Site icon Vistara News

ಜಮ್ಮು ಕಾಶ್ಮೀರದಲ್ಲಿ ಎನ್‌ಕೌಂಟರ್‌; ಪಾಕಿಸ್ತಾನದ ಇಬ್ಬರು ಸೇರಿ 4 ಭಯೋತ್ಪಾದಕರ ಹತ್ಯೆ

Kashmir Encounter

ಕುಲಗಾಂವ್‌: ಜಮ್ಮು-ಕಾಶ್ಮೀರದ ಎರಡು ಕಡೆಗಳಲ್ಲಿ ಭಾನುವಾರ ಪ್ರತ್ಯೇಕ ಎನ್‌ಕೌಂಟರ್‌ ನಡೆದಿದ್ದು ಒಟ್ಟು ನಾಲ್ವರು ಉಗ್ರರ ಹತ್ಯೆಯಾಗಿದೆ. ಅವರಲ್ಲಿ ಇಬ್ಬರು ಪಾಕಿಸ್ತಾನ ಮೂಲದವರು ಎಂದು ವರದಿಯಾಗಿದೆ. ದಕ್ಷಿಣ ಕಾಶ್ಮೀರದ ಕುಲಗಾಂವ್‌ ಮತ್ತು ಉತ್ತರ ಕಾಶ್ಮೀರದ ಕುಪ್ವಾರಾದಲ್ಲಿ ಭಯೋತ್ಪಾದಕರ ವಿರುದ್ಧ ಕಾರ್ಯಾಚರಣೆ ನಡೆದು, ಎರಡೂ ಕಡೆಗಳಲ್ಲಿ ತಲಾ ಇಬ್ಬರು ಉಗ್ರರನ್ನು ಹತ್ಯೆ ಮಾಡಲಾಗಿದೆ. ಎರಡೂ ಪ್ರದೇಶಗಳಲ್ಲೂ ಒಂದೇ ಬಾರಿಗೆ ಎನ್‌ಕೌಂಟರ್ ನಡೆಯತ್ತಿತ್ತು ಎಂದು ಕಾಶ್ಮೀರ ಪೊಲೀಸರು ತಿಳಿಸಿದ್ದಾರೆ.

ಸ್ವಲ್ಪ ದಿನಗಳ ಹಿಂದೆ ಶೌಕತ್‌ ಅಹ್ಮದ್‌ ಶೇಖ್‌ ಎಂಬ ಭಯೋತ್ಪಾದಕನನ್ನು ಬಂಧಿಸಲಾಗಿತ್ತು. ಅವನೇ ನಮಗೆ, ಕುಪ್ವಾರಾದ ಅರಣ್ಯದಲ್ಲಿ ಉಗ್ರರು ಅಡಗಿರುವ ಬಗ್ಗೆ ಮಾಹಿತಿ ನೀಡಿದ್ದ. ಹೀಗಾಗಿ ಭದ್ರತಾ ಪಡೆಗಳು ಜಂಟಿಯಾಗಿ ಕಾರ್ಯಾಚರಣೆ ನಡೆಸಿದ್ದರು. ಇದರಲ್ಲಿ ಹತ್ಯೆಯಾದ ಉಗ್ರರು ಪಾಕಿಸ್ತಾನದ ಲಷ್ಕರೆ ತೊಯ್ಬಾ ಸಂಘಟನೆಗೆ ಸೇರಿದವರು ಎಂದು ಕಾಶ್ಮೀರ ವಲಯ ಪೊಲೀಸರು ಮಾಹಿತಿ ನೀಡಿದ್ದಾರೆ.

ಇನ್ನೊಂದೆಡೆ ಕುಲ್‌ಗಾಂವ್‌ನ ಡಿ.ಎಚ್‌.ಪೋರಾ ಹಳ್ಳಿಯ ಸಮೀಪ ಅರಣ್ಯದಲ್ಲಿ ಉಗ್ರರು ಅಡಗಿರುವ ಮಾಹಿತಿ ಸಿಕ್ಕಿ, ಕಾರ್ಯಾಚರಣೆ ನಡೆಸಲಾಗಿತ್ತು. ಭಯೋತ್ಪಾದಕರನ್ನು ಬಂಧಿಸುವ ಇರಾದೆ ನಮ್ಮದಾಗಿದ್ದರೂ, ಅವರು ಪೊಲೀಸ್‌ ಪಡೆಗಳ ಮೇಲೆ ಗುಂಡು ಹಾರಿಸಿದರು. ಹಾಗಾಗಿ ತಿರುಗಿ ನಾವೂ ಗುಂಡಿನ ದಾಳಿ ಮಾಡಬೇಕಾಯಿತು. ಈ ವೇಳೆ ಇಬ್ಬರು ಉಗ್ರರು ಹತ್ಯೆಗೀಡಾಗಿದ್ದಾರೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಜಮ್ಮು ಕಾಶ್ಮೀರದ ಕುಪ್ವಾರಾದಲ್ಲಿ ಇಬ್ಬರು ಲಷ್ಕರೆ ಉಗ್ರರ ಹತ್ಯೆ, ಮುಂದುವರಿದ ಎನ್‌ಕೌಂಟರ್

Exit mobile version