Site icon Vistara News

Cheetah | ಪ್ರಧಾನಿ ನರೇಂದ್ರ ಮೋದಿ ಜನ್ಮದಿನದಂದೇ ಭಾರತಕ್ಕೆ ಬರಲಿವೆ ಎಂಟು ಚೀತಾಗಳು!

cheetah

ನವದೆಹಲಿ: ಭಾರತದಲ್ಲಿ ೭೦ ವರ್ಷಗಳ ಹಿಂದೆಯೇ ನಶಿಸಿ ಹೋಗಿರುವ ಚೀತಾ (Cheetah) ಸಂತತಿಯ ಪುನರುಜ್ಜೀವನಗೊಳಿಸುವ ದಿಸೆಯಲ್ಲಿ ಕೇಂದ್ರ ಸರ್ಕಾರ ಮಹತ್ವದ ಹೆಜ್ಜೆ ಇರಿಸಿದ್ದು, ಪ್ರಧಾನಿ ನರೇಂದ್ರ ಮೋದಿ ಅವರ ಜನ್ಮದಿನವಾದ ಸೆಪ್ಟೆಂಬರ್‌ ೧೭ರಂದೇ ಭಾರತಕ್ಕೆ ಚೀತಾಗಳು ಬರಲಿವೆ.

“ನಮೀಬಿಯಾದಿಂದ ಸೆ.೧೭ರಂದು ಐದು ಗಂಡು ಹಾಗೂ ಮೂರು ಚೀತಾಗಳು ಬರಲಿವೆ. ಮಧ್ಯಪ್ರದೇಶದ ಕುನೋ ಪಾಲ್ಪುರ ರಾಷ್ಟ್ರೀಯ ಉದ್ಯಾನದಲ್ಲಿ ಚೀತಾಗಳು ಇರಲಿವೆ. ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಜನ್ಮದಿನದಂದು ಚೀತಾ ಸಂತತಿಯ ಪುನರುಜ್ಜೀವನ ಯೋಜನೆಗೆ ಚಾಲನೆ ನೀಡಲಿದ್ದಾರೆ” ಎಂದು ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್‌ ಸಿಂಗ್‌ ಚೌಹಾಣ್‌ ಹೇಳಿದ್ದಾರೆ.

ಮೊದಲ ಹಂತದಲ್ಲಿ ಎಂಟು ಚೀತಾಗಳು ಆಗಮಿಸುತ್ತಿವೆ. ಒಟ್ಟು ೨೫ ಚೀತಾಗಳನ್ನು ನಮೀಬಿಯಾದಿಂದ ತರಿಸಲಾಗುತ್ತಿದೆ. ೧೯೫೨ರಲ್ಲಿಯೇ ಭಾರತದಲ್ಲಿ ಚೀತಾ ಸಂತತಿ ಅಳಿದಿದೆ ಎಂದು ಘೋಷಣೆಯಾಗಿದೆ. ಆದಾಗ್ಯೂ, ೧೯೪೭ರಲ್ಲಿಯೇ ಛತ್ತೀಸ್‌ಗಢದಲ್ಲಿ ಮಹಾರಾಜ ರಾಮಾನುಜ ಪ್ರತಾಪ್‌ ಸಿಂಗ್‌ ಅವರು ಬೇಟೆಯಾಡಿದ ಚೀತಾವೇ ದೇಶದ ಕೊನೆಯ ಸಂತತಿ ಎಂದು ತಿಳಿದುಬಂದಿದೆ.

ಇದನ್ನೂ ಓದಿ | Operation Cheetah | ಇನ್ನೇನು ಕೈಗೆ ಸಿಕ್ತು ಎನ್ನುವಾಗಲೇ ಕಣ್ಣೆದುರಿಗೇ ಚಿರತೆ ಜಸ್ಟ್‌ ಪಾಸ್‌!

Exit mobile version