Site icon Vistara News

Adipurush Movie: ನೇಪಾಳದಿಂದ ಆಕ್ಷೇಪ; ಆದಿಪುರುಷ್​ ಸಿನಿಮಾದಿಂದ​ ಜಾನಕಿ ಭಾರತದ ಪುತ್ರಿ ಎಂಬ ಡೈಲಾಗ್​ ಮಾಯ

Adipurush Movie

#image_title

ರಾಮಾಯಣ ಕಥೆಯನ್ನಾಧರಿಸಿದ, ಪೌರಾಣಿಕ ಸಿನಿಮಾ ಆದಿಪುರುಷ್ (Adipurush Movie)​ ಇಂದು ವಿಶ್ವದಾದ್ಯಂತ ಬಿಡುಗಡೆಯಾಗಿದೆ. ರಾಷ್ಟ್ರೀಯ ಪ್ರಶಸ್ತಿ ಪುರಸ್ಕೃತ ನಿರ್ದೇಶಕ ಓಂ ರಾವತ್​ ಅವರು ನಿರ್ದೇಶಿಸಿರುವ ಈ ಆದಿಪುರುಷ್​ ಸಿನಿಮಾದಲ್ಲಿ ನಟ ಪ್ರಭಾಸ್​ ಶ್ರೀರಾಮನ ಪಾತ್ರದಲ್ಲಿ ಅಭಿನಯಿಸಿದ್ದು, ಕೃತಿ ಸೆನಾನ್​ ಅವರು ಸೀತಾಮಾತೆ ಅಥವಾ ಜಾನಕಿ ಪಾತ್ರ ನಿಭಾಯಸಿದ್ದಾರೆ.

ಆದರೆ ಈ ಸಿನಿಮಾ ಬಿಡುಗಡೆಗೆ ಅವಕಾಶ ಕೊಡುವುದಿಲ್ಲ ಎಂದು ನೇಪಾಳ ಸರ್ಕಾರ ಹೇಳಿತ್ತು. ಅಲ್ಲಿನ ಕಾಟ್ಠಂಡು ಮೆಟ್ರೋಪಾಲಿಟಿನ್​ ಸಿಟಿ ಮೇಯರ್​ ಬಾಲೆನ್​ ಶಾ ಅವರು ಗುರುವಾರ ‘ಆದಿಪುರುಷ್​’ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದರು. ಸಿನಿಮಾದಲ್ಲಿ ‘ಜಾನಕಿ(ಸೀತಾಮಾತೆ) ಭಾರತದ ಪುತ್ರಿ’ ಎಂಬ ಒಂದು ಡೈಲಾಗ್ ಇದೆ. ಆದರೆ ಸೀತಾ ನಿಜಕ್ಕೂ ಜನಿಸಿದ್ದು ಈಗಿನ ನೇಪಾಳದಲ್ಲಿ. ಸಿನಿಮಾದಲ್ಲಿರುವ ಈ ಸಂಭಾಷಣೆಯನ್ನು ತೆಗೆಯದ ಹೊರತು ಆದಿಪುರುಷ್ ಸಿನಿಮಾವನ್ನು ನೇಪಾಳದಲ್ಲಿ ಬಿಡುಗಡೆ ಮಾಡಲು ಅವಕಾಶ ಕೊಡುವುದಿಲ್ಲ ಎಂದು ಹೇಳಿದ್ದರು. ‘ಈ ಅನಗತ್ಯ ಡೈಲಾಗ್​ ತೆಗೆಯುವವರೆಗೂ ಭಾರತದ ಯಾವುದೇ ಹಿಂದಿ ಸಿನಿಮಾಗಳನ್ನೂ ನೇಪಾಳದಲ್ಲಿ ರಿಲೀಸ್ ಮಾಡಲು ಬಿಡುವುದಿಲ್ಲ ಎಂದೂ ತಿಳಿಸಿದ್ದರು. ಹಾಗೇ, ಆದಿಪುರುಷ್​ ಬಿಡುಗಡೆಗೆ ನೀಡಿದ್ದ ಒಪ್ಪಿಗೆಯನ್ನು ನೇಪಾಳ ಸೆನ್ಸಾರ್ ಬೋರ್ಡ್​ ತಡೆಹಿಡಿದಿತ್ತು. ಇಷ್ಟೆಲ್ಲ ಆದಮೇಲೆ ಈಗ ಸಿನಿಮಾದಲ್ಲಿದ್ದ ‘ಜಾನಕಿ ಭಾರತದ ಮಗಳು’ ಎಂಬ ಡೈಲಾಗ್​ನ್ನು ತೆಗೆದುಹಾಕಲಾಗಿದೆ.

ಇದನ್ನೂ ಓದಿ: Adipurush Movie: ಆದಿ ಪುರುಷ್‌ ಪೋಸ್ಟರ್‌ ಸಖತ್‌ ಟ್ರೋಲ್‌; ಹಾಲಿವುಡ್‌ ಕಾಪಿ ಅಂದ್ರು ಫ್ಯಾನ್ಸ್‌

ಗುರುವಾರ ಅಂದರೆ, ಸಿನಿಮಾ ಬಿಡುಗಡೆಗೆ ಒಂದು ದಿನ ಮೊದಲು, ಆದಿಪುರುಷ್​ ಚಲನಚಿತ್ರದಲ್ಲಿ ಇದ್ದ, ವಿವಾದ ಸೃಷ್ಟಿಸಿದ್ದ ‘ಜಾನಕಿ ಭಾರತದ ಪುತ್ರಿ’ ಎಂಬ ವಾಕ್ಯವನ್ನು ತೆಗೆದುಹಾಕಲಾಗಿದೆ ಎಂದು ಹೇಳಲಾಗಿದೆ. ಇಂದು ನೇಪಾಳದಲ್ಲೂ ಸಿನಿಮಾ ಬಿಡುಗಡೆಯಾಗಿದೆ. ಇನ್ನು ಆದಿಪುರುಷ್​ ಚಿತ್ರ ಬಿಡುಗಡೆಗೂ ಮುನ್ನ ಮುಂಬೈಯಿಯಲ್ಲಿ ಜೂ.15ರಂದು ಪ್ರೀ ಸ್ಕ್ರೀನಿಂಗ್​ ಮಾಡಲಾಗಿತ್ತು. ಅಂದರೆ ಚಿತ್ರದಲ್ಲಿರುವ ನಟ/ನಟಿಯರು, ಈ ಸಿನಿಮಾದಲ್ಲಿ ಕೆಲಸ ಮಾಡಿದ ಎಲ್ಲರಿಗಾಗಿ ಶೋ ಪ್ರದರ್ಶಿಸಲಾಗಿತ್ತು.

ಆದಿಪುರುಷ್‌ ಚಿತ್ರವನ್ನು 700 ಕೋಟಿ ರೂ. ಬಜೆಟ್‌ನಲ್ಲಿ ನಿರ್ಮಿಸಲಾಗಿದೆ. ಇದುವರೆಗೆ ನಿರ್ಮಿಸಲಾದ ಅತ್ಯಂತ ದುಬಾರಿ ಭಾರತೀಯ ಚಿತ್ರ ಇದೆಂದು ಹೇಳಲಾಗಿದೆ. ರಾವಣನ ಪಾತ್ರದಲ್ಲಿ ಸೈಫ್ ಅಲಿ ಖಾನ್ ನಟಿಸಿದ್ದಾರೆ. ನಟ ದೇವದತ್ತ ನಾಗೆ ಹನುಮಾನ್ ಆಗಿ ಕಾಣಿಸಿಕೊಂಡಿದ್ದಾರೆ.

Exit mobile version