Site icon Vistara News

Bomb Threat | ಬಾಂಬ್‌ ದಾಳಿ ಕುರಿತು ಹುಸಿ ಬೆದರಿಕೆ ಹಾಕಿದವ 5 ಕೋಟಿ ರೂಪಾಯಿಗೂ ಬೇಡಿಕೆ ಇಟ್ಟಿದ್ದ!

Bomb

ಮುಂಬೈ: ವಾಣಿಜ್ಯ ನಗರಿ ಮುಂಬೈ ಮೇಲೆ 26/11ರ ಮಾದರಿಯಲ್ಲಿ ದಾಳಿ ನಡೆಸುವ ಕುರಿತು ಇತ್ತೀಚೆಗೆ ಬೆದರಿಕೆ ಕರೆಗಳು ಜಾಸ್ತಿಯಾಗಿವೆ. ಪಾಕಿಸ್ತಾನದ ಸಂಖ್ಯೆಯಿಂದ ಬಾಂಬ್‌ ದಾಳಿ ಬೆದರಿಕೆ ಬಂದು, ಇದಕ್ಕೆ ಸಂಬಂಧಿಸಿದಂತೆ ವ್ಯಕ್ತಿಯೊಬ್ಬನನ್ನು ಬಂಧಿಸಿದ ಬೆನ್ನಲ್ಲೇ ಮುಂಬೈ ಹೋಟೆಲ್‌ವೊಂದರಲ್ಲಿ ಬಾಂಬ್‌ (Bomb Threat) ಇರಿಸಲಾಗಿದೆ ಎಂದು ಮತ್ತೊಬ್ಬ ವ್ಯಕ್ತಿಯು ಬೆದರಿಕೆ ಹಾಕಿದ್ದಾನೆ. ಹಾಗೆಯೇ, ಹೋಟೆಲ್‌ನ ನಾಲ್ಕು ಕಡೆ ಬಾಂಬ್‌ ಇರಿಸಲಾಗಿದ್ದು, ಅವುಗಳನ್ನು ನಿಷ್ಕ್ರಿಯಗೊಳಿಸಬೇಕು ಎಂದರೆ ೫ ಕೋಟಿ ರೂ. ಕೊಡಬೇಕು ಎಂದು ಬೇಡಿಕೆ ಇಟ್ಟಿದ್ದ ಎಂಬುದಾಗಿ ಪೊಲೀಸರು ತಿಳಿಸಿದ್ದಾರೆ.

“ನಗರದ ಮೇಲೆ ದಾಳಿ ನಡೆಸುವ ಕುರಿತು ನಮಗೆ ಬರುತ್ತಿರುವ ಪ್ರತಿಯೊಂದು ಕರೆಯನ್ನೂ ಗಂಭೀರವಾಗಿ ಸ್ವೀಕರಿಸಲಾಗುತ್ತಿದೆ. ಬೆದರಿಕೆಯೊಡ್ಡುತ್ತಲೇ ತೀವ್ರ ತನಿಖೆ ನಡೆಯುತ್ತಿದೆ. ಆದರೆ, ಸೋಮವಾರ ಸಂಜೆ ಬಂದಿದ್ದು ಹುಸಿ ಬಾಂಬ್‌ ಬೆದರಿಕೆಯಾಗಿದೆ. ಆದರೂ, ಈ ಕುರಿತು ತನಿಖೆ ನಡೆಸಲಾಗುತ್ತಿದೆ. ಐಪಿಸಿ ಸೆಕ್ಷನ್‌ ೩೩೬ ಹಾಗೂ ೫೦೭ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ” ಮುಂಬೈ ಪೊಲೀಸ್‌ ಆಯುಕ್ತ ವಿವೇಕ್‌ ಫನ್ಸಲ್ಕರ್‌ ತಿಳಿಸಿದ್ದಾರೆ.

ಕೆಲವು ದಿನಗಳ ಹಿಂದಷ್ಟೇ ರಾಯಗಢದ ಬೀಚ್‌ವೊಂದರಲ್ಲಿ ಎಕೆ-೪೭ ಸೇರಿ ಹಲವು ಶಸ್ತ್ರಾಸ್ತ್ರಗಳುಳ್ಳ ಹಡಗು ಪತ್ತೆಯಾಗಿತ್ತು. ಇದರಿಂದಾಗಿ ಭಾರಿ ಆತಂಕ ಸೃಷ್ಟಿಯಾಗಿತ್ತು. ಆದರೆ, ಹಡಗು ಆಸ್ಟ್ರೇಲಿಯಾದ ವ್ಯಕ್ತಿಗೆ ಸಂಬಂಧಿಸಿದ್ದೇ ಹೊರತು ಉಗ್ರರದ್ದಲ್ಲ ಎಂಬುದು ಬಳಿಕ ತಿಳಿದಿತ್ತು. ಇದಾದ ನಂತರ ಪಾಕಿಸ್ತಾನದಿಂದ ಮುಂಬೈ ಪೊಲೀಸರಿಗೆ ಸಂದೇಶ ರವಾನಿಸಿ ಬಾಂಬ್‌ ದಾಳಿ ಬೆದರಿಕೆ ಹಾಕಲಾಗಿತ್ತು. ಇದಕ್ಕೆ ಸಂಬಂಧಿಸಿದಂತೆ ಪೊಲೀಸರು ವಿರಾರ್‌ ಜಿಲ್ಲೆಯಲ್ಲಿ ಆರೋಪಿಯೊಬ್ಬನನ್ನು ಬಂಧಿಸಿ ತನಿಖೆ ನಡೆಸುತ್ತಿದ್ದಾರೆ.

ಇದನ್ನೂ ಓದಿ | Terror Alert | 26/11ರ ಮಾದರಿಯಲ್ಲಿ ದಾಳಿ ಬೆದರಿಕೆ ಹಿನ್ನೆಲೆ ಒಬ್ಬನನ್ನು ಬಂಧಿಸಿದ ಮುಂಬೈ ಪೊಲೀಸರು

Exit mobile version