Site icon Vistara News

Republic Day: ಈ ಬಾರಿ ಗಣರಾಜ್ಯೋತ್ಸವದಂದು ರಾಷ್ಟ್ರಪತಿಗೆ ಸಿಗಲಿದೆ ಸ್ವದೇಶಿ ಕುಶಾಲ ತೋಪು ಗೌರವ; ಇದು ಹೇಗೆ?

Republic Day

ನವ ದೆಹಲಿ: ಈ ಸಲ ಗಣರಾಜ್ಯೋತ್ಸವದಂದು (Republic Day) ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಸಿಗಲಿರುವ ಕುಶಾಲ ತೋಪು ಗೌರವ (Gun Salute) ದೇಶೀಯ ಗೌರವ ಆಗಿದೆ. ಅಂದರೆ ಇಷ್ಟು ವರ್ಷಗಳ ಕಾಲ ಗಣರಾಜ್ಯೋತ್ಸವದಂದು ರಾಷ್ಟ್ರಪತಿಗಳಿಗೆ 21 ಗನ್​​ ಸೆಲ್ಯೂಟ್​ ಸಲ್ಲಿಸಲು, ಬ್ರಿಟಿಷ್​ ಕಾಲದ 25 ಪೌಂಡರ್​​ ಗನ್​​ಗಳನ್ನು ಬಳಸಲಾಗುತ್ತಿತ್ತು. ಈ ಗನ್​​ಗಳು 1940ರ ದಶಕದಲ್ಲಿ ಬ್ರಿಟಿಷ್​ ಆಡಳಿತದಲ್ಲಿ ತಯಾರಿಸಲ್ಪಟ್ಟವಾಗಿದ್ದವು, ಇಲ್ಲಿಯವರೆಗೂ ಆ ಮಾದರಿಯ ಗನ್​​ಗಳ ಮೂಲಕವೇ 21 ಸಲ ಕುಶಾಲ ತೋಪು ಸಿಡಿಸಿ ಗೌರವ ಸಲ್ಲಿಸಲಾಗುತ್ತಿತ್ತು. ಆದರೆ ಪ್ರಸಕ್ತ ಬಾರಿಯ ಗಣರಾಜ್ಯೋತ್ಸವದಂದು ಆ ಸಂಪ್ರದಾಯ ಮುರಿಯಲು ಕೇಂದ್ರ ಸರ್ಕಾರ ನಿರ್ಧಾರ ಮಾಡಿದೆ. ಅಂದರೆ ಭಾರತದಲ್ಲೇ ತಯಾರಾಗುವ ಫೀಲ್ಡ್​ ಗನ್​​ಗಳಾದ 105 ಎಂಎಂ ಗನ್​​ಗಳ ಮೂಲಕ ರಾಷ್ಟ್ರಪತಿಗೆ ಗನ್​ ಸೆಲ್ಯೂಟ್​ ನೀಡಲು ವ್ಯವಸ್ಥೆ ಮಾಡಲಾಗಿದೆ. ಈ ಮೂಲಕ ಮೇಕ್​ ಇನ್​ ಇಂಡಿಯಾ ಪ್ರಾಮುಖ್ಯತೆಯನ್ನು ಸಾರಲು ನಿರ್ಧರಿಸಲಾಗಿದೆ.

ಈ ಬಗ್ಗೆ ಸೇನೆಯ ದೆಹಲಿ ವಿಭಾಗದ ಸಿಬ್ಬಂದಿ ಮುಖ್ಯಸ್ಥ ಮೇಜರ್​ ಜನರಲ್​ ಭವಾನಿ ಕುಮಾರ್ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ್ದಾರೆ. ಅಷ್ಟೇ ಅಲ್ಲ,​ ‘ಸೇನಾ ಕ್ಷೇತ್ರವನ್ನು ನಾವು ಸ್ವದೇಶೀಕರಣ ಮಾಡಲು ಮುಂದಡಿ ಇಡುತ್ತಿದ್ದೇವೆ. ನಮ್ಮೆಲ್ಲ ಉಪಕರಣಗಳು, ಆಯುಧಗಳು, ಅಸ್ತ್ರಗಳು ಸಂಪೂರ್ಣ ಸ್ವದೇಶಿ ನಿರ್ಮಿತ ಆಗುವ ದಿನ ದೂರವಿಲ್ಲ. ಈಗಾಗಲೇ ಸೇನೆಯಲ್ಲಿ ಸಂಯೋಜನೆಗೊಂಡಿರುವ ಎಲ್ಲ ಸ್ವದೇಶಿ ನಿರ್ಮಿತ ಉಪಕರಣ, ಯುದ್ಧಾಸ್ತ್ರಗಳನ್ನೂ 74ನೇ ಗಣರಾಜ್ಯೋತ್ಸವದ ದಿನದಂದು ಪ್ರದರ್ಶಿಸಲಾಗುವುದು’ ಎಂದು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: Republic Day 2023: ಗಣರಾಜ್ಯೋತ್ಸವದಂದು ಕರ್ತವ್ಯ ಪಥದಲ್ಲಿ ಭಾರತೀಯ ನೌಕಾದಳ ಮುನ್ನಡೆಸಲಿರುವ ಮಂಗಳೂರಿನ ಕುವರಿ

Exit mobile version