Site icon Vistara News

ಮೋದಿ ಸರ್​ನೇಮ್​​ಗೆ ಅಪಮಾನ ಮಾಡಿದ ಕೇಸ್​: ರಾಹುಲ್ ಗಾಂಧಿ ಅರ್ಜಿ ತಿರಸ್ಕಾರ ಮಾಡಿದ ಜಾರ್ಖಂಡ ಕೋರ್ಟ್​

Rahul Gandhi can get ordinary passport, Says Delhi Court

ರಾಂಚಿ: 2019ರಲ್ಲಿ ಮೋದಿ ಸರ್​ನೇಮ್​ಗೆ ಅವಮಾನ ಮಾಡಿದ್ದ ಕೇಸ್ (Modi Sirname Case)​​ನಲ್ಲಿ ರಾಹುಲ್​ ಗಾಂಧಿಯವರಿಗೆ ಹೋದಲ್ಲೆಲ್ಲ ಸೋಲಾಗುತ್ತಿದೆ. ಮೋದಿ ಉಪನಾಮ ಹೊಂದಿರುವವರೆಲ್ಲ ಕಳ್ಳರೇ ಆಗಿರುತ್ತಾರೆ ಎಂದು ರಾಹುಲ್ ಗಾಂಧಿ (Rahul Gandhi)ಯವರು 2019ರಲ್ಲಿ ಹೇಳಿದ್ದರು. ಈ ಹೇಳಿಕೆಗೆ ಸಂಬಂಧಪಟ್ಟಂತೆ ರಾಹುಲ್ ಗಾಂಧಿ ವಿರುದ್ಧ ಗುಜರಾತ್ ಶಾಸಕ ಪೂರ್ಣೇಶ್​ ಮೋದಿಯವರು, ಸೂರತ್ ಕೋರ್ಟ್​ನಲ್ಲಿ ಕ್ರಿಮಿನಲ್ ಮಾನನಷ್ಟ ಮೊಕದ್ದಮೆ (Defamation Case) ಹೂಡಿದ್ದರು. ಅದರಲ್ಲಿ ರಾಹುಲ್ ಗಾಂಧಿಯವರು ದೋಷಿ ಎಂದು ಪರಿಗಣಿತರಾಗಿ 2ವರ್ಷ ಜೈಲು ಶಿಕ್ಷೆಗೆ ಗುರಿಯಾಗಿದ್ದಾರೆ. ಆ ಶಿಕ್ಷೆಗೆ ತಡೆ ನೀಡಬೇಕು ಎಂದು ಸೂರತ್​ ಸೆಷನ್ಸ್​ ಕೋರ್ಟ್, ಗುಜರಾತ್ ಹೈಕೋರ್ಟ್​ ಮೆಟ್ಟಿಲೇರಿದ್ದರೂ ಅವರಿಗೆ ಅಲ್ಲೆಲ್ಲ ಸೋಲಾಗಿದೆ. ಗುಜರಾತ್​ ಹೈಕೋರ್ಟ್ ರಾಹುಲ್ ಗಾಂಧಿಗೆ ಮಧ್ಯಂತರ ರಕ್ಷಣೆಯನ್ನೂ ನೀಡದೆ, ವಿಚಾರಣೆಯನ್ನು ಜೂನ್​ ತಿಂಗಳಿಗೆ ಮುಂದೂಡಿದೆ.

