Site icon Vistara News

Indira Gandhi: ಆರೆಸ್ಸೆಸ್‌ ನಾಯಕರ ಜತೆ ಉತ್ತಮ ಸಂಬಂಧ ಹೊಂದಿದ್ದ ಇಂದಿರಾ ಗಾಂಧಿ; ಈ ಪುಸ್ತಕದಲ್ಲಿ ಇನ್ನೇನಿದೆ?

Raja Marga column Indira Gandhi

Raja Marga column Indira Gandhi

ನವದೆಹಲಿ: ಜವಾಹರ ಲಾಲ್‌ ನೆಹರು ಅವರು ಪ್ರಧಾನಿಯಾಗಿದ್ದಾಗ ರಾಷ್ಟ್ರೀಯ ಸ್ವಯಂಸೇವಕ ಸಂಘದ (RSS) ಕಾರ್ಯಕರ್ತರನ್ನು ಗೌರವಿಸಿದ್ದರು ಎಂಬುದು ತಿಳಿದಿದೆ. ಆದರೆ, ಇಂದಿರಾ ಗಾಂಧಿ (Indira Gandhi) ಅವರು ಕೂಡ ಆರ್‌ಎಸ್‌ಎಸ್‌ ನಾಯಕರ ಜತೆ ಉತ್ತಮ ಸಂಬಂಧ ಹೊಂದಿದ್ದರು ಎಂಬುದು ಹೊಸ ಪುಸ್ತಕದಿಂದ ತಿಳಿದುಬಂದಿದೆ. ಹೌದು, ಪತ್ರಕರ್ತೆ ನೀರ್ಜಾ ಚೌಧರಿ (Neerja Chowdhury) ಅವರು ರಚಿಸಿರುವ “ಹೌ ಪ್ರೈಮ್‌ ಮಿನಿಸ್ಟರ್ಸ್‌ ಡಿಸೈಡ್”‌ (How Prime Ministers Decide) ಪುಸ್ತಕದಲ್ಲಿ ಈ ಕುರಿತು ಉಲ್ಲೇಖಿಸಲಾಗಿದೆ.

“ರಾಷ್ಟ್ರೀಯ ಸ್ವಯಂಸೇವಕ ಸಂಘ ನಾಯಕರ ಜತೆ ಇಂದಿರಾ ಗಾಂಧಿ ಅವರು ಉತ್ತಮ ಸಂಬಂಧ ಹೊಂದಿದ್ದರು. ಆರ್‌ಎಸ್‌ಎಸ್‌ ಮುಖ್ಯಸ್ಥ ಬಾಳಾಸಾಹೇಬ್‌ ದೇವರಸ್‌ ಅವರು ಇಂದಿರಾ ಗಾಂಧಿ ಅವರಿಗೆ ಪತ್ರ ಬರೆದಿದ್ದರು. ಸಂಜಯ್‌ ಗಾಂಧಿ ಮೂಲಕ ಸಂಪರ್ಕಿಸುತ್ತಿದ್ದರು. ಇದಕ್ಕೆ ಇಂದಿರಾ ಗಾಂಧಿ ಅವರೂ ಸಕಾರಾತ್ಮಕವಾಗಿ ಸ್ಪಂದಿಸುತ್ತಿದ್ದರು. ಆದರೆ, ಅವರು ಸಂಘದಿಂದ ಮಾತ್ರ ಅಂತರ ಕಾಯ್ದುಕೊಂಡಿದ್ದರು” ಎಂದು ತಿಳಿಸಲಾಗಿದೆ.

