Site icon Vistara News

Emergency Movie | ಸಂಸತ್‌ನಲ್ಲಿ ಸಿನಿಮಾ ಶೂಟಿಂಗ್‌ಗೆ ಅವಕಾಶ ಕೋರಿದ ಕಂಗನಾ ರಣಾವತ್‌, ಸಮ್ಮತಿಸುವುದೇ ಸರ್ಕಾರ?

Emergency Movie Shooting In Parliament

ನವದೆಹಲಿ: ಬಾಲಿವುಡ್‌ ನಟಿ ಕಂಗನಾ ರಣಾವತ್‌ ನಿರ್ದೇಶನದ ಎಮರ್ಜೆನ್ಸಿ (Emergency Movie) ಚಿತ್ರದ ಚಿತ್ರೀಕರಣವನ್ನು ಸಂಸತ್‌ ಆವರಣದಲ್ಲಿ ಮಾಡಲು ಅವಕಾಶ ನೀಡಬೇಕು ಎಂದು ಕಂಗನಾ ರಣಾವತ್‌ ಮನವಿ ಮಾಡಿದ್ದಾರೆ. ಆದರೆ, ಇದಕ್ಕೆ ಕೇಂದ್ರ ಸರ್ಕಾರ ಒಪ್ಪಿಗೆ ಸೂಚಿಸುವ ಸಾಧ್ಯತೆ ಕಡಿಮೆ ಇದೆ ಎಂದೇ ಹೇಳಲಾಗುತ್ತಿದೆ.

1975ರಲ್ಲಿ ಆಗಿನ ಪ್ರಧಾನಿ ಇಂದಿರಾ ಗಾಂಧಿ ಅವರು ತುರ್ತು ಪರಿಸ್ಥಿತಿ ಹೇರಿದ ಕುರಿತ ಕಥಾಹಂದರವಿರುವ ಸಿನಿಮಾದಲ್ಲಿ ಸಂಸತ್‌ನಲ್ಲಿ ನಡೆಯುವ ಘಟನೆಗಳ ಬಗ್ಗೆ ಚಿತ್ರೀಕರಣದ ಅಗತ್ಯವಿದೆ. ಹಾಗಾಗಿ, ಸೆಟ್‌ ಬದಲು ಸಂಸತ್ತಿನಲ್ಲಿಯೇ ಚಿತ್ರೀಕರಿಸಲು ಕಂಗನಾ ತೀರ್ಮಾನಿಸಿದ್ದಾರೆ. ಇದಕ್ಕಾಗಿ ಲೋಕಸಭೆ ಸಚಿವಾಲಯಕ್ಕೆ ನಟಿ ಮನವಿ ಮಾಡಿದ್ದಾರೆ ಎಂದು ತಿಳಿದುಬಂದಿದೆ. ಆದರೆ, ಭದ್ರತೆ ದೃಷ್ಟಿಯಿಂದಾಗಿ ಮನವಿ ತಿರಸ್ಕರಿಸುವ ಸಾಧ್ಯತೆ ಇದೆ.

ಎಮರ್ಜೆನ್ಸಿ ಚಿತ್ರಕ್ಕೆ ಕಂಗನಾ ಅವರೇ ನಿರ್ಮಾಪಕಿಯೂ ಆಗಿದ್ದಾರೆ. ಅಲ್ಲದೆ, ಇಂದಿರಾ ಗಾಂಧಿ ಪಾತ್ರ ನಿರ್ವಹಿಸುತ್ತಿದ್ದಾರೆ. ಕಳೆದ ಜೂನ್‌ನಲ್ಲಿಯೇ ಸಿನಿಮಾದ ಶೂಟಿಂಗ್‌ ಆರಂಭವಾಗಿದ್ದು, ಸಂಸತ್‌ ಘಟನೆಗಳ ಚಿತ್ರೀಕರಣ ಬಾಕಿ ಇದೆ ಎನ್ನಲಾಗಿದೆ.

ಇದನ್ನೂ ಓದಿ | Pathaan Controversy | ಕೇಸರಿ ಬಣ್ಣಕ್ಕೆ ಬೂಟುಗಾಲಿಟ್ಟ ಕಂಗನಾ ರಣಾವತ್: ನೆಟ್ಟಿಗರ ಕೆಂಗಣ್ಣಿಗೆ ಗುರಿಯಾದ ನಟಿ!

Exit mobile version