ಹೀಗಿರುವಾಗ ಜಾರ್ಖಂಡ್​ ಕೋರ್ಟ್​ನಲ್ಲೂ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಗೆ ಹಿನ್ನಡೆಯಾಗಿದೆ. 2019ರಲ್ಲಿ ರಾಹುಲ್ ಗಾಂಧಿಯವರು ಮೋದಿ ಉಪನಾಮಕ್ಕೆ ಮಾಡಿದ ಹೇಳಿಕೆ ವಿರುದ್ಧ ರಾಂಚಿಯ ವಕೀಲ ಪ್ರದೀಪ್ ಮೋದಿ ಎಂಬುವರು ಜಾರ್ಖಂಡ್ ಕೋರ್ಟ್ ಮೆಟ್ಟಿಲೇರಿದ್ದರು. ರಾಹುಲ್ ಗಾಂಧಿ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಿದ್ದರು. ಆ ಕೇಸ್​​ನಲ್ಲಿ ಕೂಡ ರಾಹುಲ್ ಗಾಂಧಿಗೆ ಹಿನ್ನಡೆಯಾಗಿದೆ. ಪ್ರದೀಪ್​ ಮೋದಿಯವರು ಹಾಕಿರುವ ಕೇಸ್​​ ವಿಚಾರಣೆಗೆ ತಾವು ವೈಯಕ್ತಿಕವಾಗಿ ಹಾಜರು ಕೊಡುವುದು ಕಷ್ಟವಾಗಿದೆ. ಹೀಗಾಗಿ ಇದರಿಂದ ವಿನಾಯಿತಿ ಕೊಡಬೇಕು ಎಂದು ಎಂದು ರಾಹುಲ್ ಗಾಂಧಿ ಸಲ್ಲಿಸಿದ್ದ ಅರ್ಜಿಯನ್ನು ಜಾರ್ಖಂಡ ಕೋರ್ಟ್ ತಿರಸ್ಕರಿಸಿದೆ.

ಇದನ್ನೂ ಓದಿ: ಮೋದಿ ಸರ್​ನೇಮ್​ ಕೇಸ್: ರಾಹುಲ್ ಗಾಂಧಿಗೆ ಮತ್ತೊಮ್ಮೆ ಹಿನ್ನಡೆ, ಹೈಕೋರ್ಟ್​ನಿಂದ ಸಿಗದ ಮಧ್ಯಂತರ ರಕ್ಷಣೆ

ಸೂರತ್​ ಕೋರ್ಟ್​ನಿಂದ 2ವರ್ಷ ಜೈಲು ಶಿಕ್ಷೆ ವಿಧಿಸಲ್ಪಡುತ್ತಿದ್ದಂತೆ ರಾಹುಲ್ ಗಾಂಧಿಯವರು ಸಂಸದನ ಸ್ಥಾನದಿಂದ ಅನರ್ಹಗೊಂಡಿದ್ದಾರೆ. 2019ರ ಲೋಕಸಭಾ ಚುನಾವಣೆ ವೇಳೆ ಕೋಲಾರದಲ್ಲಿ ಮಾತನಾಡಿದ್ದ ರಾಹುಲ್ ಗಾಂಧಿ ‘ಮೋದಿ ಸರ್​ನೇಮ್​ ಹೊಂದಿರುವವರೆಲ್ಲ ಕಳ್ಳರೇ ಆಗಿರುತ್ತಾರೆ’ ಎಂದು ಹೇಳಿದ್ದರು. ವಿವಿಧ ಹಗರಣಗಳಲ್ಲಿ ಸಿಲುಕಿ ದೇಶಬಿಟ್ಟು ಹೋದ ನೀರವ್​ ಮೋದಿ, ಲಲಿತ್ ಮೋದಿಯನ್ನು ಉಲ್ಲೇಖಿಸಿ, ಪ್ರಧಾನಿ ನರೇಂದ್ರ ಮೋದಿಯವರ ವಿರುದ್ಧ ವ್ಯಂಗ್ಯ ಮಾಡಿದ್ದರು. ಆದರೆ ಆ ಹೇಳಿಕೆ ಅವರ ಪಾಲಿಗೆ ಈಗ ಮುಳ್ಳಾಗಿದೆ. ಒಂದೇ ಸಮನೆ ಕಾನೂನು ಹೋರಾಟ ಮಾಡಬೇಕಾದ ಅನಿವಾರ್ಯತೆಗೆ ಎಡೆಮಾಡಿಕೊಟ್ಟಿದೆ.

Exit mobile version