Site icon Vistara News

ಎನ್​ಐಎ ಹೇಳಿದ್ದ ಅತ್ಯಂತ ಅಪಾಯಕಾರಿ ವ್ಯಕ್ತಿಯನ್ನು ಬಂಧಿಸಿದ ಇಂದೋರ್ ಪೊಲೀಸರು; ವಿಚಾರಣೆ ನಡೆಸಿದ ಮಹಾರಾಷ್ಟ್ರ ಎಟಿಎಸ್​

Indore Police Arrested Dangerous Man regarding whom NIA had emailed

#image_title

ಇಂದೋರ್​: ಪಾಕಿಸ್ತಾನ, ಚೀನಾದಲ್ಲಿ ಉಗ್ರ ತರಬೇತಿ ಪಡೆದ ಅತ್ಯಂತ ಅಪಾಯಕಾರಿ ವ್ಯಕ್ತಿ(Dangerous Man) ಯೊಬ್ಬ ಮುಂಬಯಿಗೆ ಆಗಮಿಸಲಿರುವ ಬಗ್ಗೆ ಮಾಹಿತಿ ಸಿಕ್ಕಿದೆ. ಈ ಬಗ್ಗೆ ಅಲರ್ಟ್ ಆಗಿರಿ ಎಂದು ಮುಂಬಯಿ ಪೊಲೀಸ್​ ಮತ್ತು ಇತರ ರಕ್ಷಣಾ ಏಜೆನ್ಸಿಗಳಿಗೆ ಎನ್​ಐಎ (ರಾಷ್ಟ್ರೀಯ ತನಿಖಾ ದಳ) ಅಧಿಕಾರಿಗಳು ಇಮೇಲ್ ಮೂಲಕ ಸೂಚನೆ ನೀಡಿದ್ದರು. ಆತನ ಹೆಸರು ಸರ್ಫರಾಜ್ ಮೆಮನ್ ಎಂದೂ ತಿಳಿಸಿದ್ದರು. ಇದೀಗ ಇಂದೋರ್ ಪೊಲೀಸರು ಆ ಅಪಾಯಕಾರಿ ಮನುಷ್ಯನನ್ನು ಬಂಧಿಸಿದ್ದಾರೆ. ಬಂಧಿತ ಸರ್ಫ್​ರಾಜ್​ ಮೆಮನ್​ ಸದ್ಯ ಚಂದನ್​ ನಗರ ಪೊಲೀಸ್ ಠಾಣೆಯಲ್ಲಿ ಇದ್ದು, ಆತನನ್ನು ವಿಚಾರಣೆ ಮಾಡಲಾಗುತ್ತಿದೆ.

ದೇಶ ವಿರೋಧಿ ಕೃತ್ಯ, ಭಯೋತ್ಪಾದಕ ಚಟುವಟಿಕೆಗಳ ತರಬೇತಿಯನ್ನು ಪಾಕಿಸ್ತಾನ, ಚೀನಾ, ಹಾಂಗ್​ಕಾಂಗ್​​ಗಳಲ್ಲಿ ಪಡೆದ ಸರ್ಫರಾಜ್​ ಮೆಮನ್​ ಮೂಲತಃ ಇಂದೋರ್​ನವನು ಎಂದು ಎನ್​ಐಎ ಅಧಿಕಾರಿಗಳು ಮುಂಬಯಿ ಪೊಲೀಸರಿಗೆ ಕಳಿಸಿದ್ದ ಇಮೇಲ್​ನಲ್ಲಿ ತಿಳಿಸಿದ್ದರು. ಜತೆಗೆ ಆತನ ಆಧಾರ್​ಕಾರ್ಡ್​, ಡ್ರೈವಿಂಗ್​ ಲೈಸೆನ್ಸ್​, ಪಾಸ್​ಪೋರ್ಟ್​​ ಕಾಪಿಗಳನ್ನೂ ಕಳಿಸಿದ್ದರು. ಮುಂಬಯಿ ಪೊಲೀಸರು, ಇಂದೋರ್ ಪೊಲೀಸರಿಗೂ ಈ ಬಗ್ಗೆ ಮಾಹಿತಿ ನೀಡಿ, ಅವರೂ ಅಲರ್ಟ್ ಆಗಿದ್ದರು. ಇದೀಗ ಮಧ್ಯಪ್ರದೇಶಕ್ಕೆ ಆಗಮಿಸಿದ ಸರ್ಫರಾಜ್​ ಮೆಮನ್​ನನ್ನು ಇಂದೋರ್ ಪೊಲೀಸರು ಅರೆಸ್ಟ್ ಮಾಡಿದ್ದು, ವಿಚಾರಣೆ ನಡೆಯುತ್ತಿದೆ.

ಇದನ್ನೂ ಓದಿ: Terror Politics : ಉಗ್ರರಿಗೆ ಬೆಂಬಲ ನೀಡುವ ಕಾಂಗ್ರೆಸ್ಸೇ ಒಂದು ಭಯೋತ್ಪಾದಕ ಸಂಘಟನೆ ಎಂದ ನಳಿನ್‌ ಕುಮಾರ್‌ ಕಟೀಲ್‌

ಇನ್ನು ವಿಚಾರಣೆ ವೇಳೆ ಆತ ತಾನು 12ವರ್ಷಗಳಿಂದ ಹಾಂಗ್​ಕಾಂಗ್​​ನಲ್ಲಿ ಇರುವುದಾಗಿ ಹೇಳಿಕೊಂಡಿದ್ದಾನೆ ಎಂದು ಮೂಲಗಳಿಂದ ಮಾಹಿತಿ ಲಭ್ಯವಾಗಿದೆ. ಮಹಾರಾಷ್ಟ್ರ ಉಗ್ರ ನಿಗ್ರಹ ದಳವೂ ಕೂಡ ಆತನನ್ನು ಒಂದು ಸುತ್ತಿನ ವಿಚಾರಣೆ ನಡೆಸಿದೆ. ಇದುವರೆಗಿನ ವಿಚಾರಣೆಯಲ್ಲಿ ಸರ್ಫ್​ರಾಜ್​ ಮೆಮನ್​ಗೆ ಭಯೋತ್ಪಾದಕ ಲಿಂಕ್ ಇರುವುದು ಪತ್ತೆಯಾಗಿಲ್ಲ. ಆದರೆ ಇಲ್ಲಿಗೇ ತನಿಖೆ ಬಿಡುವುದಿಲ್ಲ ಎಂದು ತನಿಖಾ ದಳ ಹೇಳಿದ್ದಾಗಿ ವರದಿಯಾಗಿದೆ.

Exit mobile version