ಛತ್ತೀಸ್ಗಢ: ಕ್ರೈಸ್ತ ಧರ್ಮಕ್ಕೆ ಮತಾಂತರಗೊಂಡಿದ್ದ 250 ಹಿಂದುಗಳನ್ನು ಮಾತೃ ಧರ್ಮಕ್ಕೆ ವಾಪಸ್ ಕರೆತರಲಾಗಿದ್ದು (Ghar Wapsi), ಅಖಿಲ ಭಾರತೀಯ ಘರ್ ವಾಪ್ಸಿ ಸಮಿತಿಯ ನೇತೃತ್ವದಲ್ಲಿ ಕಾರ್ಯಕ್ರಮ ನಡೆದಿತ್ತು. ಫೆಬ್ರವರಿ 21ರಂದು ಇಲ್ಲಿನ ಚಿಕ್ನಿಪಲಿ ಎಂಬಲ್ಲಿ ಕಾರ್ಯಕ್ರಮ ಆಯೋಜಿಸಿ, ಗಂಗಾಜಲದಲ್ಲಿ ಪಾದ ತೊಳೆಯುವ ಮೂಲಕ ಮಾತೃ ಧರ್ಮಕ್ಕೆ ವಾಪಸ್ ಕರೆತರಲಾಗಿದೆ. ಧರ್ಮ ಜಾಗರಣ್ ಸಮನ್ವಯ ವಿಭಾಗ ಹಾಗೂ ಆರ್ಯ ಸಾಮ್ ಸಂಸ್ಥೆಯೂ ಈ ಕಾರ್ಯಕ್ರಮದ ನೇತೃತ್ವ ವಹಿಸಿತ್ತು.
ಅಖಿಲ ಭಾರತೀಯ ಘರ್ ವಾಪ್ಸಿ ಸಮಿತಿಯ ಪ್ರಬಲ್ ಪ್ರತಾಪ್ ಸಿಂಗ್ ಜುದೇವ್ ಅವರು ಕಾರ್ಯಕ್ರಮದ ಬಳಿಕ ಮಾತನಾಡಿ, ಕಾಂಗ್ರೆಸ್ ಆಡಳಿತವಿರುವ ಛತ್ತೀಸ್ಗಢದಲ್ಲಿ ಮತಾಂತರಕ್ಕೆ ಸರಕಾರದ ಆಶ್ರಯ ದೊರೆಯುತ್ತಿದೆ. ಈ ಮೂಲಕ ಹಿಂದು ಧರ್ಮವನ್ನು ದುರ್ಬಲಗೊಳಿಸುವ ತಂತ್ರ ಮಾಡಲಾಗುತ್ತಿದೆ. ಹಿಂದುಗಳು ಅದಕ್ಕೆ ಆಸ್ಪದ ಕೊಡಬಾರದು ಎಂಬುದಾಗಿ ಕರೆಕೊಟ್ಟರು.
ಇದನ್ನೂ ಓದಿ : Gharwapsi politics | ಕಾಂಗ್ರೆಸ್‌ನಲ್ಲಿ ಶುರುವಾಯ್ತು ಘರ್ ವಾಪ್ಸಿ ಆಂದೋಲನ: ಖರ್ಗೆ ಭೇಟಿಯಾದ ಎಚ್. ವಿಶ್ವನಾಥ್
ಜುದೇವ್ ಹಾಗೂ ಅವರ ತಂಡ ಸುಮಾರು 20 ಸಾವಿರ ಮಂದಿಯನ್ನು ಹಿಂದು ಧರ್ಮಕ್ಕೆ ವಾಪಸ್ ತರುವ ಕೆಲಸ ಮಾಡಿದ್ದಾರೆ. ಕಳೆದ ವರ್ಷ ಅಕ್ಟೋಬರ್ನಲ್ಲಿ ಅವರು ಒಡಿಶಾದ ಸುಂದರ್ಗಢ್ ಜಿಲ್ಲೆಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ 171 ಕುಟುಂಬಗಳ 500ಕ್ಕೂ ಅಧಿಕ ಮಂದಿಯನ್ನು ಹಿಂದು ಧರ್ಮಕ್ಕೆ ವಾಪಸ್ ಕರೆತಂದಿದ್ದರು. ಚತ್ತೀಸ್ಗಢದಲ್ಲಿ 2021ರಲ್ಲಿ ನಡೆದ ಕಾರ್ಯಕ್ರಮದಲ್ಲಿ 1200 ಮಂದಿಯನ್ನು ಕ್ರೈಸ್ತ ಧರ್ಮದಿಂದ ಘರ್ ವಾಪ್ಸಿ ಮಾಡಿದ್ದರು.