Site icon Vistara News

Independence Day 2024: ಸ್ವಾತಂತ್ರ್ಯ ದಿನದ ಸಂದರ್ಭದಲ್ಲಿ ಕೇಳಲೇಬೇಕಾದ ಟಾಪ್‌ 10 ದೇಶಭಕ್ತಿ ಗೀತೆಗಳಿವು

Independence Day 2024

ದೇಶ (india) ಈಗ 78ನೇ ಸ್ವಾತಂತ್ರ್ಯ ದಿನದ (Independence Day 2024) ಸಂಭ್ರಮದಲ್ಲಿದೆ. ಈಗಾಗಲೇ ಆಗಸ್ಟ್ 15ರಂದು ಸ್ವಾತಂತ್ರ್ಯೋತ್ಸವ ಆಚರಣೆಯ ಸಿದ್ಧತೆಗಳು ದೇಶಾದ್ಯಂತ ಜೋರಾಗಿಯೇ ನಡೆಯುತ್ತಿದೆ. ಬಹುತೇಕ ಮಂದಿಯ ದಿನದ ಕಾರ್ಯಕ್ರಮದ ಪಟ್ಟಿ ಸಿದ್ಧವಾಗಿದೆ. ದೇಶಾದ್ಯಂತ ವಿವಿಧ ಸ್ಪರ್ಧೆಗಳನ್ನು (Various competitions) ಆಯೋಜಿಸಿ ಎಲ್ಲರೂ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಪಾಲ್ಗೊಳ್ಳುವಂತೆ ಮಾಡಿ ಈ ದಿನದ ಸಂಭ್ರವನ್ನು ಮತ್ತಷ್ಟು ಹೆಚ್ಚಿಸಲಾಗುತ್ತದೆ.

1947ರಲ್ಲಿ ಬ್ರಿಟಿಷರ ಆಳ್ವಿಕೆಯಿಂದ ಭಾರತದ ಸ್ವಾತಂತ್ರ್ಯವನ್ನು ಸ್ಮರಣಾರ್ಥವಾಗಿ ಭಾರತದಲ್ಲಿ ಸ್ವಾತಂತ್ರ್ಯ ದಿನವನ್ನು ಪ್ರತಿ ವರ್ಷ ಅತ್ಯಂತ ಗೌರವ ಮತ್ತು ಉತ್ಸಾಹದಿಂದ ಆಚರಿಸಲಾಗುತ್ತದೆ. ಈ ದಿನವನ್ನು ಮೆರವಣಿಗೆ, ವಿವಿಧ ಸ್ಪರ್ಧೆಗಳು, ದೇಶಭಕ್ತಿಯ ಭಾಷಣ ನಡೆಸಿ ರಾಷ್ಟ್ರಧ್ವಜವನ್ನು ಹಾರಿಸುವ ಮೂಲಕ ಆಚರಿಸಲಾಗುತ್ತದೆ. ದೇಶಾದ್ಯಂತ ದೇಶಭಕ್ತಿ ಗೀತೆಗಳ ಗಾಯನ ಅನುರಣಿಸುತ್ತದೆ.

ಈ ಬಾರಿ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೇಳಲು ಮತ್ತು ಹಾಡಲು ಇಷ್ಟಪಡುವ 10 ಪ್ರಮುಖ ಹಿಂದಿ ದೇಶಭಕ್ತಿ ಗೀತೆಗಳ ಪಟ್ಟಿ ಇಲ್ಲಿದೆ. ಇದನ್ನು ಅಭ್ಯಾಸ ಮಾಡಿ ಈ ಬಾರಿಯ ಸ್ವಾತಂತ್ರ್ಯ ದಿನಾಚರಣೆಗೆ ನೀವೂ ಹಾಡಬಹುದು.


ಏ ಮೇರೆ ವತನ್ ಕೆ ಲೋಗೊನ್

ಗಾಯಕಿ ಲತಾ ಮಂಗೇಶ್ಕರ್ ಅವರು ಹಾಡಿರುವ ಈ ದೇಶಭಕ್ತಿ ಗೀತೆಯ ಸಾಹಿತ್ಯವು ಎಲ್ಲರ ಮನದಾಳಕ್ಕೆ ಮುಟ್ಟುವಂತಿದೆ. ರಕ್ತದಲ್ಲಿ ದೇಶಭಕ್ತಿಯನ್ನು ಜಾಗೃತಿ ಮೂಡಿಸುತ್ತದೆ. ಈ ಹಾಡಿನಲ್ಲಿ ಭಾರತೀಯ ಸ್ವಾತಂತ್ರ್ಯ ಹೋರಾಟದಲ್ಲಿ ಭಾರತೀಯ ಹುತಾತ್ಮರ ತ್ಯಾಗವನ್ನು ಸುಂದರವಾಗಿ ನಿರೂಪಿಸಲಾಗಿದೆ.


