Site icon Vistara News

Journalist Nidhi Razdan: ಶ್ರೀನಿವಾಸ್ ಜೈನ್ ಬೆನ್ನಲ್ಲೇ ಎನ್‌ಡಿಟಿವಿ ತೊರೆದ ಪತ್ರಕರ್ತೆ ನಿಧಿ ರಾಜ್ದಾನ್

Journalist Nidhi Razdan quits NDTV

ನವದೆಹಲಿ: ಪತ್ರಕರ್ತ ಶ್ರೀನಿವಾಸ್ ಜೈನ್ ರಾಜೀನಾಮೆ ನೀಡಿದ ಬೆನ್ನಲ್ಲೇ ಪತ್ರಕರ್ತೆ ನಿಧಿ ರಾಜ್ದಾನ್ (Journalist Nidhi Razdan) ಅವರು ಎನ್‌ಡಿ ಟಿವಿಯಿಂದ (NDTV) ಹೊರ ಬಂದಿದ್ದಾರೆ. ಎನ್‌ಡಿಟಿವಿಯನ್ನು ಇತ್ತೀಚೆಗಷ್ಟೇ ಅದಾನಿ ಸಮೂಹ ಖರೀದಿಸಿದೆ. ಪ್ರಣಬ್ ರಾಯ್ ದಂಪತಿ, ಖ್ಯಾತ ಪತ್ರಕರ್ತ ರವೀಶ್ ಕುಮಾರ್ ಅವರು ಕೆಲವು ದಿನಗಳ ಹಿಂದೆ ಎನ್‌ಡಿ ಟಿವಿಯನ್ನು ತೊರೆದಿದ್ದಾರೆ.

ಎನ್‌ಡಿಟಿವಿಯಲ್ಲಿನ ಸುಮಾರು 22 ವರ್ಷಗಳ ನನ್ನ ಪಯಣ ಮುಕ್ತಾಯ ಕಂಡಿದೆ ಎಂದು ನಿಧಿ ರಾಜ್ದಾನ್ ಅವರು ಟ್ವೀಟ್ ಮಾಡಿದ್ದಾರೆ. ಇದೊಂದು ರೋಲರ್ ಕೋಸ್ಟರ್ ತರಹ ಜರ್ನಿಯಾಗಿತ್ತು. ಅದ್ಭುತವಾಗಿತ್ತು. ಆದರೆ, ನಿಮಗೆ ಯಾವಾಗ ಇಳಿಯಬೇಕು ಎಂಬುದು ಗೊತ್ತಿರಬೇಕು ಎಂದು ಅವರು ಟ್ವೀಟ್‌ನಲ್ಲಿ ಬರೆದುಕೊಂಡಿದ್ದಾರೆ.

ಇದನ್ನೂ ಓದಿ: NDTV Adani deal | ಎನ್‌ಡಿಟಿವಿಗೆ ಅದಾನಿ ಮಾಲೀಕ, ಪ್ರಣಯ್‌ ರಾಯ್‌ ದಂಪತಿಯಿಂದ 602 ಕೋಟಿ ರೂ.ಗೆ ಷೇರು ಮಾರಾಟ

ಇದಕ್ಕೂ ಮೊದಲು ನಿಧಿ ರಾಜ್ದಾನ್ ಅವರು 2021ರಲ್ಲಿ ಎನ್‌ಡಿಟಿವಿಯಿಂದ ಹೊರ ಬಂದಿದ್ದರು. ಫಿಶಿಂಗ್ ದಾಳಿಗೆ ಒಳಗಾಗಿದ್ದ ಅವರು, ಹಾರ್ವರ್ಡ್ ವಿವಿಯಲ್ಲಿ ಪ್ರಾಧ್ಯಾಪಕ ಹುದ್ದೆಗೆ ಆಯ್ಕೆ ಮಾಡಲಾಗಿದೆ ಎಂದು ಅವರನ್ನು ಯಾಮಾರಿಸಲಾಗಿತ್ತು. ಹಾಗಾಗಿ, ಅವರು ಎನ್‌ಡಿ ಟಿವಿ ತೊರೆದಿದ್ದರು. ಕಳೆದ ವರ್ಷವಷ್ಟೇ ಮತ್ತೆ ಟಿವಿಗೆ ಸೇರ್ಪಡೆಯಾಗಿದ್ದರು.

Exit mobile version