ಮುಂಬೈ: ಭಾರತೀಯ ನೌಕಾಪಡೆಯ ಸುಧಾರಿತ ಲಘು ಹೆಲಿಕಾಪ್ಟರ್ (ALH Chopper) ಮುಂಬೈನ ಕರಾವಳಿ ತೀರದಲ್ಲಿ ಎಮರ್ಜನ್ಸಿ ಲ್ಯಾಂಡಿಂಗ್ ಮಾಡಲಾಗಿದೆ. ಕೂಡಲೇ ಧ್ರುವ ಹೆಲಿಕಾಪ್ಟರ್‌ನ ಮೂವರು ಸಿಬ್ಬಂದಿಯನ್ನು ನೌಕಾಪಡೆಯ ಗಸ್ತು ನೌಕೆಯ ಮೂಲಕ ರಕ್ಷಣೆ ಮಾಡಲಾಗಿದೆ.
“ಮುಂಬೈನ ಕರಾವಳಿಯಲ್ಲಿ ಭಾರತೀಯ ನೌಕಾಪಡೆಯ ಎಎಲ್‌ಎಚ್ ಪತನಗೊಂಡಿದೆ. ಕೂಡಲೇ ಶೋಧ ಕಾರ್ಯಾಚರಣೆ ಆರಂಭಿಸಿ ಮೂವರು ಸಿಬ್ಬಂದಿಯನ್ನು ರಕ್ಷಣೆ ಮಾಡಲಾಗಿದೆ. ಬಳಿಕ ಮೂವರ ವೈದ್ಯಕೀಯ ತಪಾಸಣೆ ನಡೆಸಲಾಗಿದ್ದು, ಯಾವುದೇ ಅಪಾಯ ಇಲ್ಲ” ಎಂದು ಭಾರತೀಯ ನೌಕಾಪಡೆ ಮಾಹಿತಿ ನೀಡಿದೆ.
ತುರ್ತು ಲ್ಯಾಂಡಿಂಗ್ ಎಂದರೆ ನೀರಿನಲ್ಲಿಯೇ ಲ್ಯಾಂಡ್ ಮಾಡುವುದಾಗಿದೆ. ಪ್ರಕರಣದ ಕುರಿತು ನೌಕಾಪಡೆಯು ತನಿಖೆಗೆ ಆದೇಶಿಸಿದೆ. ಕಳೆದ ವರ್ಷದ ಅಕ್ಟೋಬರ್‌ನಲ್ಲಿ ನೌಕಾಪಡೆಯ ಹೆಲಿಕಾಪ್ಟರ್ ಪತನವಾಗಿ ಐವರು ಸಿಬ್ಬಂದಿ ಮೃತಪಟ್ಟಿದ್ದರು.
ಇದನ್ನೂ ಓದಿ: Air India: ಯುಎಸ್ನಿಂದ ದೆಹಲಿಗೆ ಬರುತ್ತಿದ್ದ ಏರ್ ಇಂಡಿಯಾ ವಿಮಾನ ಸ್ವೀಡನ್ನಲ್ಲಿ ತುರ್ತು ಭೂಸ್ಪರ್ಶ