾಡಿ ನಿಂತವರು ಎಂಬುದು ಜಗಜ್ಜಾಹೀರು. ಇವರಿಬ್ಬರ ಮಧ್ಯೆ ಇರುವ ವೈಮನಸ್ಯ ಪದೇಪದೆ ಭುಗಿಲೇಳುತ್ತದೆ. ಈಗ ಮತ್ತೆ ಸಚಿನ್ ಪೈಲೆಟ್ ಅವರು ಸಿಎಂ ಅಶೋಕ್​ ಗೆಹ್ಲೋಟ್ ವಿರುದ್ಧ ತಿರುಗಿಬಿದ್ದಿದ್ದಾರೆ. ಬಹಿರಂಗವಾಗಿಯೇ ವಾಗ್ದಾಳಿ ನಡೆಸಿದ್ದಾರೆ. ‘ದೋಲ್ಪುರದಲ್ಲಿ ಅಶೋಕ್​ ಗೆಹ್ಲೋಟ್ ಅವರ ಭಾಷಣ ಕೇಳಿದೆ. ಅದರಲ್ಲಿ ವಸುಂಧರಾ ರಾಜೆ ಅವರನ್ನು ಹೊಗಳಿದ್ದನ್ನು ಕೇಳಿದೆ. ಈ ಭಾಷಣ ಕೇಳಿಯಾದ ಮೇಲೆ ಅಶೋಕ್ ಗೆಹ್ಲೋಟ್​ಗೆ ಸೋನಿಯಾ ಗಾಂಧಿ ನಾಯಕಿಯಲ್ಲ, ವಸುಂಧರಾ ರಾಜೆ ಸಿಂಧಿಯಾ ಅವರೇ ನಾಯಕಿ’ ಎಂದು ನನಗೆ ಅನ್ನಿಸುತ್ತಿದೆ ಎಂದು ಸಚಿನ್ ಪೈಲಟ್ ವ್ಯಂಗ್ಯವಾಡಿದ್ದಾರೆ.

ಇತ್ತೀಚೆಗೆ ಧೋಲ್ಪುರ ಸಭೆಯೊಂದರಲ್ಲಿ ಮಾತನಾಡಿದ್ದ ಅಶೋಕ್ ಗೆಹ್ಲೋಟ್​ ‘2020ರಲ್ಲಿ ನಮ್ಮ ಸರ್ಕಾರದ 18 ಶಾಸಕರು, ಸಚಿನ್ ಪೈಲಟ್ ನೇತೃತ್ವದದಲ್ಲಿ ಬಂಡಾಯವೆದ್ದಾಗ ನಮ್ಮ ಸಹಾಯಕ್ಕೆ ಬಂದಿದ್ದು ಬಿಜೆಪಿ ನಾಯಕಿ ವಸುಂಧರಾ ರಾಜೆ. ಅವರಿಂದಲೇ ನಮ್ಮ ಸರ್ಕಾರ ಉಳಿಯಿತು’ ಎಂದು ಹೇಳಿದ್ದರು. ಗೆಹ್ಲೋಟ್ ಅವರ ಈ ಹೇಳಿಕೆಗೆ ಸಚಿನ್ ಪೈಲಟ್​ ತಿರುಗೇಟು ಕೊಟ್ಟಿದ್ದಾರೆ. ‘​ತಮ್ಮದೇ ಪಕ್ಷದ ಶಾಸಕರು, ಸಂಸದರನ್ನು ಟೀಕಿಸಿ, ಬಿಜೆಪಿ ನಾಯಕರನ್ನು ಹೊಗಳುತ್ತಿರುವ ವ್ಯಕ್ತಿಯನ್ನು ನಾನು ಇದೇ ಮೊದಲ ಬಾರಿಗೆ ನೋಡುತ್ತಿದ್ದೇನೆ. ಕಾಂಗ್ರೆಸ್ ನಾಯಕನೊಬ್ಬ, ತನ್ನದೇ ಪಕ್ಷದ ಇತರ ನಾಯಕರನ್ನು ತೆಗಳುತ್ತಿರುವುದು ಖಂಡಿತ ತಪ್ಪು ಎಂದು ಹೇಳಿದ್ದಾರೆ.