ತೇರಿ ಮಿಟ್ಟಿ ಮಿ ಮಿಲ್ ಜವಾನ್

ಕೇಸರಿ ಚಲನಚಿತ್ರದಲ್ಲಿ ಬಿ ಪ್ರಾಕ್ ಹಾಡಿರುವ ಈ ಹಾಡಿನಲ್ಲಿ ಭಾರತದ ಮೇಲಿನ ಪ್ರೀತಿ ಮತ್ತು ಗೌರವವನ್ನು ಹೇಳಲಾಗುತ್ತದೆ. ಈ ದೇಶಭಕ್ತಿ ಗೀತೆಯ ಸುಂದರವಾದ ಸಾಹಿತ್ಯವು ಖಂಡಿತವಾಗಿಯೂ ಆತ್ಮವನ್ನು ಸ್ಪರ್ಶಿಸುತ್ತದೆ.


ಸಂದೇಸೆ ಆತೆ ಹೈ ಹಮೇಂ ತಡಪಾತೆ ಹೈ

ಬಾರ್ಡರ್ ಚಲನಚಿತ್ರದ ಈ ಸಾಂಪ್ರದಾಯಿಕ ದೇಶಭಕ್ತಿ ಗೀತೆ ಇಲ್ಲಿಯವರೆಗಿನ ಅತ್ಯುತ್ತಮ ಹಾಡುಗಳಲ್ಲಿ ಒಂದಾಗಿದೆ. ಈ ಹಾಡಿನ ಸಾಹಿತ್ಯ ಪ್ರತಿಯೊಬ್ಬರನ್ನು ಗುನುಗುನಿಸುವಂತೆ ಮಾಡುತ್ತದೆ. ಭಾರತದಲ್ಲಿ ಸ್ವಾತಂತ್ರ್ಯ ದಿನವಾಗಲಿ ಅಥವಾ ಗಣರಾಜ್ಯೋತ್ಸವದ ದಿನವಾಗಲಿ, ದೇಶಭಕ್ತಿಯ ಉತ್ಸಾಹವನ್ನು ಹೆಚ್ಚಿಸಲು ಈ ಹಾಡನ್ನು ಬಹುತೇಕ ಮಂದಿ ಹಾಡುತ್ತಾರೆ. ಈ ಹಾಡನ್ನು ಸೋನು ನಿಗಮ್ ಮತ್ತು ರೂಪ್ ಕುಮಾರ್ ರಾಥೋಡ್ ಸುಂದರವಾಗಿ ಹಾಡಿದ್ದಾರೆ.


ಐಸಾ ದೇಸ್ ಹೈ ಮೇರಾ

ಸುಂದರ ದೇಶ ಭಾರತವನ್ನು ಹೊಗಳಲು ಬಯಸಿದರೆ ಇದು ಅತ್ಯುತ್ತಮ ಹಾಡು. ಈ ಹಾಡು ವೀರ್ ಝರಾ ಚಲನಚಿತ್ರದ್ದು. ಲತಾ ಮಂಗೇಶ್ಕರ್, ಉದಿತ್ ನಾರಾಯಣ್, ಗುರುದಾಸ್ ಮಾನ್ ಮತ್ತು ಪೃಥಾ ಮಜುಂದಾರ್ ಅವರು ಇದನ್ನು ಹಾಡಿದ್ದಾರೆ.


ದೇಸ್ ರಂಗಿಲಾ ರಂಗಿಲಾ ದೇಸ್ ಮೇರಾ ರಂಗಿಲಾ

ʼಫನಾʼ ಚಿತ್ರದ ಈ ಅದ್ಭುತ ಹಾಡು ಪ್ರತಿಯೊಬ್ಬರೂ ನೃತ್ಯ ಮಾಡಲು ಪ್ರೇರೇಪಿಸುತ್ತದೆ. ಸ್ವಾತಂತ್ರ್ಯ ದಿನಾಚರಣೆಯ ಸಮಾರಂಭದಲ್ಲಿ ಭಾಗವಹಿಸಲು ಇಚ್ಛಿಸುವವರು ಈ ಹಾಡನ್ನು ಆಯ್ಕೆ ಮಾಡಿಕೊಳ್ಳಬಹುದು. ಮಹಾಲಕ್ಷ್ಮಿ ಅಯ್ಯರ್ ಈ ಹಾಡು ಹಾಡಿದ್ದಾರೆ.

