ನವದೆಹಲಿ: ಹಗರಣದ ಕಾರಣಕ್ಕೆ ದೇಶ ತೊರೆದು ವಿದೇಶದಲ್ಲಿರುವ ಐಪಿಎಲ್(IPL) ರೂವಾರಿ ಲಲಿತ್ ಮೋದಿ ಹಾಗೂ ಹಿರಿಯ ವಕೀಲ ಮುಕುಲ್ ರೋಹ್ಟಗಿ (Mukul Rohtagi) ಅವರು ನಡುವಿನ ಜಗಳ ಬೀದಿಗೆ ಬಂದಿದೆ. ಈ ಸಂಬಂಧ ಇನ್‌ಸ್ಟಾಗ್ರಾಮ್‌ದಲ್ಲಿ ಪೋಸ್ಟ್ ಷೇರ್ ಮಾಡಿಕೊಂಡಿರುವ ಲಲಿತ್ ಮೋದಿ(Lalit Modi), ”ನನ್ನನ್ನು ಪದೇ ಪದೇ ದೇಶಭ್ರಷ್ಟ ಎಂದು ಕರೆದರೆ ಸುಮ್ಮನಿರುವುದಿಲ್ಲ. ನಿಮ್ಮನ್ನು(ಮುಕುಲ್) ಖರೀದಿಸಿ, ಹತ್ತಾರು ಬಾರಿ ಮಾರಿ ಬಿಡಬಲ್ಲೆ ಹುಷಾರ್,” ಎಂದು ಎಚ್ಚರಿಸಿದ್ದಾರೆ.
ರಾತ್ರೋರಾತ್ರಿ ನೀವು(ಮುಕಲ್) ನ್ಯಾಯಾಧೀಶರನ್ನು ಖರೀದಿಸಿ, ನಿಮ್ಮ ಕಕ್ಷಿದಾರ ಪರವಾಗಿ ನ್ಯಾಯ ಬರುವಂತೆ ಮಾಡಿಕೊಳ್ಳುವೆ. ಆದರೆ, ನಾನು ನಿಮ್ಮನ್ನು ಹಲವಾರು ಬಾರಿ ಖರೀದಿಸಿ, ಅಷ್ಟೇ ಬಾರಿ ಮಾರಾಟ ಮಾಡಿ ಬಿಡಬಲ್ಲೆ. ನೀವು ನನ್ನನ್ನು ಮಿಸ್ಟರ್ ಮೋದಿ ಎಂದಷ್ಟೇ ಕರೆಯಬೇಕು. ನೀವು ಇರುವೆ ಇದ್ದ ಹಾಗೆ. ಆದರೆ, ಸುದೈವಷಾತ್ ನನಗೆ ಇರುವೆ ಅಂದರೆ ತುಂಬಾ ಇಷ್ಟ. ಐ ಲವ್ ಆ್ಯಂಟ್. ಹಾಗಾಗಿ, ನಾನು ನಿಮ್ಮನ್ನು ಹೊಸಕಿ ಹಾಕುವುದಿಲ್ಲ. ಆದರೆ, ಪತ್ರಿಕೆ ಅಥವಾ ಟಿವಿಗಳಲ್ಲಿ ನನ್ನ ಬಗ್ಗೆ ಏನಾದರೂ ಹೇಳಿದ್ದು ತಿಳಿಯಿತೋ, ನಿಮ್ಮ ವಿರುದ್ಧ ದಾವೆ ಖಂಡಿತವಾಗಿ ಹೂಡುವೆ ಎಂದು ಹೇಳಿದ್ದಾರೆ.
ರೋಹ್ಟಗಿಯವರೇ, ನಾನೆಂದೂ ನಿಮ್ಮಿಂದ ಕೆಲಸ ಮಾಡಿಸಿಕೊಂಡಿಲ್ಲ. ಅಥವಾ ನಿಮ್ಮ ಸ್ನೇಹಿತರಿಂದ ಲಾಭ ಪಡೆದುಕೊಂಡಿಲ್ಲ. ನಾನು ನಿಮ್ಮನ್ನು ಎಂದಿಗೂ ಗೌರವಿಸಿಕೊಂಡೇ ಬಂದಿದ್ದೇನೆ. ಆದರೆ, ನಿಮ್ಮಲ್ಲಿ ಮಾತ್ರ ದ್ವೇಷವೇ ತುಂಬಿದೆ. ನನ್ನನ್ನು ದೇಶಭ್ರಷ್ಟ ಎಂದು ಕರೆಯಬೇಡಿ. ಆ ರೀತಿಯಾಗಿ ಯಾವುದಾದರೂ ನ್ಯಾಯಾಲಯ ಹೇಳಿದೆಯೇ? ಒಂದು ವೇಳೆ, ಇದೇ ರೀತಿಯಾಗಿ ಹೇಳಿದ್ರೆ ಅಷ್ಟೇ ಕಾನೂನು ಕ್ರಮ ಎದುರಿಸಿ ಎಂದು ಲಲಿತ್ ಮೋದಿ ಹೇಳಿದ್ದಾರೆ.
ಇದನ್ನೂ ಓದಿ | ಲಲಿತ್ ಮೋದಿ ಜತೆ ಡೇಟಿಂಗ್: ಕೊನೆಗೂ ಮೌನ ಮುರಿದ ಸುಶ್ಮಿತಾ ಸೇನ್ ಹೇಳಿದ್ದೇನು?