ಇದನ್ನೂ ಓದಿ: 2020ರಲ್ಲಿ ನಮ್ಮ ಸರ್ಕಾರವನ್ನು ಉಳಿಸಿದ್ದು ವಸುಂಧರಾ ರಾಜೆ ಎಂದ ರಾಜಸ್ಥಾನ ಸಿಎಂ​; ಕಟ್ಟುಕತೆ ಎಂದ ಬಿಜೆಪಿ ನಾಯಕಿ

ವಸುಂಧರಾ ರಾಜೆ ನೇತೃತ್ವದ ಬಿಜೆಪಿ ಸರ್ಕಾರವಿದ್ದಾಗ ನಡೆದ ಹಗರಣಗಳು, ಭ್ರಷ್ಟಾಚಾರಗಳ ವಿರುದ್ಧ ತನಿಖೆ ನಡೆಸಬೇಕು ಎಂದು ಸಚಿನ್​ ಪೈಲೆಟ್ ಅವರು ಮುಖ್ಯಮಂತ್ರಿ ಅಶೋಕ್​ ಗೆಹ್ಲೋಟ್​ ಅವರಿಗೆ ಆಗ್ರಹಿಸುತ್ತಲೇ ಇದ್ದಾರೆ. ಕಳೆದ ತಿಂಗಳು ಇದೇ ವಿಚಾರವಾಗಿ ಅವರು ಒಂದು ದಿನ ಉಪವಾಸ ಸತ್ಯಾಗ್ರಹ ನಡೆಸಿದ್ದಾರೆ. ವಸುಂಧರಾ ರಾಜೆ ಸರ್ಕಾರ ಇದ್ದಾಗ ಭ್ರಷ್ಟಾಚಾರ ಆಗಿದೆ ಎಂದು ಗೆಹ್ಲೋಟ್ ಅವರೇ ಹೇಳುತ್ತಾರೆ. ಅಂದಮೇಲೆ ತನಿಖೆ ಯಾಕೆ ನಡೆಸುವುದಿಲ್ಲ ಎಂದು ಪ್ರಶ್ನಿಸಿದ್ದರು. ಏಪ್ರಿಲ್​ 9ರಂದು ಸುದ್ದಿಗೋಷ್ಠಿ ನಡೆಸಿ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಆಡಳಿತವನ್ನು ಪ್ರಶ್ನೆ ಮಾಡಿದ್ದರು.

ಮೇ 11ರಿಂದ ಜನ ಸಂಘರ್ಷ ಪಾದ ಯಾತ್ರೆ
ವಸುಂಧರಾ ರಾಜೆ ನೃತೃತ್ವದ ಸರ್ಕಾರವಿದ್ದಾಗ ನಡೆದಿರುವ ಭ್ರಷ್ಟಾಚಾರದ ವಿರುದ್ಧ ತನಿಖೆ ನಡೆಸುವಂತೆ ಆಗ್ರಹಿಸಿ ಅಶೋಕ್​ ಗೆಹ್ಲೋಟ್​ ವಿರುದ್ಧ ಏಪ್ರಿಲ್​ 11ರಂದು ಒಂದು ದಿನದ ಉಪವಾಸ ಸತ್ಯಾಗ್ರಹ ನಡೆಸಿದ್ದ ಅಶೋಕ್ ಗೆಹ್ಲೋಟ್​ ಈಗ ಇದೇ ವಿಚಾರಕ್ಕೆ ಮೇ 11ರಿಂದ ಜನ ಸಂಘರ್ಷ ಪಾದ ಯಾತ್ರೆ ಹಮ್ಮಿಕೊಂಡಿದ್ದಾರೆ. ಅಜ್ಮೇರ್​​ನಿಂದ ಜೈಪುರದವರೆಗೆ 125 ಕಿಮೀ ದೂರ ಸಚಿನ್ ಪೈಲಟ್ ಪಾದಯಾತ್ರೆ ನಡೆಸಲಿದ್ದು, ಸಾಮಾನ್ಯ ಜನರ ಸಮಸ್ಯೆಯನ್ನು ಆಲಿಸಲಿದ್ದಾರೆ.

Exit mobile version