Site icon Vistara News

Sonu Sood : ಸೋನು ಸೂದ್​, ಕಂಗನಾ ರಣಾವತ್​ ‘ಎಂಜಲು ರೊಟ್ಟಿಯ’ ಗಲಾಟೆ

Sonu Sood

ಬೆಂಗಳೂರು: ಉತ್ತರಪ್ರದೇಶದಲ್ಲಿ ಸಿಎಂ ಯೋಗಿ ಆದಿತ್ಯನಾಥ್​ ಕನ್ವರ್ ಯಾತ್ರೆ ಸಾಗುವ ದಾರಿಯಲ್ಲಿರುವ ಅಂಗಡಿಗಳ ಹೆಸರನ್ನು ಪ್ರದರ್ಶನ ಮಾಡಬೇಕು ಎಂದು ಆದೇಶ ಮಾಡಿರುವ ವಿಚಾರದ ಬಗ್ಗೆ ನಟ ಸೋನು ಸೂದ್ (Sonu Sood) ನೀಡಿರುವ ಹೇಳಿಕೆ ವಿವಾದಕ್ಕೆ ಕಾರಣವಾಗಿದೆ. ಈ ವಿಚಾರದಲ್ಲಿ ನಟಿ ಹಾಗೂ ಸಂಸದೆ ಕಂಗನಾ ರಣಾವತ್​ ಹಾಗೂ ಸೋನು ಸೂದ್​​ ಸೋಶಿಯಲ್ ಮೀಡಿಯಾದಲ್ಲಿ ಗಲಾಟೆ ಮಾಡಿಕೊಂಡಿದ್ದಾರೆ.

ಕನ್ವರ್ ಯಾತ್ರೆಯ ವಾರ್ಷಿಕ ತೀರ್ಥಯಾತ್ರೆಯನ್ನು ಶಿವನ ಭಕ್ತರು ಭಕ್ತಿಯಿಂದ ಆಚರಿಸುತ್ತಾರೆ. ಯಾತ್ರಾ ಮಾರ್ಗದಲ್ಲಿರುವ ಆಹಾರ ಮಳಿಗೆಯರುವ ತಮ್ಮ ಹೆಸರುಗಳನ್ನು ಪ್ರದರ್ಶಿಸುವಂತೆ ಯುಪಿ ಸರ್ಕಾರ ಆದೇಶ ನೀಡಿತ್ತು. ಮೊದಲಿಗೆ, ಈ ಆದೇಶವು ಮುಜಾಫರ್ ನಗರ ಪ್ರದೇಶಕ್ಕೆ ಮಾತ್ರ ಅನ್ವಯಿಸುತ್ತಿತ್ತು, ಈಗ ಇಡೀ ಯುಪಿ ಮತ್ತು ಉತ್ತರಾಖಂಡ ರಾಜ್ಯವು ಅಂಗಡಿ ಮಾಲೀಕರು ಮತ್ತು ಮಾರಾಟಗಾರರಿಗೆ ನಿಜವಾದ ಹೆಸರುಗಳು ಮತ್ತು ಪರವಾನಗಿಗಳ ಪ್ರದರ್ಶನ ಮಾಡುವಂತೆ ಹೇಳಿದೆ.

ಈ ಬಗ್ಗೆ ನಟ ಸೋನು ಸೂದ್ ಅವರ ಕಾಮೆಂಟ್​ಗಳು ಸಾಮಾಜಿಕ ಜಾಲತಾಣಗಳಲ್ಲಿ ಹಿಂದೂಗಳನ್ನು ಕೆರಳಿಸಿತು. ಈ ಚರ್ಚೆಯು ಧರ್ಮ, ಸಾರ್ವಜನಿಕ ಆರೋಗ್ಯ ಮತ್ತು ಜಾತ್ಯತೀತತೆ ಕುರಿತು ಚರ್ಚೆಗೆ ಕಾರಣವಾಯಿತು.

