ನವದೆಹಲಿ: ಯುವಕರಿಬ್ಬರು ಲೋಕಸಭೆಗೆ ನುಗ್ಗಿ, ಭದ್ರತೆಯನ್ನು ಭೇದಿಸಿದ ಹಿನ್ನೆಲೆಯಲ್ಲಿ ಭಾರೀ ಆತಂಕ ಸೃಷ್ಟಿಯಾಗಿದೆ(Security Breach in Lok Sabha). ತಕ್ಷಣವೇ ಲೋಕಸಭೆಗೆ ವಿಸಿಟರ್ಸ್ ಎಂಟ್ರಿಯನ್ನು (visitors Entry) ಬಂದ್ ಮಾಡಲಾಗಿದೆ. ಭಾರೀ ಭದ್ರತೆಯನ್ನು ಹೊಂದಿದ್ದ ಲೋಕಸಭೆಯಲ್ಲಿ ಈ ಇಬ್ಬರು ಹೇಗೆ ನುಸುಳಿದರು ಮತ್ತು ಕಲರ್ ಬಾಂಬ್ ಸಿಡಿಸಿದರು (Smoke color bomb) ಎಂಬ ತನಿಖೆಯನ್ನು ನಡೆಸಲಾಗುತ್ತಿದೆ. ಒಟ್ಟಾರೆ ಈ ಭದ್ರತಾ ಲೋಪ ಹೇಗೆ ನಡೆಯುತು ಎಂಬದನ್ನು ನೋಡೋಣ ಬನ್ನಿ.
ಲೋಕಸಭೆ ಅಧಿವೇಶ ನಡೆಯುತ್ತಿತ್ತು. ಇಬ್ಬರು ವಿಸಿಟರ್ಸ್ ಗ್ಯಾಲರಿಯಿಂದ ಜಿಗಿದು ಹಳದಿ ಗ್ಯಾಸ್ ಸ್ಪ್ರೇ ಮಾಡಿದರು. ಸಂಸದರು ಒಳನುಗ್ಗಿದವರನ್ನು ಹಿಡಿಯಲು ಮುಂದಾದಾಗ ಗದ್ದಲ ಸೃಷ್ಟಿಯಾಯಿತು. ಸದ್ಯ ಅವರನ್ನು ವಿಚಾರಣೆ ನಡೆಸಲಾಗುತ್ತಿದೆ.ಮೈಸೂರು-ಕೊಡಗು ಸಂಸದ ಪ್ರತಾಪ್ ಸಿಂಹ ಅವರು ಈ ಇಬ್ಬರ ಎಂಟ್ರಿ ಪಾಸ್‌ಗಳಿಗೆ ಸಹಿ ಮಾಡಿದ್ದಾರೆ ಎನ್ನಲಾಗಿದೆ. ಲೋಕಸಭೆಯಲ್ಲಿ ಒಳನುಗ್ಗಿದ ಇಬ್ಬರು ಸರ್ವಾಧಿಕಾರ ನಡೆಯಲ್ಲ, ಸರ್ವಾಧಿಕಾರ ಬಂದ್ ಕರೋ ಎಂದು ಕೂಗಿದ್ದಾರೆ.
ಈ ದಾಳಿಕೋರರ ಪೈಕಿ ಒಬ್ಬರ ಆಧಾರ್ ಕಾರ್ಡ್ ದೊರೆತಿದ್ದು, ಅದರಲ್ಲಿ ಲಖನೌ ವಿಳಾಸವಿದೆ. ಲೋಕಸಭೆ ಒಳಗೆ ಈ ರೀತಿಯ ಘಟನೆಯ ನಡೆಯುತ್ತಿದ್ದರೆ, ಸಂಸತ್ತಿನ ಹೊರಗೆ ಇಬ್ಬರು ಪ್ರತಿಭಟನಾಕಾರರನ್ನು ಸ್ಥಳೀಯ ಪೊಲೀಸರು ಬಂಧಿಸಿದ್ದಾರೆ. ಈ ಇಬ್ಬರು ಕೂಡ ಬಣ್ಣದ ಬಾಂಬ್ ಸಿಡಿಸಿ ಪ್ರತಿಭಟನೆ ನಡೆಸಿದ್ದಾರೆ. ಲೋಕಸಭೆಗೆ ನುಗ್ಗಿದವರು ಮತ್ತು ಸಂಸತ್ತಿನ ಹೊರಗೆ ಪ್ರತಿಭಟನೆ ನಡೆಸುತ್ತಿರುವವರ ಮಧ್ಯೆ ಸಂಬಂಧವಿದೆಯೇ ಎಂದು ಗೊತ್ತಾಗಿಲ್ಲ.
ಈ ದಾಳಿಯಿಂದ ಬಹುತೇಕ ಸಂಸದರು ಆತಂಕಿತಗೊಂಡಿದ್ದಾರೆ. 2001 ಸಂಸತ್ ದಾಳಿ ನಡೆದ ದಿನವೇ ಈ ರೀತಿಯ ಮತ್ತೊಂದು ದಾಳಿ ನಡೆದಿದೆ. ಲೋಕಸಭೆಯಲ್ಲಿ ಈ ಆತಂಕದ ಪರಿಸ್ಥಿತಿ ಸೃಷ್ಟಿಯಾದಾಗ ಸ್ಪೀಕರ್ ಚೇರ್‌ನಲ್ಲಿ ಬಿಜೆಪಿ ಸಂಸದ ಎಂಪಿ ರಾಜೇಂದ್ರ ಅಗರ್ವಾಲ್ ಅವರಿದ್ದರು.
ಮೊದಲ ವ್ಯಕ್ತಿ ವಿಸಟರ್ಸ್ ಗ್ಯಾಲರಿಯಿಂದ ಜಂಪ್ ಮಾಡಿದಾಗ ಬಹುತೇಕರು ಇದೊಂದು ಆಕಸ್ಮಿಕ ಘಟನೆ ಎಂದುಕೊಂಡಿದ್ದರು. ಆತ ಮೇಲಿನಿಂದ ಬಿದ್ದಿದ್ದಾನೆ ಎಂದು ತಿಳಿದುಕೊಂಡಿದ್ದರು. ಆದರೆ, ಯಾವಾಗ ಎರಡನೇ ವ್ಯಕ್ತಿಯೂ ಜಂಪ್ ಮಾಡಿದೇನೋ ಕೂಡಲೇ ಅಲ್ಲಿದ್ದ ಸಂಸದರು ಮತ್ತು ಭದ್ರತಾ ಸಿಬ್ಬಂದಿ ಎಚ್ಚೆತ್ತುಕೊಂಡರು. ಬಳಿಕ ಕೂಡಲೇ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಸ್ಥಳಕ್ಕೆ ಆಗಮಿಸಿದರು. ಈ ಘಟನೆಯಲ್ಲಿ ಯಾರಿಗೂ ಗಾಯಗಳಾಗಿಲ್ಲ.
ಈ ಸುದ್ದಿಯನ್ನೂ ಓದಿ: Security breach in Loksabha : ದುಷ್ಕರ್ಮಿಯನ್ನು ಮೊದಲು ಹಿಡಿದದ್ದು ಸಂಸದ ಮುನಿಸ್ವಾಮಿ ಎಂಡ್ ಟೀಮ್