Site icon Vistara News

International Women’s Day : ಏರ್‌ ಇಂಡಿಯಾದಲ್ಲಿ ಅತಿ ಹೆಚ್ಚು ಮಹಿಳಾ ಪೈಲಟ್‌; ದಾಖಲೆ ಬರೆದ ಸಂಸ್ಥೆ

#image_title

ನವದೆಹಲಿ: ಟಾಟಾ ಗ್ರೂಪ್ಸ್‌ ಮಾಲಿಕತ್ವದ ಏರ್‌ ಇಂಡಿಯಾದಲ್ಲಿ ಒಟ್ಟಾರೆಯಾಗಿ 1,825 ಪೈಲಟ್‌ಗಳಿದ್ದು, ಅದರಲ್ಲಿ ಶೇ.15 ಮಹಿಳೆಯರೇ ಆಗಿದ್ದಾರೆ. ಇದು ಜಗತ್ತಿನಲ್ಲೇ ಅತಿ ಹೆಚ್ಚು ಮಹಿಳಾ ಪೈಲಟ್‌ಗಳನ್ನು ಹೊಂದಿದ ಸಂಸ್ಥೆಯಾಗಿದೆ. ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯ (International Women’s Day) ಸಮಯದಲ್ಲಿ ಟಾಟಾ ಗ್ರೂಪ್ಸ್‌ ಈ ಮಾಹಿತಿಯನ್ನು ಹಂಚಿಕೊಂಡಿದೆ.

ಇದನ್ನೂ ಓದಿ: Air India hiring : ಏರ್‌ ಇಂಡಿಯಾದಿಂದ 900 ಪೈಲಟ್‌ಗಳು, 4,200 ಸಿಬ್ಬಂದಿಗಳ ನೇಮಕ ಶೀಘ್ರ
ಏರ್‌ ಇಂಡಿಯಾದಲ್ಲಿ 1825 ಪೈಲಟ್‌ಗಳ ಪೈಕಿ ಶೇ.15 ಅಂದರೆ 275 ಮಹಿಳಾ ಪೈಲಟ್‌ಗಳಿದ್ದಾರೆ. ಈ ಮೂಲಕ ದೇಶದಲ್ಲಿಯೇ ಅತಿ ಹೆಚ್ಚು ಮಹಿಳಾ ಪೈಲಟ್‌ಗಳನ್ನು ಹೊಂದಿರುವ ಸಂಸ್ಥೆ ಎನ್ನುವ ಕೀರ್ತಿಯನ್ನು ಏರ್‌ ಇಂಡಿಯಾ ಪಡೆದುಕೊಂಡಿದೆ. ಏರ್‌ ಇಂಡಿಯಾದಲ್ಲಿರುವ ಒಟ್ಟಾರೆ ಸಿಬ್ಬಂದಿಗಳಲ್ಲಿ ಶೇ.40 ಹೆಣ್ಣು ಮಕ್ಕಳೇ ಇದ್ದಾರೆ. ಅದಲ್ಲದೆ, ಸಂಸ್ಥೆಯು ಕೇವಲ ಮಹಿಳಾ ಸಿಬ್ಬಂದಿಯೇ ಇರುವ ಒಟ್ಟು 90 ವಿಮಾನಗಳನ್ನು ಹಾರಾಟ ಮಾಡಿಸುತ್ತಿದೆ ಎಂದೂ ಹೇಳಿಕೊಂಡಿದೆ.‌

ಮಾರ್ಚ್‌ 1ರಿಂದ ಸಂಪೂರ್ಣ ಮಹಿಳಾ ಸಿಬ್ಬಂದಿಯೇ ಇರುವ ವಿಮಾನಗಳ ಹಾರಾಟ ಆರಂಭವಾಗಿದೆ. ಏರ್‌ ಇಂಡಿಯಾದಲ್ಲಿ 40 ವಿಮಾನಗಳು ಸಂಪೂರ್ಣ ಮಹಿಳಾ ಸಿಬ್ಬಂದಿಯೊಂದಿಗೆ ದೇಶೀಯ ಮತ್ತು ಅಂತಾರಾಷ್ಟ್ರೀಯ ಹಾರಾಟ ನಡೆಸುತ್ತುದೆ. ಎಐ ಎಕ್ಸ್‌ಪ್ರೆಸ್‌ನಲ್ಲಿ 10 ವಿಮಾನಗಳು ಸಂಪೂರ್ಣ ಮಹಿಳಾ ಸಿಬ್ಬಂದಿಯೊಂದಿಗೆ ಅಂತಾರಾಷ್ಟ್ರೀಯ ಪ್ರಯಾಣ ಮಾಡುತ್ತಿದೆ. ಹಾಗೆಯೇ ಏರ್‌ ಏಷ್ಯಾದಲ್ಲಿ 40 ವಿಮಾನಗಳು ಸಂಪೂರ್ಣ ಮಹಿಳಾ ಸಿಬ್ಬಂದಿಯೊಂದಿಗೆ ದೇಶೀಯ ಹಾರಾಟ ನಡೆಸುತ್ತಿದೆ ಎಂದು ಸಂಸ್ಥೆ ಮಾಹಿತಿ ಕೊಟ್ಟಿದೆ.

ಇದನ್ನೂ ಓದಿ: IAF Fighter Jets Crash: ಬೆಳಗಾವಿಯ ಮೃತ ಪೈಲಟ್‌ ಹನುಮಂತರಾವ್ ಸಾರಥಿ ನಿವಾಸದಲ್ಲಿ ಮುಗಿಲು ಮುಟ್ಟಿದ ಆಕ್ರಂದನ

“ಭಾರತವು ವಾಣಿಜ್ಯ ವಿಮಾನಗಳ ಪೈಕಿ ಹೆಚ್ಚು ಮಹಿಳಾ ಪೈಲಟ್‌ಗಳನ್ನು ಹೊಂದಿರುವ ರಾಷ್ಟ್ರ ಎನ್ನುವ ಖ್ಯಾತಿಯನ್ನು ಪಡೆದುಕೊಂಡಿದೆ. ಹೆಚ್ಚಿನ ಭಾರತೀಯ ಮಹಿಳೆಯರು ವಾಯುಯಾನದಲ್ಲಿ ವೃತ್ತಿಜೀವನವನ್ನು ಮುಂದುವರಿಸುತ್ತಿರುವುದರಿಂದಾಗಿ, ನಾವು ಈ ಕ್ಷೇತ್ರದಲ್ಲಿ ಲಿಂಗ ಸಮಾನತೆಯನ್ನು ಸಾಧಿಸುತ್ತಿದ್ದೇವೆ. ಇಂದು ಏರ್ ಇಂಡಿಯಾದಲ್ಲಿ ನಮ್ಮೊಂದಿಗೆ ಮಹಿಳಾ ಉದ್ಯೋಗಿಗಳು ಇರುವುದರ ಬಗ್ಗೆ ಹೆಮ್ಮೆಪಡುತ್ತೇವೆ” ಎಂದು ಏರ್‌ ಇಂಡಿಯಾದ ಸಿಇಒ ಮತ್ತು ವ್ಯವಸ್ಥಾಪಕ ನಿರ್ದೇಶಕರಾಗಿರುವ ಕ್ಯಾಂಪ್ಬೆಲ್‌ ವಿಲ್ಸನ್‌ ಹೇಳಿದ್ದಾರೆ.

Exit mobile version