ಧರ್ಮದ ಮೇಲೆ ಮಾನವೀಯತೆ: ಸೋನು ಸೂದ್

ನಟ ಸೋನು ಸೂದ್ ಕನ್ವರ್ ಯಾತ್ರೆ ಕುರಿತ ನಿರ್ದೇಶನದ ಬಗ್ಗೆ ಹೇಳಿಕೆ ನೀಡಿ ಮೊದಲ ವಿವಾದ ಹುಟ್ಟುಹಾಕಿದರು. ಭಾರತೀಯರು ಮಾನವೀಯತೆಯೊಂದಿಗೆ ಮಾತ್ರ ಗುರುತಿಸಿಕೊಳ್ಳಬೇಕು ಎಂದು ಅವರು ಎಕ್ಸ್​ನಲ್ಲಿ ಸಲಹೆ ನೀಡಿದರು. ಪ್ರತಿ ಅಂಗಡಿಯ ಮುಂದೆ “ಮಾನವೀಯತೆ” ಎಂದು ನಾಮಫಲಕ ಹಾಕಬೇಕು. ಆಹಾರ ಮಾರಾಟಗಾರರು ತಮ್ಮ ಹೆಸರುಗಳನ್ನು ಪ್ರದರ್ಶಿಸುವ ಸರ್ಕಾರದ ನಿರ್ಧಾರವು ಅನಗತ್ಯ ಮತ್ತು ಸಮಾಜ ವಿಭಜಕ ಎಂದು ಹೇಳಿದ್ದರು.

ಸೋನು ಸೂದ್ ಹೇಳಿಕೆಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಯಿತು. ಕೆಲವರು ಅವರನ್ನು “ಜಾತ್ಯತೀತ” ಭಾವನೆಯನ್ನು ಶ್ಲಾಘಿಸಿದರೆ, ಇನ್ನುಳಿದವರು ಅವರನ್ನು ಖಂಡಿಸಿದರು. ಮಾನವೀಯ ಕೆಲಸವನ್ನು ಮಾತ್ರ ಮಾಡಿ. ಧರ್ಮದ ವಿಚಾರದಲ್ಲ ಮೂಗು ತೂರಿಸಬೇಡಿ ಎಂದು ಬೈದರು. ದೇಶದ ನಾನಾ ಭಾಗಗಳಲ್ಲಿ ಆಹಾರ ಮಾರಾಟಗಾರರು ನಡೆಸುವ ಕುಕೃತ್ಯಗಳನ್ನು ವಿಡಿಯೊ ಸಮೇತ ನೀಡಿ ಸೋನು ಅವರನ್ನು ತರಾಟೆಗೆ ತೆಗೆದುಕೊಂಡರು.

ಕಂಗಾನಾ ಪ್ರತಿಕ್ರಿಯೆ ಏನು?

ಸೋನು ಸೂದ್ ಹೇಳಿಕೆಗೆ ನಟಿ ಕಂಗನಾ ರಣಾವತ್​ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ. “ಮಾನವೀಯತೆ” ಏಕೈಕ ಆಧಾರವಾಗಿದ್ದರೆ, ಯಾವುದೇ ಅಂಗಡಿಗೆ “ಹಲಾಲ್” ಮಾರಾಟ ಮಾಡಲು ಅನುಮತಿಸಬಾರದು . ಹಲಾಲ್​ ಬೋರ್ಡ್​ ಬದಲು ಮಾನವೀಯತೆ ಬೋರ್ಡ್​ ಇರಲಿ ಎಂದು ಹೇಳಿಕೆ ಕೊಟ್ಟರು. ಧಾರ್ಮಿಕ ಆಧಾರದ ಮೇಲೆ ತಾರತಮ್ಯ ಮಾಡಲು ತಮ್ಮ ಆಹಾರವನ್ನು ಹಲಾಲ್​ ಎಂದು ಲೇಬಲ್ ಮಾಡುತ್ತವೆ ಎಂದು ಕಂಗನಾ ತಿರುಗೇಟು ಕೊಟ್ಟಿದ್ದಾರೆ.

