Site icon Vistara News

JioCinema : ಜಿಯೋ ಸಿನಿಮಾ ಇನ್ನು ಉಚಿತವಲ್ಲ! ವಾರ್ಷಿಕ ಚಂದಾದಾರಿಕೆ ದರ ಎಷ್ಟು?

#image_title

ನವದೆಹಲಿ: ಐಪಿಎಲ್‌ ಆರಂಭವಾದಾಗಿನಿಂದ ಜಿಯೋ ಸಿನಿಮಾ (JioCinema) ಆ್ಯಪ್ ಬಳಕೆದಾರರ ಸಂಖ್ಯೆ ಗಣನೀಯವಾಗಿ ಹೆಚ್ಚಿದೆ ಎಂದೇ ಹೇಳಬಹುದು. ಐಪಿಎಲ್‌ ಉಚಿತ ಸ್ಟ್ರೀಮಿಂಗ್‌ ಆಪ್‌ನಲ್ಲಿರುವುದರಿಂದಾಗಿ ಆ್ಯಪ್ ಅತಿ ಹೆಚ್ಚು ಜನರಿಂದ ಡೌನ್‌ಲೋಡ್‌ ಆಗಿದೆ. ಆದರೆ ಇದೀಗ ಜಿಯೋ ಸಿನಿಮಾ ಚಂದಾದಾರಿಕೆಯನ್ನೂ ಆರಂಭಿಸಿದೆ.

ಹೌದು. ಜಿಯೋ ಸಿನಿಮಾ ಇದೀಗ ಚಂದಾದಾರಿಕೆ ಆಯ್ಕೆಯನ್ನೂ ಹೊರತಂದಿದೆ. ಪ್ರೀಮಿಯಂ ಹೆಸರಿನಲ್ಲಿ ಆರಂಭವಾಗಿರುವ ಈ ಚಂದಾದಾರಿಕೆಗೆ ನೀವು ವಾರ್ಷಿಕವಾಗಿ 999 ರೂ. ತೆರಬೇಕು. ಈ ಪ್ರೀಮಿಯಂ ಬಳಕೆದಾರರಿಗೆಂದೇ ಹಾಲಿವುಡ್‌ನ ಅನೇಕ ಸಿನಿಮಾಗಳು, ಸೀರಿಸ್‌ಗಳನ್ನು ಈ ಆಪ್‌ನಲ್ಲಿ ಹಾಕಲಾಗಿದೆ. ಅದಷ್ಟೇ ಅಲ್ಲದೆ ಹ್ಯಾರಿ ಪಾಟರ್‌ ಸಿನಿಮಾಗಳನ್ನು ಕೂಡ ಪ್ರೀಮಿಯಂ ಬಳಕೆದಾರರಿಗೆ ಕೊಡಲಾಗುತ್ತಿದೆ.

ಇದನ್ನೂ ಓದಿ: ಒಂದು ತಿಂಗಳಲ್ಲಿ 10 ಬಿಲಿಯನ್ ಜಿಬಿ ಡೇಟಾ ಬಳಕೆ; ಜಿಯೋ ಬಳಕೆದಾರರ ದಾಖಲೆ!
ಸದ್ಯಕ್ಕೆ ಆ್ಯ ಪ್‌ನಲ್ಲಿ ಒಂದೇ ಬೆಲೆಯ ಚಂದಾದಾರಿಕೆಯನ್ನು ಪರಿಚಯಿಸಲಾಗಿದೆ. ಮುಂದಿನ ದಿನಗಳಲ್ಲಿ ಬೇರೆ ಬೇರೆ ಬೆಲೆಯ ಚಂದಾದಾರಿಕೆ ಪರಿಚಯಿಸುವ ಸಾಧ್ಯತೆಯೂ ಇದೆ. ಒಂದು ಖಾತೆಯಿಂದ ಚಂದಾದಾರಿಕೆ ಪಡೆದುಕೊಂಡರೆ ಅದನ್ನು ಮೂರು ಡಿವೈಸ್‌ಗಳಲ್ಲಿ ಬಳಸಬಹುದಾಗಿದೆ. ಆಪ್‌ನ ಮೇಲ್ಭಾಗದಲ್ಲಿಯೇ ಚಂದಾದಾರಿಕೆ ಮಾಡಿಕೊಳ್ಳಲು ಆಯ್ಕೆ ನೀಡಲಾಗಿದೆ.

Exit mobile version