ಭೋಪಾಲ್: ಬಿಜೆಪಿಯಿಂದ ಅಮಾನತುಗೊಂಡಿರುವ ಕೊಲೆ ಆರೋಪಿ ಮಿಶ್ರಿ ಚಂದ್ ಗುಪ್ತಾ ಅವರ ಸಾಗರ್ ಸಿಟಿಯ ಅಕ್ರಮ ಹೋಟಲನ್ನು ಜಿಲ್ಲಾಡಳಿತವು ನೆಲಸಮ ಮಾಡಿದೆ. ಮಧ್ಯಪ್ರದೇಶ (Madhya Pradesh) ಸಾಗರ್ ಸಿಟಿಯ ಆರೋಪಿ ಮಿಶ್ರಿ ಚಂದ್ ಗುಪ್ತಾ ಅವರು ಡಿಸೆಂಬರ್ 22ರಂದು ಜಗದೀಶ್ ಯಾದವ್ ಎಂಬಾತನ ಮೇಲೆ ತಮ್ಮ ಎಸ್‌ಯುವಿಯನ್ನು ಹರಿಸಿ, ಕೊಲೆ ಮಾಡಿದ್ದರು. ಬಳಿಕ ಬಿಜೆಪಿಯ ಅವರನ್ನು ಪಕ್ಷದಿಂದ ಅಮಾನತು ಮಾಡಿತ್ತು.
ಸಾಗರ್ ಸಿಟಿಯ ಜೈರಾಮ್ ಪ್ಯಾಲೇಸ್ ಹೋಟೆಲ್ ಅನ್ನು ಇಂಧೋರ್‌ನ ಅಧಿಕಾರಿಗಳ ಟೀಮ್ ನೆಲಸಮ ಮಾಡಿದೆ. ಹೋಟೆಲ್ ನೆಲಸಮವಾಗುತ್ತಿರುವ ವಿಡಿಯೋ ಸೋಷಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿದೆ. ಸಾಗರ್ ಜಿಲ್ಲಾ ಡಿಸಿ ದೀಪಕ್ ಆರ್ಯ ಅವರು, ಹೋಟೆಲ್ ನೆಲಸಮ ಮಾಡುವ ವೇಳೆ ಸಂಚಾರವನ್ನು ಸ್ಥಗಿತಗೊಳಿಸಲಾಗಿತ್ತು. ಹೊಟೇಲ್ ಅಕ್ಕ ಪಕ್ಕದ ಬಿಲ್ಡಿಂಗ್‌ಗಳಲ್ಲಿ ವಾಸವಿದ್ದ ಜನರಿಗೂ ಈ ಬಗ್ಗೆ ಎಚ್ಚರಿಕೆ ನೀಡಲಾಗಿತ್ತು. ಯಾವುದೇ ಜೀವ ಹಾನಿಯಾಗಿಲ್ಲ. ಕೇವಲ ಬಿಲ್ಡಿಂಗ್ ಮಾತ್ರವೇ ನೆಲಸಮ ಮಾಡಲಾಗಿದೆ ಎಂದು ತಿಳಿಸಿದ್ದಾರೆ.
ಬಿಜೆಪಿ ಮುಖಂಡರಾಗಿದ್ದ ಮಿಶ್ರಿ ಚಂದ್ ಗುಪ್ತಾ ಮತ್ತು ಅವರ ಕುಟುಂಬ ಸದಸ್ಯರು ಮಕ್ರೋನಿಯಾ ಛೇದಕದಲ್ಲಿರುವ ಡೈರಿ ಫಾರ್ಮ್‌ನಲ್ಲಿ ಕೆಲಸ ಮಾಡುತ್ತಿದ್ದ ಜಗದೀಶ್ ಯಾದವ್ ಅವರ ಮೇಲೆ ಎಸ್‌ಯುವಿ ಹರಿಸಿ ಕೊಲೆ ಮಾಡಿದ್ದಾರೆಂದು ಎಂದು ಆರೋಪಿಸಲಾಗಿದೆ. ಈ ಪ್ರಕರಣದಲ್ಲಿ ಪೊಲೀಸರು ಒಟ್ಟು 8 ಜನರ ವಿರುದ್ಧ ಕೊಲೆ ಪ್ರಕರಣ ದಾಖಲಿಸಿದ್ದಾರೆ. ಈ ಪೈಕಿ ಐವರನ್ನು ಬಂಧಿಸಲಾಗಿದೆ. ಪ್ರಮುಖ ಆರೋಪಿ ಮಿಶ್ರಿ ಚಂದ್ ಗುಪ್ತಾ ಅವರು ತಲೆಮರೆಸಿಕೊಂಡಿದ್ದಾನೆ.
ಇದನ್ನೂ ಓದಿ | 19 ವರ್ಷದ ರಿಸಪ್ಷನಿಸ್ಟ್ ಹತ್ಯೆ; ಉತ್ತರಾಖಂಡ ಬಿಜೆಪಿ ಮಾಜಿ ಸಚಿವನ ಪುತ್ರನ ರೆಸಾರ್ಟ್ ಸಂಪೂರ್ಣ ನೆಲಸಮ