Site icon Vistara News

Indigo Airline: ವಿಮಾನದಲ್ಲಿ ಸಿಬ್ಬಂದಿಯೊಂದಿಗೆ ಅಸಭ್ಯವಾಗಿ ವರ್ತಿಸಿದ ವಿದೇಶಿಗ; ಏರ್​ಪೋರ್ಟ್​​ನಲ್ಲಿ ಇಳಿದ ಕೂಡಲೇ ಅರೆಸ್ಟ್​

IndiGo Flight

IndiGo removes fuel charge on tickets following reduction in ATF prices

ಮುಂಬೈ: ಮುಂಬೈಗೆ ಪ್ರಯಾಣಿಸುತ್ತಿದ್ದ ಸ್ವೀಡನ್‌ ದೇಶದ ನಾಗರಿಕನೊಬ್ಬ ವಿಮಾನದ (Indigo Airline) ಸಿಬ್ಬಂದಿಯೊಂದಿಗೆ ಅಸಭ್ಯವಾಗಿ ವರ್ತಿಸಿದ ಘಟನೆ ಗುರುವಾರ ನಡೆದಿದೆ. ಆ ವ್ಯಕ್ತಿ ಮುಂಬೈಗೆ ಬಂದಿಳಿಯುತ್ತಿದ್ದಂತೆಯೇ ಮುಂಬೈ ಪೊಲೀಸರು ಆತನನ್ನು ಬಂಧಿಸಿದ್ದಾರೆ.

ಇದನ್ನೂ ಓದಿ: Toll Hike: ದೇವನಹಳ್ಳಿ ವಿಮಾನ ನಿಲ್ದಾಣ ರಸ್ತೆಯಲ್ಲೂ ಟೋಲ್‌ ದರ ಏರಿಕೆ

ಕ್ಲಾಸ್‌ ರಡಿಕ್‌ ಹರಾಲ್ಡ್‌ ಜೋನಸ್‌ ವೆಸ್ಟ್‌ಬರ್ಗ್‌ ಹೆಸರಿನ ವ್ಯಕ್ತಿ ಗುರುವಾರ ಇಂಡಿಗೋ ಏರ್‌ಲೈನ್‌ನ ಬ್ಯಾಂಕಾಕ್‌ನಿಂದ ಮುಂಬೈಗೆ ಬರುವ ವಿಮಾನದಲ್ಲಿ ಪ್ರಯಾಣಿಸುತ್ತಿದ್ದ. ಆತ ವಿಮಾನದಲ್ಲಿ ತಿನ್ನುವುದಕ್ಕೆಂದು ಚಿಕನ್‌ ಖಾದ್ಯ ಒಂದನ್ನು ಆರ್ಡರ್‌ ಮಾಡಿದ್ದಾನೆ. ಅದರ ಹಣ ಪಡೆಯುವುದಕ್ಕೆಂದು ಸಿಬ್ಬಂದಿ ಆತನ ಬಳಿ ಹೋದಾಗ, ಕಾರ್ಡ್‌ ಸ್ವೈಪ್‌ ಮಾಡುವ ನೆಪದಲ್ಲಿ ಸಿಬ್ಬಂದಿಯ ಕೈ ಹಿಡಿದುಕೊಂಡಿದ್ದಾನೆ. ಈ ವಿಚಾರದಲ್ಲಿ ಸಿಬ್ಬಂದಿ ಖಂಡನೆ ವ್ಯಕ್ತಪಡಿಸಿದಾಗ ಆತ ಎದ್ದು ನಿಂತು ಬೈಯಲಾರಂಭಿಸಿದ್ದಾನೆ. ಆತ ತನ್ನ ಅಕ್ಕಪಕ್ಕದಲ್ಲಿ ಕುಳಿತಿದ್ದ ಪ್ರಯಾಣಿಕರಿಗೂ ತೊಂದರೆಯುಂಟು ಮಾಡಿದ್ದಾಗಿ ವರದಿಯಾಗಿದೆ.

ಈ ವಿಚಾರವನ್ನು ಸಿಬ್ಬಂದಿ ಮುಂಬೈ ಪೊಲೀಸರಿಗೆ ತಿಳಿಸಿದ್ದು, ವಿಮಾನ ಮುಂಬೈನಲ್ಲಿ ಭೂಸ್ಪರ್ಶ ಮಾಡುತ್ತಿದ್ದಂತೆಯೇ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಆರೋಪಿಯನ್ನು ಅಂಧೇರಿ ನಗರ ನ್ಯಾಯಾಲಯದಲ್ಲಿ ಹಾಜರು ಪಡಿಸಲಾಗಿದ್ದು, ಅಲ್ಲಿ ಆತನಿಗೆ ಜಾಮೀನು ನೀಡಲಾಗಿದೆ.

ಇದನ್ನೂ ಓದಿ: ಇಂಡಿಗೊ ವಿಮಾನವನ್ನು ಗಲೀಜು ಮಾಡಿದ ಕುಡುಕ ಪ್ರಯಾಣಿಕ; ಆತನ ವಾಂತಿ-ಮಲವನ್ನು ಸ್ವಚ್ಛಗೊಳಿಸಿದ ಯುವತಿ

ಕಳೆದ ಮೂರು ತಿಂಗಳಲ್ಲಿ ಭಾರತದಲ್ಲಿ ಇದೇ ರೀತಿಯಲ್ಲಿ ವಿಮಾನ ಸಿಬ್ಬಂದಿಗೆ ತೊಂದರೆ ಕೊಟ್ಟ ಆರೋಪದಲ್ಲಿ ಒಟ್ಟು ಎಂಟು ಪ್ರಯಾಣಿಕರನ್ನು ಬಂಧಿಸಲಾಗಿದೆ. 2017ರಿಂದ 2023ರ ಅವಧಿಯಲ್ಲಿ ವಿಮಾನದಲ್ಲಿ ಲೈಂಗಿಕ ದೌರ್ಜನ್ಯ ನಡೆದಿರುವ ಐದನೇ ಪ್ರಕರಣ ಇದಾಗಿದೆ.

Exit mobile version