ನವ ದೆಹಲಿ: ತ್ರಿಪುರದ ಅಗರ್ತಲಕ್ಕೆ ಹೊರಟಿದ್ದ ಗೃಹ ಸಚಿವ ಅಮಿತ್ ಶಾ ಅವರ ವಿಮಾನ ಮಾರ್ಗ ಮಧ್ಯೆ ಅಸ್ಸಾಂನ ಗುವಾಹಟಿಯ ಲೋಕಪ್ರಿಯಾ ಗೋಪಿನಾಥ್ ಬೊರ್ಡೊಲೊಯ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ರಾತ್ರಿ ತುರ್ತು ಭೂಸ್ಪರ್ಶ ಮಾಡಿದೆ. ಅಮಿತ್ ಶಾ ಅವರು ಬುಧವಾರ ಅಗರ್ತಲಕ್ಕೆ ತಲುಪಬೇಕಿತ್ತು. ಆದರೆ ಅದು ಸಾಧ್ಯವಾಗಲಿಲ್ಲ. ಹೀಗಾಗಿ ಅವರು ರಾತ್ರಿ 10.45ರ ಹೊತ್ತಿಗೆ ಗುವಾಹಟಿಯ ಹೋಟೆಲ್ ರಾಡಿಸನ್ ಬ್ಲೂ ನಲ್ಲಿ ಉಳಿದುಕೊಂಡಿದ್ದಾರೆ. ಇಂದು ಬೆಳಗ್ಗೆ ಅವರು ಅಗರ್ತಲಕ್ಕೆ ತೆರಳಲಿದ್ದಾರೆ.
ತ್ರಿಪುರದಲ್ಲಿ ಇದೇ ವರ್ಷ ಮಾರ್ಚ್ ತಿಂಗಳಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದ್ದು, ಅದರ ಹಿನ್ನೆಲೆಯಲ್ಲಿ ಬಿಜೆಪಿ ರಥಯಾತ್ರೆಗೆ ಚಾಲನೆ ಕೊಡಲು ಅಮಿತ್ ಶಾ ಅಗರ್ತಲಕ್ಕೆ ತೆರಳುತ್ತಿದ್ದರು. ಆದರೆ ಅತ್ಯಂತ ಕೆಟ್ಟ ವಾತಾವರಣ ಇದ್ದ ಕಾರಣ ವಿಮಾನ ಹಾರಾಟ ಮುಂದುವರಿಸಲು ಸಾಧ್ಯವಾಗಲಿಲ್ಲ. ಗುವಾಹಟಿ ಏರ್ಪೋರ್ಟ್ನಲ್ಲಿ ಅಮಿತ್ ಶಾ ಬಂದಿಳಿಯಲಿದ್ದಾರೆ ಎಂಬ ಮಾಹಿಸಿ ಸಿಗುತ್ತಿದ್ದಂತೆ, ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಮತ್ತು ಇತರ ಬಿಜೆಪಿ ನಾಯಕರು ಅಲ್ಲಿಗೆ ತೆರಳಿ, ಗೃಹ ಸಚಿವರನ್ನು ಸ್ವಾಗತಿಸಿದ್ದಾರೆ.
ಇದನ್ನೂ ಓದಿ: Karnataka Election | ಬಿಜೆಪಿಗೆ ಮತ ನೀಡಲು ಕರ್ನಾಟಕದ ಜನ ಸಿದ್ಧರಾಗಿದ್ದಾರೆ: ಅಮಿತ್ ಶಾ