Site icon Vistara News

ಪುಟ್ಟ ಮಗುವಿಗೆ ಅದೇನು ಸರ್ಜರಿ ಮಾಡಿ, ಓಡಿಹೋದನೋ ನಕಲಿ ವೈದ್ಯ; ಕೆಲವೇ ಹೊತ್ತಲ್ಲಿ ತೀವ್ರ ರಕ್ತಸ್ರಾವದಿಂದ ಸಾವು

Infant dies after Fake Doctor did surgery In Uttar Pradesh

#image_title

ಇಟಾಹ್​: ಎರಡೂವರೆ ತಿಂಗಳ ಪುಟ್ಟ ಮಗುವಿಗೆ ವೈದ್ಯನೊಬ್ಬ ಚಿಕ್ಕದಾದ ಸರ್ಜರಿ ಮಾಡಿದ. ಆದರೆ ಅದಾಗಿ ಕೆಲವೇ ಹೊತ್ತಲ್ಲಿ ಮಗು ತೀರಿಕೊಂಡಿದೆ. ವೈದ್ಯ ಎನ್ನಿಸಿಕೊಂಡವ ನಾಪತ್ತೆಯಾಗಿದ್ದಾನೆ. ಕುಟುಂಬದವರು ಆ ವೈದ್ಯನ ವಿರುದ್ಧ ದೂರು ಕೊಟ್ಟಿದ್ದು, ಆತನೊಬ್ಬ ನಕಲಿ ಡಾಕ್ಟರ್​ ಎಂದಿದ್ದಾರೆ. ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡು, ಆರೋಪಿಯ ಪತ್ತೆಗೆ ಬಲೆಬೀಸಿದ್ದಾರೆ.

ಉತ್ತರ ಪ್ರದೇಶದ ಇಟಾಹ್​​ನಲ್ಲಿ ದಂಪತಿ ತಮ್ಮ ಗಂಡು ಮಗುವಿಗೆ ಅನಾರೋಗ್ಯವೆಂದು ತಿಲಕ್​ ಸಿಂಗ್​ ಎಂಬ ವೈದ್ಯನ ಬಳಿ ಕರೆದುಕೊಂಡು ಹೋಗಿದ್ದರು. ಮಗುವನ್ನು ಒಳಗೆ ವೈದ್ಯರ ಬಳಿ ಬಿಟ್ಟಿದ್ದಾರೆ. ಆದರೆ ತಿಲಕ್​ ಸಿಂಗ್​ ಅದಕ್ಕೆ ಸರ್ಜರಿ ಮಾಡಿದ್ದಾನೆ. ಮಗುವಿಗೆ ಸರ್ಜರಿ ಮಾಡುವುದಾಗಿ ನಮಗೆ ಒಂದು ಮಾತು ಕೂಡ ಹೇಳಿಲ್ಲ ಎಂದು ಪಾಲಕರು ಆರೋಪಿಸಿದ್ದಾರೆ. ಮಗುವಿಗೆ ಅದೇನು ಆಪರೇಶನ್​ ಮಾಡಿದನೋ ಗೊತ್ತಿಲ್ಲ, ಬಳಿಕ ಅದಕ್ಕೆ ತೀವ್ರ ರಕ್ತಸ್ರಾವ ಆಯಿತು ಎಂದೂ ದೂರಿನಲ್ಲಿ ತಿಳಿಸಿದ್ದಾರೆ.

ಇದನ್ನೂ ಓದಿ: Child fell from Balcony : ಎರಡನೇ ಮಹಡಿಯ ಬಾಲ್ಕನಿಯಿಂದ ಬಿದ್ದು ಗಾಯಗೊಂಡಿದ್ದ 3 ವರ್ಷದ ಮಗು ಸಾವು

Exit mobile version