Site icon Vistara News

Inspiring Story: ಬಂದೂಕು ಬೇಡ ಎಂದವಳ ಕೈಗೆ ಮತ್ತೆ ಬಂದೂಕು! ಆ ನಕ್ಸಲ್ ಹಿಂದಿರುವ ಕತೆ ಏನು?

#image_title

ಮುಂಬೈ: ಅದು 2015ರ ಕಾಲ. ಮಹಾರಾಷ್ಟ್ರದ ದೊಂಡಿಯಾ ಭಾಗದಲ್ಲಿ ಆಗಿನ್ನೂ 13 ವರ್ಷದವಳಾಗಿದ್ದ ರಾಜುಲಾ ಹಿದಾಮಿಯನ್ನು ನಕ್ಸಲರು ಅಪಹರಣ ಮಾಡಿದ್ದರು. ಕೊರ್ಚಿ-ಕುರ್ಖೇಡ-ಖೋಬ್ರಮೆಂಡಾ ದಲಂ (ಕೆಕೆಕೆ)ಗೆ ಸೇರಿಸಿಕೊಂಡು ಆಕೆಯನ್ನು ಬಂಡಾಯ ಚಳವಳಿಗೆ ಬಳಸಿಕೊಳ್ಳುತ್ತಿದ್ದರು. ಅದಾದ ನಂತರ 2018ರಲ್ಲಿ ಪೊಲೀಸರ ಮುಂದೆ ಶರಣಾದ ರಾಜುಲಾ ಇದೀಗ ಪೊಲೀಸ್‌ ಆಗುವ ಕನಸಿನತ್ತ (Inspiring Story) ಸಾಗಲಾರಂಭಿಸಿದ್ದಾಳೆ.

ರಾಜುಲಾ ಎಚ್‌ಎಸ್‌ಸಿ ಪರೀಕ್ಷೆ ಬರೆದಿದ್ದು ಅದರ ಫಲಿತಾಂಶ ಗುರುವಾರ ಹೊರಬಿದ್ದಿದೆ. ಅದರಲ್ಲಿ ಆಕೆ 600 ಅಂಕಗಳಲ್ಲಿ 275 ಅಂಕ ಪಡೆದಿದ್ದಾಳೆ. ಶೇ. 46 ಅಂಕ ಗಳಿಸಿ ಪೊಲೀಸ್‌ ಅಧಿಕಾರಿಯಾಗುವ ಕನಸನ್ನು ಇನ್ನಷ್ಟು ಬಲಿಷ್ಠಗೊಳಿಸಿಕೊಂಡಿದ್ದಾಳೆ. ಅದರಲ್ಲೂ ಇತಿಹಾಸ ವಿಷಯದಲ್ಲಿ ಆಕೆ ಒಟ್ಟು 64 ಅಂಕ ಗಳಿಸಿದ್ದಾಳೆ.

ಇದನ್ನೂ ಓದಿ: Viral News : ಈಗಲೂ ಬಡತನದಲ್ಲೇ ಬೇಯುತ್ತಿದ್ದಾರೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಕೀರ್ತಿ ತಂದು ಕೊಟ್ಟ ʼಸ್ಮೈಲ್‌ ಪಿಂಕಿʼ
ಕೊರ್ಚಿ-ಕುರ್ಖೇಡ-ಖೋಬ್ರಮೆಂಡಾ ದಲಂ ಜತೆಗಿದ್ದಾಗ ಆಕೆ ಶಸ್ತ್ರಾಸ್ತ್ರ ಮತ್ತು ಆಯುಧಗಳನ್ನು ಬಳಸುವ ತರಬೇತಿ ಪಡೆದಿದ್ದಳು. ಭದ್ರತಾ ಪಡೆಗಳೊಂದಿಗೆ ಭೀಕರವಾದ ಗುಂಡಿನ ಕಾಳಗದಲ್ಲಿಯೂ ಭಾಗಿಯಾಗಿದ್ದಳು. ಆಕೆಯ ವಿರುದ್ಧ ಸುಮಾರು 9 ಅಪರಾಧಗಳು ದಾಖಲಾಗಿದ್ದವು.

ಆದರೆ 2018ರಲ್ಲಿ ಪೊಲೀಸರ ಮುಂದೆ ಶರಣಾದ ನಂತರ ಆಕೆ ಅಧ್ಯಯನವನ್ನು ಪುನರಾರಂಭಿಸಿದ್ದಾಳೆ. ಎಸ್‌ಎಸ್‌ಎಸ್‌ ಪರೀಕ್ಷೆಯಲ್ಲಿ ಶೇ.40 ಅಂಕಗಳೊಂದಿಗೆ ತೇರ್ಗಡೆಯಾಗಿದ್ದಾಳೆ. ಗೊಂಡಿಯಾದ ದಿಯೋರಿ ನಕ್ಸಲ್‌ ಸೆಲ್‌ನಲ್ಲಿ ಆಕೆಗೆ ಮಾರ್ಗದರ್ಶನ ನೀಡಲಾಗಿದೆ. ಇದೀಗ ಆಕೆ ಎಚ್‌ಎಸ್‌ಸಿ ಪರೀಕ್ಷೆಯಲ್ಲಿ ತೇರ್ಗಡೆಯಾಗಿರುವುದರಿಂದ ಪೂರ್ತಿ ಸೆಲ್‌ ಸಂತಸದಿಂದ ತುಂಬಿದೆ.

ಇದನ್ನೂ ಓದಿ: Viral News: ಬೇಕರಿಯೊಳಗೆ ನುಗ್ಗಿದ ಕರಡಿ! 60 ಕಪ್‌ಕೇಕ್‌ ಹಾಳು ಕೇಕೆ ಹಾಕಿತು
ಸದ್ಯ ರಾಜುಲಾ MSCIT ಮಾಡುತ್ತಿದ್ದಾಳೆ. ಹಾಗೆಯೇ ಪೊಲೀಸ್ ನೇಮಕಾತಿಯಲ್ಲಿ ತರಬೇತಿಯನ್ನೂ ಪಡೆಯುತ್ತಿದ್ದಾಳೆ. ಆಕೆಗೆ ಸಬ್ ಇನ್ಸ್‌ಪೆಕ್ಟರ್ ಆಗುವ ಕನಸಿದೆ. ಅದನ್ನು ನನಸು ಮಾಡುವತ್ತ ಪ್ರಯತ್ನಿಸಲಾಗುವುದು ಎಂದು ಆಕೆಗೆ ಮಾರ್ಗದರ್ಶನ ನೀಡುತ್ತಿರುವ ಅಧಿಕಾರಿಗಳು ತಿಳಿಸಿದ್ದಾರೆ.

Exit mobile version