Site icon Vistara News

ನ್ಯುಮೋನಿಯಾದಿಂದ ಬಳಲುತ್ತಿದ್ದ 3ತಿಂಗಳ ಮಗುವಿಗೆ ಬಿಸಿಬಿಸಿ ಕಬ್ಬಿಣದ ರಾಡ್​ನಿಂದ ಚಿಕಿತ್ಸೆ; ನರಳಿ ಪ್ರಾಣಬಿಟ್ಟ ಶಿಶು

Infant Dies After give her to Hot Iron Rod Treatment for Pneumonia

#image_title

ಭೋಪಾಲ್​: ನ್ಯುಮೋನಿಯಾ ಜ್ವರದಿಂದ ಬಳಲುತ್ತಿದ್ದ 3 ತಿಂಗಳ ಹೆಣ್ಣು ಮಗುವೊಂದು, ಚಿಕಿತ್ಸಕಿಯೊಬ್ಬಳ ಕ್ರೂರ ಸ್ವರೂಪದ ಚಿಕಿತ್ಸೆಯಿಂದ ಮೃತಪಟ್ಟಿದೆ. ಮಧ್ಯಪ್ರದೇಶ (Madhya Pradesh)ದ ಶಹದೋಲ್ ಜಿಲ್ಲೆಯಲ್ಲಿ ಹೀಗೊಂದು ಅಮಾನವೀಯ ಘಟನೆ ನಡೆದಿದೆ. ಆಕೆ ಚಿಕಿತ್ಸೆಯ ಹೆಸರಲ್ಲಿ ಬಿಸಿಬಿಸಿಯಾದ ಕಬ್ಬಿಣದ ರಾಡ್​​ನಿಂದ ಮಗುವಿನ ಹೊಟ್ಟೆಯ ಮೇಲೆ 51 ಬಾರಿ ಕುಟ್ಟಿದ್ದಾಳೆ. ಇದರಿಂದಾಗಿ ಶಿಶುವಿನ ಆರೋಗ್ಯ ಇನ್ನಷ್ಟು ಹದಗೆಟ್ಟು, ಮೃತಪಟ್ಟಿದ್ದಾಗಿ ವರದಿಯಾಗಿದೆ.

ಈ ಬಗ್ಗೆ ಅಳಲು ತೋಡಿಕೊಂಡ ಮಗುವಿನ ತಾಯಿ ರೋಶಿಣಿ ಕೋಲ್​, ‘ನನ್ನ ಮಗಳಿಗೆ ಮೊದಲು ನಮ್ಮೂರಿನ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ಕೊಡಿಸಿದೆವು. ಆದರೆ ಗುಣಮುಖಳಾಗಲಿಲ್ಲ. ನಾನು ಎಷ್ಟೇ ಬೇಡವೆಂದರೂ ನನ್ನ ಮನೆಯವರೆಲ್ಲ ಸೇರಿ, ಅದೊಬ್ಬ ಚಿಕಿತ್ಸಕಿಯ ಬಳಿ ಕರೆದುಕೊಂಡು ಹೋದರು. ಆದರೆ ಆಕೆ ಬಿಸಿಬಿಸಿ ಕಬ್ಬಿಣದ ರಾಡ್​ನಿಂದ ಮಗುವಿನ ಹೊಟ್ಟೆಯ ಮೇಲೆ ತಟ್ಟಿದಳು. ಹೀಗೆ ಮಾಡುತ್ತಿದ್ದಾಗಲೂ ನಾನು ಬೇಡವೆಂದು ಆಕ್ಷೇಪ ವ್ಯಕ್ತಪಡಿಸಿದೆ. ಆದರೆ ಅವಳು ಕೇಳಲೇ ಇಲ್ಲ. ಈ ಚಿಕಿತ್ಸೆ ಕೊಟ್ಟರೆ ಮಾತ್ರ ನ್ಯುಮೋನಿಯಾ ಕಡಿಮೆಯಾಗುತ್ತದೆ ಎಂದು ಹೇಳಿದಳು’ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: IAF Fighter Jets Crash: ಮಧ್ಯಪ್ರದೇಶದಲ್ಲಿ ಐಎಎಫ್​ ವಿಮಾನ ಪತನ; ಮೃತಪಟ್ಟಿದ್ದು ಬೆಳಗಾವಿ ಮೂಲದ ವಿಂಗ್​ ಕಮಾಂಡರ್​

ಹೀಗೆ ಕಬ್ಬಿಣದ ರಾಡ್​ ಚಿಕಿತ್ಸೆಯ ಬಳಿಕ ಮಗುವಿನ ಆರೋಗ್ಯ ಇನ್ನಷ್ಟು ಹದಗೆಟ್ಟಿತು. ಉಸಿರಾಟವೇ ಕ್ಷೀಣವಾಯಿತು. ಕೂಡಲೇ ಅವಳನ್ನು ಶಹದೋಲ್​ ಜಿಲ್ಲಾಸ್ಪತ್ರೆಗೆ ದಾಖಲು ಮಾಡಲಾಯಿತು. ಆದರೆ ಬುಧವಾರ ರಾತ್ರಿ ಆಕೆ ಮೃತಪಟ್ಟಿದ್ದಾಳೆ. ನನ್ನ ಮಗು ತುಂಬ ನರಳಿತು ಎಂದೂ ರೋಶಿಣಿ ಕಣ್ಣೀರು ಹಾಕಿದ್ದಾರೆ.

ಘಟನೆ ಶಹದೋಲ್​ ಜಿಲ್ಲಾಧಿಕಾರಿ ವಂದನಾ ವೈದ್ಯ ಗಮನಕ್ಕೂ ಬಂದಿದೆ. ಈ ಬಗ್ಗೆ ಗಂಭೀರವಾಗಿ ತನಿಖೆ ನಡೆಸಲಾಗುತ್ತಿದೆ. ಮಹಿಳಾ ಚಿಕಿತ್ಸಕಳ ವಿರುದ್ಧ ಪ್ರಕರಣ ದಾಖಲಾಗಿದೆ ಎಂದು ಡಿಸಿ ವಂದನಾ ತಿಳಿಸಿದ್ದಾರೆ. ‘ಹೀಗೆ ಮೂಢನಂಬಿಕೆಯ ಕಾರಣದಿಂದ ಮಗುವಿಗೆ ಚಿಕಿತ್ಸೆ ವಿಳಂಬ ಮಾಡಿದ್ದಾರೆ. ನ್ಯುಮೋನಿಯಾ ಬಂದಾಗ ಎಷ್ಟಾಗತ್ತೋ ಅಷ್ಟು ಬೇಗ ಚಿಕಿತ್ಸೆ ನೀಡಬೇಕು. ಇಲ್ಲದೆ ಇದ್ದರೆ ಸೋಂಕು ಹರಡಿ, ಸಾವು ಉಂಟಾಗುತ್ತದೆ’ ಎಂದು ಹೇಳಿದ್ದಾರೆ.

Exit mobile version