ಇದನ್ನೂ ಓದಿ: Harbhajan Singh: ಧೋನಿ-ರಿಜ್ವಾನ್ ನಡುವೆ ಹೋಲಿಕೆ ಮಾಡಿದ ಪಾಕ್ ಪತ್ರಕರ್ತನಿಗೆ ಚಳಿ ಬಿಡಿಸಿದ ಹರ್ಭಜನ್

ಸೋನು ಸೂದ್ ಅವರ ಮೊದಲ ಕಾಮೆಂಟ್ ಆನ್ ಲೈನ್ ನಲ್ಲಿ ಬಿರುಗಾಳಿ ಎಬ್ಬಿಸಿತು. ಆಹಾರ ಮಾರಾಟಗಾರರು ಉಗುಳುವಂತಹ ಅಶುದ್ಧ ಅಭ್ಯಾಸಗಳಲ್ಲಿ ತೊಡಗಿರುವುದನ್ನು ತೋರಿಸುವ ವಿವಿಧ ವಿಡಿಯೊಗಳನ್ನು ಸೋನು ಸೂದ್ ಅವರಿಗೆ ಟ್ಯಾಗ್ ಮಾಡಿದ್ದಾರೆ. ಕನ್ವರ್ ಯಾತ್ರಾರ್ಥಿಗಳು ಸೇವಿಸುವ ಆಹಾರದ ಶುದ್ಧತೆ ಕಾಪಾಡಿಕೊಳ್ಳುವುದು ಅಗತ್ಯ ಎಂದು ಹೇಳಿದ್ದಾರೆ.

ಅನಗತ್ಯವಾಗಿ ರಾಮನನ್ನು ಎಳೆದು ತಂದ ಸೋನು ಸೂದ್

ತಮ್ಮ ನಿಲುವನ್ನು ಸಮರ್ಥಿಸಿಕೊಳ್ಳುವ ಪ್ರಯತ್ನದಲ್ಲಿ ಸೋನು ಸೂದ್ ಎರಡನೇ ಕಾಮೆಂಟ್ ಕಳುಹಿಸಿದ್ದಾರೆ. ಭಗವಾನ್ ರಾಮ ತಮ್ಮ ಭಕ್ತಿ ಶಬರಿಯಿಂದ ಹಣ್ಣನ್ನು ಸ್ವೀಕರಿಸಿದ ಉದಾಹರಣೆಯನ್ನು ಅವರು ಉಲ್ಲೇಖಿಸಿದ್ದಾರೆ. ಭಗವಾನ್ ರಾಮನಿಗೆ ಶಬರಿ ಹಣ್ಣುಗಳನ್ನು ನೀಡುವ ವೇಳೆ ಕಚ್ಚಿ ನೋಡಿದ್ದರು ಎಂದು ಕಾಮೆಂಟ್ ಮಾಡುವ ಮೂಲಕ ಆಹಾರದ ಮೇಲೆ ಉಗುಳುವ ಕುಕೃತ್ಯವನ್ನು ಸಮರ್ಥಿಸಿಕೊಂಡಿದ್ದರು. ಅಲ್ಲದೇ ಆಹಾರದ ವಿಚಾರದಲ್ಲಿ ಸಹಿಷ್ಣುಗಳಾಗಬೇಕು ಎಂದು ಸಲಹೆ ನೀಡಿದರು.

ಶ್ರೀರಾಮನ ಹೆಸರನ್ನು ಅನಗತ್ಯವಾಗಿ ಎಳೆದು ತಂದ ಬಗ್ಗೆ ಸೋನು ಸೂದ್​ಗೆ ಮತ್ತೆ ನೆಟ್ಟಿಗರು ತಪರಾಕಿ ಕೊಟ್ಟರು. ಮುಂದೆ ಸೋನು ಜಿ ಅವರು ದೇವರು ಮತ್ತು ಧರ್ಮದ ಬಗ್ಗೆ ತಮ್ಮ ವೈಯಕ್ತಿಕ ಸಂಶೋಧನೆಗಳ ಆಧಾರದ ಮೇಲೆ ತಮ್ಮದೇ ಆದ ರಾಮಾಯಣವನ್ನು ನಿರ್ದೇಶಿಸಲಿದ್ದಾರೆ. ಬಾಲಿವುಡ್​ನಲ್ಲಿ ಮತ್ತೊಂದು ರಾಮಾಯಣ ಬರಲಿದೆ ಎಂದು ಕಂಗಾನಾ ರಣಾವತ್​ ಮತ್ತೊಂದು ಬಾರಿ ಹೇಳಿದರು.

Exit mobile version