ಚುನಾವಣೆಯಲ್ಲಿ ಗೆಲ್ಲಲು ನೆರವು

ಇಂದಿರಾ ಗಾಂಧಿ ಅವರು ತುರ್ತು ಪರಿಸ್ಥಿತಿ ಬಳಿಕ ಮತ್ತೆ ಅಧಿಕಾರಕ್ಕೆ ಬರಲು ಆರ್‌ಎಸ್‌ಎಸ್‌ ನೆರವು ನೀಡಿದೆ ಎಂಬುದನ್ನೂ ಪುಸ್ತಕದಲ್ಲಿ ತಿಳಿಸಲಾಗಿದೆ. “1980ರ ಚುನಾವಣೆಯಲ್ಲಿ ಇಂದಿರಾ ಗಾಂಧಿ ಅವರು ಗೆಲುವು ಸಾಧಿಸಿ ಮತ್ತೆ ಅಧಿಕಾರಕ್ಕೆ ಬರಲು ಆರ್‌ಎಸ್‌ಎಸ್‌ ಸಹಾಯ ಮಾಡಿತು ಎಂಬುದಾಗಿ ಇಂದಿರಾ ಗಾಂಧಿ ಅವರ ಆಪ್ತ ಅನಿಲ್‌ ಬಾಲಿ ಹೇಳಿದ್ದಾರೆ” ಎಂದು ನೀರ್ಜಾ ಚೌಧರಿ ಬರೆದಿದ್ದಾರೆ.

“ಆರ್‌ಎಸ್‌ಎಸ್‌ ತಮ್ಮನ್ನು ಬೆಂಬಲಿಸುತ್ತದೆ ಎಂಬುದು ಇಂದಿರಾ ಗಾಂಧಿ ಅವರಿಗೆ ಗೊತ್ತಿತ್ತು. ಆದರೆ, ಅವರು ಎಲ್ಲೂ ಸಾರ್ವಜನಿಕವಾಗಿ ಇದನ್ನು ಹೇಳುತ್ತಿರಲಿಲ್ಲ. ಅಣ್ವಸ್ತ್ರ ಪರೀಕ್ಷೆ ಬಳಿಕ ಆರ್‌ಎಸ್‌ಎಸ್‌ ನಾಯಕರು ಇಂದಿರಾ ಗಾಂಧಿ ಅವರಿಗೆ ಪತ್ರ ಬರೆದು ಮೆಚ್ಚುಗೆ ವ್ಯಕ್ತಪಡಿಸಿದ್ದರು. ಹಾಗೆಯೇ, ಬಲಿಷ್ಠ ಸೇನೆ ಕಟ್ಟಬೇಕು ಎಂಬುದು ಆರ್‌ಎಸ್‌ಎಸ್‌ ನಾಯಕರ ಸಲಹೆಯಾಗಿತ್ತು” ಎಂದು ಪ್ರಸ್ತಾಪಿಸಲಾಗಿದೆ.

ಇದನ್ನೂ ಓದಿ: Priyanka Gandhi: ಅಜ್ಜಿ ಇಂದಿರಾ ಗಾಂಧಿ ಭೇಟಿ ನೀಡಿ 45 ವರ್ಷಗಳ ಬಳಿಕ ಶೃಂಗೇರಿಗೆ ಬಂದ ಪ್ರಿಯಾಂಕಾ ಗಾಂಧಿ

ಹಿಂದುತ್ವದಲ್ಲಿ ನಂಬಿಕೆ

“ಇಂದಿರಾ ಗಾಂಧಿ ಅವರು ಪಕ್ಷವನ್ನು ಹಿಂದುತ್ವದತ್ತ ವಾಲಿಸಲು ತೀರ್ಮಾನಿಸಿದ್ದರು. ಇದರಿಂದಾಗಿ ಅವರು ಮುಸ್ಲಿಮರ ವಿರೋಧವನ್ನೂ ಕಟ್ಟಿಕೊಳ್ಳುವಂತಾಯಿತು. 1980ರಲ್ಲಿ ಅಟಲ್‌ ಬಿಹಾರಿ ವಾಜಪೇಯಿ ಅವರು ಜಾತ್ಯತೀತ ನಾಯಕರಾಗಿ ಹೊರಹೊಮ್ಮಲು ಮುಂದಾದರೆ, ಇಂದಿರಾ ಗಾಂಧಿ ಅವರು ಹಿಂದುತ್ವದತ್ತ ವಾಲಿದರು” ಎಂದು ಪುಸ್ತಕದಲ್ಲಿ ಪ್ರಸ್ತಾಪಿಸಲಾಗಿದೆ.

Exit mobile version