Site icon Vistara News

AD-1 Missile | ಎತ್ತರದ ಗುರಿ ಸದೆಬಡಿಯುವ ಸಾಮರ್ಥ್ಯದ ಎಡಿ-1 ಕ್ಷಿಪಣಿ ಪರೀಕ್ಷೆ ಯಶಸ್ವಿ

Ballistic Missile Defence

ಭುವನೇಶ್ವರ: ದೂರ ಹಾಗೂ ಅತಿ ಎತ್ತರದ ಗುರಿಗಳನ್ನು ಕ್ಷಣಮಾತ್ರದಲ್ಲೇ ಹೊಡೆದುರುಳಿಸುವ ಸಾಮರ್ಥ್ಯವಿರುವ ಬ್ಯಾಲಿಸ್ಟಿಕ್‌ ಮಿಸೈಲ್‌ ಡಿಫೆನ್ಸ್‌ (BMD)ನ ಎರಡನೇ ಹಂತದ ಎಡಿ-1 ಕ್ಷಿಪಣಿಯ (AD-1 Missile) ಪರೀಕ್ಷಾರ್ಥ ಉಡಾವಣೆ ಯಶಸ್ವಿಯಾಗಿದೆ.

ಒಡಿಶಾದ ಎಪಿಜೆ ಅಬ್ದುಲ್‌ ಕಲಾಂ ದ್ವೀಪದಿಂದ ಪ್ರತಿಬಂಧಕ ಕ್ಷಿಪಣಿಯನ್ನು ಪರೀಕ್ಷಾರ್ಥವಾಗಿ ಮಾಡಿದ ಉಡಾವಣೆ ಯಶಸ್ವಿಯಾಗಿದೆ. ಎಲ್ಲ ಹವಾಮಾನದಲ್ಲೂ ಕಾರ್ಯನಿರ್ವಹಿಸುವ ಕ್ಷಿಪಣಿಯು ಬಹುದೂರದ ಕ್ಷಿಪಣಿಗಳು ಹಾಗೂ ಯುದ್ಧವಿಮಾನಗಳನ್ನು ಹೊಡೆದುರುಳಿಸುವ ಸಾಮರ್ಥ್ಯವಿದೆ.

ಸೆನ್ಸಾರ್, ರೇಡಾರ್‌ಗಳನ್ನು ಕ್ಷಿಪಣಿ ಹೊಂದಿದ್ದು, ದೇಶೀಯವಾಗಿ ಅಭಿವೃದ್ಧಿಪಡಿಸಿದ ಸುಧಾರಿತ ಕಂಟ್ರೋಲ್‌ ಸಿಸ್ಟಮ್‌ಅನ್ನು ಅಳವಡಿಸಲಾಗಿದೆ. ಇದು ಸುಮಾರು ಒಂದು ಸಾವಿರ ಕಿಲೋಮೀಟರ್‌ನಿಂದ ಎರಡು ಸಾವಿರ ಕಿಲೋಮೀಟರ್‌ವರೆಗಿನ ಕ್ಷಿಪಣಿ ಹಾಗೂ ಯುದ್ಧವಿಮಾನಗಳನ್ನು ಹೊಡೆದುರುಳಿಸಲಿದೆ.

ಇದನ್ನೂ ಓದಿ | ISRO | ದೇಶದ ಮೊದಲ ವಾಣಿಜ್ಯಿಕ ಉಡಾವಣೆ ಯಶಸ್ವಿ, 36 ಉಪಗ್ರಹ ನಭಕ್ಕೆ ಹಾರಿಸಿ ಇಸ್ರೊ ಇತಿಹಾಸ

Exit mobile version