Site icon Vistara News

Kamal Haasan : ಲೋಕಸಭೆ ಚುನಾವಣೆಯಲ್ಲಿ ನಾನೇ ಕಾಂಗ್ರೆಸ್ ಅಭ್ಯರ್ಥಿ ಯಾಕಾಗಬಾರದು? ಕಮಲ ಹಾಸನ್‌

ಚೆನ್ನೈ: ದಕ್ಷಿಣ ಭಾರತದ ನಟ ಹಾಗೂ ರಾಜಕಾರಣಿ ಕಮಲ ಹಾಸನ್‌ (Kamal Haasan) ಅವರು ಮುಂದಿನ ಲೋಕಸಭಾ ಚುನಾವಣೆಯಲ್ಲಿ ತಾವು ಕಾಂಗ್ರೆಸ್‌ನಿಂದ ಟಿಕೆಟ್‌ ಆಕಾಂಕ್ಷಿಸುತ್ತಿರುವುದಾಗಿ ಹೇಳಿದ್ದಾರೆ. ಈರೋಡು ಈಸ್ಟ್‌ನ ಉಪ ಚುನಾವಣೆಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿಗೆ ಬೆಂಬಲ ಘೋಷಿಸಿದ ಬೆನ್ನಲ್ಲೇ ಅವರು ಈ ರೀತಿಯಲ್ಲಿ ತಮ್ಮ ಇಂಗಿತವನ್ನು ಹೇಳಿಕೊಂಡಿದ್ದಾರೆ.

ಈ ಹಿಂದೆ ಡಿಎಂಕೆ ಪಕ್ಷವನ್ನು ಹೀಯಾಳಿಸುತ್ತಿದ್ದ ಕಮಲ ಹಾಸನ್‌ ಅವರು ಈಗ ಈರೋಡು ಈಸ್ಟ್‌ನ ಉಪ ಚುನಾವಣೆಗೆ ಡಿಎಂಕೆ-ಕಾಂಗ್ರೆಸ್‌ನಿಂದ ನಿಂತಿರುವ ಇ.ವಿ.ಕೆ.ಎಸ್.ಇಳಂಗೋವನ್ ಅವರನ್ನೇ ಬೆಂಬಲಿಸುವುದಾಗಿ ಘೋಷಿಸಿದ್ದಾರೆ. ಈ ಬಗ್ಗೆ ಕೇಳಿಬಂದ ಪ್ರಶ್ನೆಗಳಿಗೆ ಉತ್ತರಿಸಿರುವ ಅವರು, “ನಾನು ಇದನ್ನು ರಾಷ್ಟ್ರೀಯ ಪ್ರಾಮುಖ್ಯತೆಯ ಕ್ಷಣ ಎಂದು ಕರೆದಿದ್ದೇನೆ. ರಾಷ್ಟ್ರೀಯ ಪ್ರಾಮುಖ್ಯತೆಯ ವಿಷಯಕ್ಕೆ ಬಂದಾಗ ನೀವು ಪಕ್ಷದ ಸಿದ್ಧಾಂತವನ್ನು ಸಹ ಅಳಿಸಿಹಾಕಬೇಕು. ಜನರು ಅದರಲ್ಲಿ ಮುಖ್ಯರಾಗುತ್ತಾರೆ. ನಾನು ಏಕಸಂಸ್ಕೃತಿಯ ವಿರುದ್ಧವಾಗಿದ್ದೇವೆ. ನಮ್ಮ ದೇಶದ ಬಹುತ್ವವು ಭಾರತವನ್ನು ವಿಶೇಷವಾಗಿಸಿದೆ ಎಂದು ನಾನು ನಂಬಿದ್ದೇನೆ” ಎಂದಿದ್ದಾರೆ.

ಇದನ್ನೂ ಓದಿ: Kamal Haasan | ಕಮಲ್‌ ಹಾಸನ್‌ ನಟನೆಯ ಇಂಡಿಯನ್‌-2 ಸಿನಿಮಾಗೆ ರಕುಲ್ ಪ್ರೀತ್ ಸಿಂಗ್ ನಾಯಕಿ
ತಮ್ಮ ಪಕ್ಷದ ಎಲ್ಲ ಪದಾಧಿಕಾರಿಗಳೊಂದಿಗೆ ಚರ್ಚಿಸಿ ಬೆಂಬಲ ಘೋಷಿಸಿರುವುದಾಗಿ ಕಮಲ ಹಾಸನ್‌ ತಿಳಿಸಿದ್ದಾರೆ. ಹಾಗೆಯೇ ಘೋಷಿಸಲಾಗಿರುವ ಬೆಂಬಲವು 2024ರ ಚುನಾವಣೆಗೂ ಇರಲಿದೆಯೇ ಎಂದು ಕೇಳಲಾದ ಪ್ರಶ್ನೆಗೆ ಅವರು, “ಇದು ಈಗಿನ ಮಾತು. ಮುಂದಿನದ್ದನ್ನು ನಾವಿನ್ನೂ ನಿರ್ಧರಿಸಿಲ್ಲ. ಆಗ ನಾನೇ ಕಾಂಗ್ರೆಸ್‌ ಅಭ್ಯರ್ಥಿ ಏಕಾಗಬಾರದು?” ಎಂದು ಪ್ರಶ್ನಿಸಿದ್ದಾರೆ.

Exit mobile version