ನವ ದೆಹಲಿ: ಪವಿತ್ರ ಅಮರನಾಥ ಗುಹೆಯ ಬಳಿ ಗುರುವಾರ ಸಂಭವಿಸಿದ ಪ್ರವಾಹದ, ಭೂಕುಸಿತ ದುರಂತದಲ್ಲಿ (AmarnathCloudburst) ಸಿಲುಕಿದವರ ರಕ್ಷಣಾ ಕಾರ್ಯ ಪ್ರಗತಿಯಲ್ಲಿದ್ದು, ಭಾರತೀಯ ವಾಯು ಸೇನೆ ಅಧಿಕಾರಿಗಳು ಹೆಲಿಕಾಪ್ಟರ್‌ಗಳ ಮೂಲಕ ಸಂತ್ರಸ್ತರನ್ನು ರಕ್ಷಿಸುತ್ತಿದ್ದಾರೆ.
ದುರಂತದ ತೀವ್ರತೆಯನ್ನು ಬಿಂಬಿಸುವ ವಿಡಿಯೋವನ್ನು ಪ್ರತ್ಯಕ್ಷದರ್ಶಿಗಳು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದು, ಹಲವರು ಗಾಯಗೊಂಡಿದ್ದಾರೆ ಎಂದು ಹೇಳಲಾಗುತ್ತಿದೆ. ಏತನ್ಮಧ್ಯೆ ರಕ್ಷಣಾ ಕಾರ್ಯವೂ ಚುರುಕಿನಿಂದ ನಡೆಯುತ್ತಿದೆ. ಏತನ್ಮಧ್ಯೆ ಭಾರತೀಯ ವಾಯಸೇನೆ ಟ್ವೀಟ್ ಮಾಡಿ ತಮ್ಮ ಎಮ್‌ಐ-೧೭ ಹೆಲಿಕಾಪ್ಟರ್‌ಗಳ ನೆರವಿನಿಂದ ೩೪ ಮಂದಿ ಗಾಯಗೊಂಡವರನ್ನು ರಕ್ಷಿಸಿದ್ದೇವೆ ಎಂದು ಹೇಳಿದೆ.
ಗುಹೆ ಬಳಿಯ ಬೆಟ್ಟದಿಂದ ಏಕಾಏಕಿ ನುಗ್ಗಿಬಂದ ನೀರು- ಮಣ್ಣಿನ ಭಾರಿ ಪ್ರವಾಹ, ಟೆಂಟ್‌ಗಳು ಕೊಚ್ಚಿಹೋಗುತ್ತಿರುವುದು ಹಾಗೂ ಪ್ರವಾಸಿಗರು ಜೀವ ಉಳಿಸಿಕೊಳ್ಳಲು ಧಾವಿಸುತ್ತಿರುವುದನ್ನು ಕಾಣಬಹುದು.