Site icon Vistara News

Independence day | ಮಹಿಳೆಯರನ್ನು ಅಗೌರವಿಸುವ ಮಾತು, ವರ್ತನೆ ಬೇಡ: ಪ್ರಧಾನಿ ಮೋದಿ ಕಿವಿಮಾತು

PM Modi About woman

ನದ ದೆಹಲಿ: ಸ್ವಾತಂತ್ರ್ಯೋತ್ಸವ (Independence day) ನಿಮಿತ್ತ ಇಂದು ದೆಹಲಿಯ ಕೆಂಪುಕೋಟೆ ಮೇಲೆ ಧ್ವಜಾರೋಹಣ ಮಾಡಿದ ಪ್ರಧಾನಿ ನರೇಂದ್ರ ಮೋದಿ ಬಳಿಕ ಸುಮಾರು 82 ನಿಮಿಷ ನಿರರ್ಗಳವಾಗಿ ಮಾತನಾಡಿದರು. ಹತ್ತು-ಹಲವು ವಿಷಯಗಳ ಬಗ್ಗೆ ಪ್ರಸ್ತಾಪ ಮಾಡಿದ ನರೇಂದ್ರ ಮೋದಿ, ಮುಖ್ಯವಾಗಿ ಮಹಿಳಾ ಶಕ್ತಿ, ಸ್ವಾತಂತ್ರ್ಯ ಹೋರಾಟದಲ್ಲಿ ಧೀರ ಸ್ತ್ರೀಯರ ಪಾತ್ರವನ್ನು ಶ್ಲಾಘಿಸಿದರು. ಹಾಗೇ, ಮಹಿಳೆಯರ ಬಗ್ಗೆ ಇರುವ ಮನಸ್ಥಿತಿ ಬದಲಾಗಬೇಕು ಎಂದೂ ಮನವಿ ಮಾಡಿದರು.

ಭಾಷಣದ ಪ್ರಾರಂಭದಲ್ಲಿ, ಝಾನ್ಸಿ ರಾಣಿ ಲಕ್ಷ್ಮೀ ಬಾಯಿ, ರಾಣಿ ಚೆನ್ನಮ್ಮ, ಬೇಗಂ ಹಜರತ್​ ಮಹಲ್​ ಮತ್ತಿತರ ವೀರ ಮಹಿಳಾ ಹೋರಾಟಗಾರ್ತಿಯರನ್ನು ಸ್ಮರಿಸಿದ ಪ್ರಧಾನಿ ಮೋದಿ, ‘ಈ ವೀರ ವನಿತೆಯರು ಸದಾ ಸ್ಮರಣೀಯರು. ದೇಶದ ಪ್ರತಿಯೊಬ್ಬ ವ್ಯಕ್ತಿಯೂ ಇವರನ್ನೆಲ್ಲ ನೆನಪಿಸಿಕೊಳ್ಳುವಾಗ ಹೆಮ್ಮೆ ಪಡಬೇಕು. ಮಹಿಳೆಯರೆಡೆಗಿನ ಗೌರವವೇ ಈ ದೇಶದ ಆಧಾರಸ್ತಂಭ’ ಎಂದರು. ‘ನಾರಿಶಕ್ತಿಗೆ ಎಲ್ಲರೂ ಬೆಂಬಲ ನೀಡಬೇಕು. ಮಹಿಳೆಯೆಂದರೆ ‘ಇಷ್ಟೇ’ ಎಂದು ಸೀಮಿತಗೊಳಿಸಿಕೊಂಡು ಅವರನ್ನು ನೋಡುವುದ ಬೇಡ. ಅವರೆಡೆಗೆ ಇರುವ ಅಭಿಪ್ರಾಯ ಬದಲಾಗಬೇಕು’ ಎಂದು ಕರೆಕೊಟ್ಟಿದ್ದಾರೆ.

ಪ್ರತಿದಿನದ ಬದುಕಲ್ಲಿ, ಯಾವುದೋ ಒಂದು ಕಾರಣಕ್ಕೆ, ಯಾವುದೋ ಒಂದು ಮಾತಿನ ಮೂಲಕ ಅಥವಾ ನಮ್ಮ ನಡವಳಿಕೆಯ ಮೂಲಕ ಮಹಿಳೆಯರನ್ನು ಅಗೌರವಿಸುತ್ತಿರುತ್ತೇವೆ. ನಾವದನ್ನು ಸರಿಪಡಿಸಿಕೊಳ್ಳಬೇಕು. ಸ್ತ್ರೀಯರನ್ನು ಅವಮಾನಿಸುವ ವರ್ತನೆ, ಮಾತುಗಳು ನಮ್ಮಿಂದ ಹೊರಬರಬಾದರು. ಈ ನಿಟ್ಟಿನಲ್ಲಿ ಎಲ್ಲರೂ ಪ್ರತಿಜ್ಞೆ ಮಾಡಬೇಕು ಎಂದು ಪ್ರಧಾನಿ ಮೋದಿ ಒತ್ತಾಯಿಸಿದರು. ಹಾಗೇ, ಭಾರತದ ಪ್ರಜಾಪ್ರಭುತ್ವ ಎಂಬುದು ತಾಯಿಯಿದ್ದಂತೆ, ಅದನ್ನು ಗೌರವಿಸೋಣ ಎಂದು ಹೇಳಿದರು.

ಇದನ್ನೂ ಓದಿ: Independence Day | 25 ವರ್ಷದೊಳಗೆ ಅಭಿವೃದ್ಧಿ ಹೊಂದಿದ ಭಾರತಕ್ಕಾಗಿ ಪ್ರಧಾನಿ ಪಂಚ ಸಂಕಲ್ಪ

Exit mobile version