ನವ ದೆಹಲಿ: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO) ಇಂದು ಮೂರು ಉಪಗ್ರಹಗಳನ್ನು ಪಿಎಸ್ಎಲ್ವಿ-ಸಿ53 ಮೂಲಕ ಬಾಹ್ಯಾಕಾಶಕ್ಕೆ ಉಡಾವಣೆ ಮಾಡಲಿದೆ. PSLV-C53 ಎಂಬುದು ಇಸ್ರೋದ ಪೋಲಾರ್ ಉಪಗ್ರಹ ಉಡಾವಣಾ ವಾಹನದ 55ನೇ ಮಿಷನ್ ಮತ್ತು ಇಸ್ರೋದ ವಾಣಿಜ್ಯ ವಿಭಾಗವಾದ ನ್ಯೂಸ್ಪೇಸ್ ಇಂಡಿಯಾ ಲಿಮಿಟೆಡ್ (NSIL)ನ ಎರಡನೇ ವಾಣಿಜ್ಯ ಉದ್ದೇಶಿತ ಮಿಷನ್ ಆಗಿದೆ.
ಈ ಮೂರು ಉಪಗ್ರಹಗಳು ಸಿಂಗಾಪುರಕ್ಕೆ ಸೇರಿದ್ದಾಗಿದ್ದು, ಇಂದು ಸಂಜೆ 6 ಗಂಟೆಗೆ ಶ್ರೀಹರಿಕೋಟದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಪಿಎಸ್‌ಎಲ್‌ವಿ ವಾಹಕದ ಮೂಲಕ ಉಡ್ಡಯನಗೊಳ್ಳಲಿವೆ. ಈ ವಿಚಾರವನ್ನು ಇಸ್ರೋ ಬುಧವಾರ (ಜೂ.29) ಟ್ವೀಟ್ ಮೂಲಕ ತಿಳಿಸಿದೆ. ಮೂರು ಉಪಗ್ರಹಗಳಲ್ಲಿ DS-EO, NeuSAR ಗಳು ರಿಪಬ್ಲಿಕ್ ಆಫ್ ಕೊರಿಯಾದ ಉಪಗ್ರಹ ನಿರ್ಮಾಣ ಕಂಪನಿಯಾದ ಸ್ಟಾರ್ಕ್ ಇನಿಶಿಯೇಟಿವ್(Starec Initiative)ದಿಂದ ನಿರ್ಮಿಸಲ್ಪಟ್ಟವು ಮತ್ತು ಸಿಂಗಾಪುರಕ್ಕೆ ಸೇರಿದವು. ಇನ್ನೊಂದು ಸಿಂಗಾಪುರದ ನಾನ್ಯಾಂಗ್ ತಾಂತ್ರಿಕ ವಿಶ್ವವಿದ್ಯಾಲಯ ಅಭಿವೃದ್ಧಿಪಡಿಸಿದ 2.8 ಕೆಜಿ ಸ್ಕೂಬ್ 1 ಆಗಿದೆ.
ಇದನ್ನೂ ಓದಿ: ಅನಂತ್ ಟೆಕ್ನಾಲಜೀಸ್‌ನಿಂದ ಬೆಂಗಳೂರಿನಲ್ಲಿ ಬಾಹ್ಯಾಕಾಶ ನೌಕೆ ಉತ್ಪಾದನಾ ಕೇಂದ್ರ ಆರಂಭ