ನ್ಯೂಯಾರ್ಕ್: ವಿದೇಶಾಂಗ ವ್ಯವಹಾರಗಳ ಸಚಿವ ಜೈಶಂಕರ್ ಅವರು ಅಮೆರಿಕದ ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಿದ್ದು, ನರೇಂದ್ರ ಮೋದಿ ಅವರ ನಾಯಕತ್ವ, ಬಿಕ್ಕಟ್ಟು ಬಗೆಹರಿಸುವ ಹಾಗೂ ದೊಡ್ಡ ನಿರ್ಧಾರಗಳನ್ನು ತೆಗೆದುಕೊಳ್ಳುವ ಕುರಿತು ಮಾತನಾಡಿದ್ದಾರೆ. “ನರೇಂದ್ರ ಮೋದಿ (Narendra Modi) ಅವರಿಗೆ ದೊಡ್ಡ ನಿರ್ಧಾರಗಳನ್ನು ತೆಗೆದುಕೊಳ್ಳುವುದು ಹಾಗೂ ತೆಗೆದುಕೊಂಡ ಬಳಿಕ ಅವುಗಳ ಪರಿಣಾಮವನ್ನು ಎದುರಿಸುವುದೂ ಗೊತ್ತು” ಎಂದಿದ್ದಾರೆ.
“ನರೇಂದ್ರ ಮೋದಿ ಅವರನ್ನು ಭೇಟಿಯಾಗುವ ಮೊದಲೇ ಅವರು ನನಗೆ ಇಷ್ಟವಾಗಿದ್ದರು. ಭೇಟಿಯಾದ ಬಳಿಕವಂತೂ ನನ್ನ ಪಾಲಿಗೆ ಅವರು ಅಚ್ಚರಿಯ ವ್ಯಕ್ತಿ ಎನಿಸಿದರು. ಬೆಳಗ್ಗೆ ೭.೩೦ಕ್ಕೆ ಅವರು ಕೆಲಸ ಆರಂಭಿಸುತ್ತಾರೆ ಹಾಗೂ ಇಡೀ ದಿನ ಎಡೆಬಿಡದೆ ಕಾರ್ಯನಿರ್ವಹಿಸುತ್ತಾರೆ. ರಾಷ್ಟ್ರದ ಹಿತಾಸಕ್ತಿ ಮೇಲೆ ಅವರಿಗೆ ಅಪಾರ ಕಾಳಜಿ ಇದೆ” ಎಂದು ತಿಳಿಸಿದ್ದಾರೆ.
“ಎಲ್ಲ ವಿಧಗಳಲ್ಲಿಯೂ ಯೋಚಿಸುವ ಶಕ್ತಿ ಪ್ರಧಾನಿ ಅವರಿಗಿದೆ. ಹಾಗೆಯೇ, ಕೆಲವೊಮ್ಮೆ ಅವರು ತಾವೇನು ಮಾತನಾಡಬೇಕು ಎಂಬುದಕ್ಕಿಂತ ಏನು ಮಾತನಾಡಬಾರದು ಎಂದು ಸಹ ಕೇಳುತ್ತಾರೆ. ಅಷ್ಟರಮಟ್ಟಿಗೆ ಎಲ್ಲ ವಿಧದಲ್ಲಿಯೂ ಅವರು ಯೋಚಿಸುತ್ತಾರೆ” ಎಂದು ಹೇಳಿದ್ದಾರೆ.
ಇದನ್ನೂ ಓದಿ | Jaage Ho | ಮಧ್ಯರಾತ್ರಿ ಮೋದಿ ಕರೆ ಮಾಡಿ ಎಚ್ಚರವಾಗಿದ್ದೀರಾ ಎಂದು ಜೈಶಂಕರ್‌ಗೆ ಕೇಳಿದ್ದೇಕೆ?