ಸುನೋ ಗೌರ್ ಸೇ ದುನಿಯಾ ವಾಲೋ

ಇದು ಸ್ವಾತಂತ್ರ್ಯ ದಿನದ ವಿಶೇಷ ಗೀತೆಯಾಗಿದ್ದು, ದೇಶದ ಬಗ್ಗೆ ಪ್ರೀತಿ ಮತ್ತು ಗೌರವವನ್ನು ತೋರಿಸಲು ಎಲ್ಲಿ ಬೇಕಾದರೂ ಹಾಡಬಹುದು, ಕೇಳಬಹುದು. ಈ ಹಾಡನ್ನು ಶಂಕರ್ ಮಹಾದೇವನ್, ಉದಿತ್ ನಾರಾಯಣ್, ಮಹಾಲಕ್ಷ್ಮಿ ಅಯ್ಯರ್ ಮತ್ತು ಡೊಮ್ನಿಕ್ ಹಾಡಿದ್ದಾರೆ.


ಏ ವತನ್ ವತನ್ ಮೇರೆ ಅಬದ್ ರಹೇ ತು

ರಾಝಿ ಚಲನಚಿತ್ರದ ಈ ದೇಶಭಕ್ತಿಯ ಹಿಂದಿ ಹಾಡು ಎಲ್ಲರನ್ನೂ ಮಂತ್ರಮುಗ್ಧರನ್ನಾಗಿಸುತ್ತದೆ. ಈ ಹಾಡಿನ ಮಾಂತ್ರಿಕ ಸಾಹಿತ್ಯವು ಪ್ರತಿಯೊಬ್ಬ ಭಾರತೀಯನ ಹೃದಯವನ್ನು ಗೆಲ್ಲುತ್ತದೆ. ಈ ಹಾಡನ್ನು ಸುನಿಧಿ ಚೌಹಾಣ್ ಹಾಡಿದ್ದಾರೆ.


ಕರ್ ಚಲೇ ಹಮ್ ಫಿದಾ ಜನೋ ತನ್ ಸಾಥಿಯೋಂ

ದೇಶಕ್ಕಾಗಿ ಸೇವೆ ಸಲ್ಲಿಸುತ್ತಿರುವಾಗ ತಮ್ಮ ಅಮೂಲ್ಯವಾದ ಪ್ರಾಣವನ್ನು ಕಳೆದುಕೊಂಡ ಎಲ್ಲಾ ವೀರ ಸೈನಿಕರಿಗೆ ಗೌರವ ಸಲ್ಲಿಸಲು ಬಯಸಿದರೆ, ಸ್ವಾತಂತ್ರ್ಯ ದಿನದಂದು ಈ ಹಾಡು ಹಾಡು ಆಯ್ಕೆಯಾಗಿದೆ. ಈ ಹಾಡನ್ನು ಭಾರತೀಯ ಇತಿಹಾಸದ ಶ್ರೇಷ್ಠ ಗಾಯಕ ಮೊಹಮ್ಮದ್ ರಫಿ ಹಾಡಿದ್ದಾರೆ.


ವಂದೇ ಮಾತರಂ

ಲತಾ ಮಂಗೇಶ್ಕರ್ ಹಾಡಿರುವ ಈ ಹಾಡು ದೇಶಭಕ್ತಿಯ ಉತ್ಸಾಹವನ್ನು ಹೆಚ್ಚಿಸುತ್ತದೆ. ಎಲ್ಲ ವೀರ ಚೇತನಗಳಿಗೆ ಗೌರವ ಸಲ್ಲಿಸುವ ಈ ಹಾಡನ್ನು ಸ್ವಾತಂತ್ರ್ಯ ದಿನಾಚರಣೆ ಸಂದರ್ಭದಲ್ಲಿ ಹಾಡಬಹುದು.

ಇದನ್ನೂ ಓದಿ: Independence Day 2024: ಸ್ವಾತಂತ್ರ್ಯಪೂರ್ವದಲ್ಲಿ ಭಾರತದ ಎದುರು ಸೋಲುವ ಭಯ; ಹಾಕಿ ತಂಡವನ್ನೇ ಒಲಿಂಪಿಕ್ಸ್‌ಗೆ ಕಳುಹಿಸಿರಲಿಲ್ಲ ಗ್ರೇಟ್‌ ಬ್ರಿಟನ್‌!


ಎ ವತನ್ ಎ ವತನ್ ಹಮ್ಕೊ ತೇರಿ ಕಸಮ್

ʼಶಹೀದ್ʼ ಚಿತ್ರದ ಈ ಸುಂದರ ಹಿಂದಿ ದೇಶಭಕ್ತಿ ಗೀತೆ ಪ್ರತಿಯೊಬ್ಬ ಭಾರತೀಯನ ಹೃದಯವನ್ನು ಗೆಲ್ಲುವಂತಿದೆ. ಮೊಹಮ್ಮದ್ ರಫಿ ಹಾಡಿರುವ ಈ ಹಾಡು ಸ್ವಾತಂತ್ರ್ಯ ದಿನವನ್ನು ವಿಶೇಷ ಮತ್ತು ಸ್ಮರಣೀಯವಾಗಿಸುತ್ತದೆ.

Exit mobile version