ನವದೆಹಲಿ: ಆಹಾರ ಹಂಚಿಕೆ ಪ್ರಮಾಣ ಹೆಚ್ಚಿಸುವ ಸಂಬಂಧ ಭಾರತ ಮತ್ತು ಅರ್ಜೆಂಟೀನಾ ಮಧ್ಯೆ ಪರಸ್ಪರ ಚರ್ಚೆ ನಡೆದಿದೆ. ಅರ್ಜೆಂಟೀನಾ ರಾಯಭಾರಿ ಮರಿಯಾನೋ ಅಗಸ್ಟಿನ್ ಕೌಸಿನೊ ಅವರ ನಿಯೋಗ ಇಂದು ನವದೆಹಲಿಯಲ್ಲಿ ಕೇಂದ್ರ ಆಹಾರ ಸಚಿವ ಪ್ರಲ್ಹಾದ್ ಜೋಶಿ (Pralhad Joshi) ಅವರನ್ನು ಭೇಟಿ ಮಾಡಿ ಆಹಾರೋತ್ಪಾದನೆ ಬಗ್ಗೆ ಸಮಾಲೋಚನೆ ನಡೆಸಿದೆ.
ಉಭಯ ರಾಷ್ಟ್ರಗಳಲ್ಲೂ ಆಹಾರ ಧಾನ್ಯ, ಖಾದ್ಯ ತೈಲದ ಉತ್ಪಾದನೆ ಮತ್ತು ಪೂರೈಕೆಗೆ ಬೇಕಿರುವ ಅಗತ್ಯ ಸಹಕಾರ ಕುರಿತು ಚರ್ಚಿಸಲಾಯಿತು.
ಇದನ್ನೂ ಓದಿ: Government Employees Sports: ಆ.17ರಂದು ರಾಜ್ಯ ಸರ್ಕಾರಿ ನೌಕರರ ರಾಜ್ಯಮಟ್ಟದ ಕ್ರೀಡಾಕೂಟಕ್ಕೆ ಚಾಲನೆ
ಜಾಗತಿಕ ಸವಾಲುಗಳನ್ನು ನಿಭಾಯಿಸಲು ಮತ್ತು ಆಹಾರ ಹಂಚಿಕೆಯ ಪ್ರಮಾಣವನ್ನು ಹೆಚ್ಚಿಸಲು ಭಾರತ-ಅರ್ಜೆಂಟೀನಾ ಎರಡೂ ದೇಶಗಳ ನಡುವೆ ಪರಸ್ಪರ ಸಹಕಾರ, ಅಗತ್ಯ ನೆರವಿನ ಬಗ್ಗೆ ಚರ್ಚಿಸಲಾಗಿದೆ ಎಂದು ಸಚಿವ ಪ್ರಲ್ಹಾದ್ ಜೋಶಿ ಅವರು ಟ್ವೀಟ್ ಮಾಡಿದ್ದಾರೆ.