Site icon Vistara News

Worldwide BJP: 13 ದೇಶದ ರಾಯಭಾರಿಗಳ ಜತೆ ಸಭೆ ನಡೆಸಿದ ಬಿಜೆಪಿ ಅಧ್ಯಕ್ಷ ಜೆ.ಪಿ ನಡ್ಡಾ

jp nadda

ನವ ದೆಹಲಿ: ಬಿಜೆಪಿ ಈಗ ದೇಶದಲ್ಲಿರುವ ನಾಗರಿಕರನ್ನು ಮಾತ್ರವಲ್ಲ ಜಗತ್ತಿನೆಲ್ಲೆಡೆ ಇರುವ ಭಾರತೀಯರನ್ನು ತಲುಪಲು ನಾನಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಯಾವುದೇ ದೇಶಕ್ಕೆ ಹೋಗಲಿ ಅಲ್ಲಿನ ನಾಗರಿಕರ ಜತೆ ಸಂವಾದ ನಡೆಸುವುದು ಒಂದು ಭಾರತದ ಕುರಿತ ಹೆಮ್ಮೆಯನ್ನು ಹೆಚ್ಚಿಸುವುದಕ್ಕೆ, ಇನ್ನೊಂದು ಪಕ್ಷದ ನೆಲೆಗಳನ್ನು ವಿಸ್ತರಿಸುವುದಕ್ಕೆ ಎನ್ನುವುದು ಎಲ್ಲರಿಗೂ ಗೊತ್ತಿರುವ ಸತ್ಯ, ಇದೇ ರೀತಿ ಬಿಜೆಪಿಯೂ ಹಲವಾರು ಕಾರ್ಯಕ್ರಮಗಳ ಮೂಲಕ ತನ್ನ ನೆಲೆಯನ್ನು ವಿದೇಶಿ ನೆಲದಲ್ಲೂ ವಿಸ್ತರಿಸಲು ಪ್ರಯತ್ನಿಸುತ್ತಿದೆ.

ಇದರ ಭಾಗವಾಗಿ ಬಿಜೆಪಿ ಇದಕ್ಕಾಗಿ 150ಕ್ಕೂ ಹೆಚ್ಚು ದೇಶಗಳ ರಾಯಭಾರಿಗಳ ಜೊತೆ ಸಂಪರ್ಕ ಸಾಧಿಸಲು ಮುಂದಾಗಿದೆ. ಇದರ ನಾಲ್ಕನೇ ಸಭೆ ದೆಹಲಿಯ ಬಿಜೆಪಿ ಕೇಂದ್ರ ಕಚೇರಿಯಲ್ಲಿ ಇಂದು (ಶನಿವಾರ) ಸಂಜೆ 4 ಆರಂಭಗೊಂಡಿದೆ.. ಸಭೆಯಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ 13 ದೇಶಗಳ ರಾಯಭಾರಿಗಳ ಜೊತೆ ಸಂವಾದ ನಡೆಸುತ್ತಿದ್ದಾರೆ. ಈ ಸಂವಾದವು ಏಪ್ರಿಲ್‌ 6ರಂದು ಬಿಜೆಪಿಯ ಸಂಸ್ಥಪನಾ ದಿನದಂದು ಆರಂಭಿಸಿದ್ದ ʼಬಿಜೆಪಿಯನ್ನು ತಿಳಿಯರಿʼ ಕಾರ್ಯಕ್ರಮಗಳ ಸರಣಿಯ ಒಂದು ಭಾಗವಾಗಿದೆ.

ಸಭೆಯಲ್ಲಿ ಜೆ.ಪಿ ನಡ್ಡಾ ಪಕ್ಷದ ಇತಿಹಾಸ, ಹೋರಾಟಗಳು ಯಶಸ್ಸುಗಳು, ಸಿದ್ದಾಂತ ಮತ್ತು ರಾಷ್ಟ್ರ ನಿರ್ಮಾಣದಲ್ಲಿ ಪಕ್ಷ ಮತ್ತು ಬಿಜೆಪಿ ಸರ್ಕಾರಗಳ ಕೊಡುಗೆಗಳನ್ನು ವಿವರಿಸಲಿದ್ದಾರೆ.

ಇದನ್ನು ಓದಿ| Video:ಹಂಪಿ ಸೌಂದರ್ಯಕ್ಕೆ ಮನಸೋತ BJP ಅಧ್ಯಕ್ಷ ಜೆ.ಪಿ. ನಡ್ಡಾ: ₹50 ನೋಟಿನೊಂದಿಗೆ ಫೋಟೊಗೆ ಪೋಸ್‌ ನೀಡಿದ ಕುಟುಂಬ

ಇನ್ನು ಸಭೆಯಲ್ಲಿ ಆಫ್ರಿಕನ್‌, ಪೂರ್ವ ಏಷ್ಯನ್‌, ಕೊಲ್ಲಿ ರಾಷ್ಟ್ರಗಳು, ಸಿಐಎಸ್‌ ಮತ್ತು ಉತ್ತರ ಅಮೆರಿಕದ ರಾಷ್ಟ್ರಗಳು ಸೇರಿದಂತೆ ರಾಯಭಾರಿಗಳನ್ನು ಗುಂಪುಗಳಾಗಿ ವಿಂಗಡಣೆ ಮಾಡಲಾಗಿದೆ. ಇದೇ ಸರಣಿಯ ಮುಂದಿನ ಕಾರ್ಯಕ್ರಮಗಳನ್ನು ಜೂನ್‌ 13 ಮತ್ತು ಜೂನ್‌ 15ರಂದು ನಿಗದಿಪಡಿಸಲಾಗಿದೆ.

ನಾಳೆ( ಜೂನ್‌ 12) ನಡೆಯುವ ಕಾರ್ಯಕ್ರಮದಲ್ಲಿ ಬಿಜೆಪಿ ರಾಷ್ಟ್ರೀಯ ವಕ್ತಾರರಾದ ರಾಜ್ಯವರ್ಧನ್‌ ಸಿಂಗ್‌ ರಾಥೋಡ್‌, ಗುರು ಪ್ರಕಾಶ್‌ ಪಾಸ್ವಾನ್‌, ಪಕ್ಷದ ವಿದೇಶಾಂಗ ಖಾತೆಯ ಉಸ್ತುವಾರಿ ವಿಜಯ್‌ ಚೌತೈವಾಲೆ ಮತ್ತು ಇತರ ಕೆಲವು ಪ್ರಮುಖ ಬಿಜೆಪಿ ನಾಯಕರು ಭಾಗಿಯಾಗಲಿದ್ದಾರೆ.

Exit mobile version