Site icon Vistara News

International Yoga Day 2024: ಸಶಸ್ತ್ರ ಪಡೆಗಳಿಂದ ಮೈಕೊರೆಯುವ ಹಿಮ ಪರ್ವತದಲ್ಲೂ ಯೋಗ ದಿನಾಚರಣೆ; ವಿಡಿಯೊ ನೋಡಿ

International Yoga Day 2024

ಲಡಾಖ್: ಅಂತಾರಾಷ್ಟ್ರೀಯ ಯೋಗ ದಿನಾಚರಣೆಯ (International Yoga Day 2024) ಅಂಗವಾಗಿ ಭಾರತೀಯ ಸಶಸ್ತ್ರ ಪಡೆಗಳು (Indian armed forces) ಲೇಹ್ (Leh), ಲಡಾಖ್ (Ladakh) ಮತ್ತು ಸಿಕ್ಕಿಂನಲ್ಲಿ (Sikkim) ಯೋಗ ಪ್ರದರ್ಶನ ಮಾಡಿದರು. ಭಾರತೀಯ ಸೇನೆ, ಐಟಿಬಿಪಿ ಸಿಬ್ಬಂದಿ, ಇತರ ಪಡೆಗಳು ಸೇರಿದಂತೆ ಭಾರತೀಯ ಸಶಸ್ತ್ರ ಪಡೆಗಳು ಭಾಗವಹಿಸಿದ್ದವು. ಪೂರ್ವ ಲಡಾಖ್, ಸಿಕ್ಕಿಂ, ಉತ್ತರದ ಗಡಿಭಾಗ ಸೇರಿದಂತೆ ವಿವಿಧೆಡೆ ಸಶಸ್ತ್ರ ಸಿಬ್ಬಂದಿ ಯೋಗ ಪ್ರದರ್ಶಿಸಿದರು.

ಐಟಿಬಿಪಿ ಸಿಬ್ಬಂದಿ 10 ನೇ ಅಂತಾರಾಷ್ಟ್ರೀಯ ಯೋಗ ದಿನದಂದು ಉತ್ತರ ಸಿಕ್ಕಿಂನ ಮುಗುಥಾಂಗ್ ಉಪ ವಲಯದಲ್ಲಿ 15,000 ಅಡಿಗಳಿಗಿಂತ ಹೆಚ್ಚು ಎತ್ತರದಲ್ಲಿ ಯೋಗ ಪ್ರದರ್ಶಿಸಿದರು.


ಭಾರತೀಯ ಸೇನೆಯ ಸಿಬ್ಬಂದಿ ಉತ್ತರದ ಗಡಿಯಲ್ಲಿ ಮಂಜುಗಡ್ಡೆ ಪರ್ವತದ ಮೇಲೆ ಯೋಗವನ್ನು ಪ್ರದರ್ಶಿಸಿದರು.


ಈ ಸಂದರ್ಭದಲ್ಲಿ ಪೂರ್ವ ಲಡಾಖ್‌ನಲ್ಲಿ ಸೇನಾ ಪಡೆಗಳು ಯೋಗ ಪ್ರದರ್ಶನವನ್ನೂ ಮಾಡಿದರು.


ಸಿಕ್ಕಿಂ ಹೊರತಾಗಿ, ಲೇಹ್‌ನ ಪ್ಯಾಂಗೊಂಗ್ ತ್ಸೋದಲ್ಲಿ ಐಟಿಬಿಪಿ ಸಿಬ್ಬಂದಿ ಯೋಗ ಪ್ರದರ್ಶಿಸಿದರು.

ಇದನ್ನೂ ಓದಿ: International Yoga Day 2024: ಯೋಗ ದಿನಚರಿಯ ಭಾಗವಾಗಲಿ: ಶ್ರೀನಗರದಲ್ಲಿ ಪ್ರಧಾನಿ ನರೇಂದ್ರ ಮೋದಿ

ಕಾಶ್ಮೀರದ ಶ್ರೀನಗರದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಯೋಗ ದಿನಾಚರಣೆಗೆ ಚಾಲನೆ ನೀಡಿದ್ದು, ಪ್ರಧಾನಿ ಮೋದಿ ಅವರೊಂದಿಗೆ ಮುಖ್ಯಮಂತ್ರಿಗಳು, ಕೇಂದ್ರ ಸಚಿವರು ಪಾಲ್ಗೊಂಡಿದ್ದರು.

ಶ್ರೀನಗರದ ಎಸ್‌ಕೆಐಸಿಸಿಯಲ್ಲಿ 10ನೇ ಅಂತಾರಾಷ್ಟ್ರೀಯ ಯೋಗ ದಿನದ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ ಭಾಗವಹಿಸಿ ಸಭೆಯನ್ನುದ್ದೇಶಿಸಿ ಮಾತನಾಡಿದರು. ಬಳಿಕ ಯೋಗಾಸನದಲ್ಲಿ ಪಾಲ್ಗೊಂಡರು.

ಈ ವರ್ಷದ ಯೋಗ ದಿನದ ಕಾರ್ಯಕ್ರಮವು ಯುವ ಮನಸ್ಸುಗಳು ಮತ್ತು ದೇಹದ ಮೇಲೆ ಯೋಗದ ಆಳವಾದ ಪ್ರಭಾವವನ್ನು ಒತ್ತಿಹೇಳುತ್ತದೆ. ಈ ಆಚರಣೆಯು ಯೋಗದ ಅಭ್ಯಾಸದಲ್ಲಿ ಸಾವಿರಾರು ಜನರನ್ನು ಒಂದುಗೂಡಿಸುವ ಗುರಿಯನ್ನು ಹೊಂದಿದೆ, ಜಾಗತಿಕ ಮಟ್ಟದಲ್ಲಿ ಆರೋಗ್ಯ ಮತ್ತು ಕ್ಷೇಮವನ್ನು ಉತ್ತೇಜಿಸುತ್ತದೆ.

2015 ರಿಂದ ಪ್ರಧಾನಿ ಮೋದಿ ಅವರು ದೆಹಲಿಯ ಕರ್ತವ್ಯ ಪಥ್, ಚಂಡೀಗಢ, ಡೆಹ್ರಾಡೂನ್, ರಾಂಚಿ, ಲಕ್ನೋ, ಮೈಸೂರು ಮತ್ತು ನ್ಯೂಯಾರ್ಕ್‌ನಲ್ಲಿರುವ ವಿಶ್ವಸಂಸ್ಥೆಯ ಪ್ರಧಾನ ಕಚೇರಿ ಸೇರಿದಂತೆ ವಿವಿಧ ಸುಪ್ರಸಿದ್ದ ಸ್ಥಳಗಳಲ್ಲಿ ಅಂತಾರಾಷ್ಟ್ರೀಯ ಯೋಗ ದಿನಾಚರಣೆಗಳಲ್ಲಿ ಪಾಲ್ಗೊಂಡಿದ್ದಾರೆ.

Exit mobile version