Site icon Vistara News

Insaaf ಎಂಬ ಹೊಸ ವೇದಿಕೆಯನ್ನು ರಚಿಸಿದ ಕಾಂಗ್ರೆಸ್ ಮಾಜಿ ನಾಯಕ ಕಪಿಲ್​ ಸಿಬಲ್​; ಪ್ರತಿಪಕ್ಷಗಳ ಬೆಂಬಲಕ್ಕೆ ಮನವಿ

Kapil Sibal

Kapil Sibal becomes president of Supreme Court Bar Association, defeats Pradeep Rai

ನವ ದೆಹಲಿ: ಕಾಂಗ್ರೆಸ್​ ತೊರೆದು ಸುಮಾರು 9 ತಿಂಗಳುಗಳು ಕಳೆದ ಬಳಿಕ ಈಗ ಹಿರಿಯ ವಕೀಲ ಕಪಿಲ್​ ಸಿಬಲ್​ ಅವರು ಶನಿವಾರ ‘ಇನ್​ಸಾಫ್​’ ಎಂಬ ಹೊಸ ವೇದಿಕೆಯನ್ನು ರಚಿಸಿದ್ದಾಗಿ ಘೋಷಿಸಿದ್ದಾರೆ. ಇದೊಂದು ರಾಜಕೀಯ ವೇದಿಕೆಯೇ ಆಗಿದ್ದರೂ, ಚುನಾವಣಾ ರಾಜಕಾರಣ ಮಾಡುವುದಿಲ್ಲ. ಈ ದೇಶದ ಜನರಿಗೆ ನ್ಯಾಯ ಒದಗಿಸಿಕೊಡುವ ಸಲುವಾಗಿ ಆಂದೋಲನ ನಡೆಸಲು ಈ ಇನ್​ಸಾಫ್ (Insaaf Platform)​ ಪ್ರಾರಂಭಿಸಲಾಗಿದೆ ಎಂದು ಹೇಳಿರುವ ರಾಜ್ಯಸಭಾ ಸದಸ್ಯರ ಕಪಿಲ್​ ಸಿಬಲ್​ ಅವರು, ‘ಕೇಂದ್ರ ಸರ್ಕಾರದಿಂದ ಅನ್ಯಾಯಕ್ಕೆ ಒಳಗಾಗಿರುವ ನಾಗರಿಕರಿಗೆ ನ್ಯಾಯ ಒದಗಿಸಲು ಪ್ರಾರಂಭವಾಗಿರುವ ಈ ವೇದಿಕೆಗೆ ಪ್ರತಿಪಕ್ಷಗಳ ಮುಖ್ಯಮಂತ್ರಿಗಳು ಸೇರಿ, ಎಲ್ಲ ರಾಜಕೀಯ ನಾಯಕರೂ ಬೆಂಬಲಿಸಬೇಕು ಎಂದು ಕರೆನೀಡಿದ್ದಾರೆ.

‘ಮಾರ್ಚ್​ 11ರಂದು ದೆಹಲಿಯ ಜಂತರ್​ ಮಂತರ್​ನಲ್ಲಿ ಸಾರ್ವಜನಿಕ ಸಭೆ ಆಯೋಜಿಸಿ ಇನ್​ಸಾಫ್​ ವೇದಿಕೆ ಬಗ್ಗೆ ಮಾಹಿತಿ ಹಂಚಿಕೊಳ್ಳುತ್ತೇನೆ. ದೇಶದ ಬಗ್ಗೆ ನಮ್ಮ ವೇದಿಕೆಯ ದೃಷ್ಟಿಕೋನವೇನು? ನಮ್ಮ ಅಜೆಂಡಾವೇನು ಎಂಬ ಬಗ್ಗೆ ತಿಳಿಸುತ್ತೇನೆ. ಇದರಲ್ಲಿ ಯಾರು ಬೇಕಾದರೂ ಭಾಗವಹಿಸಬಹುದು. ಹೆಚ್ಚೆಚ್ಚು ಜನರು ಸಭೆಯಲ್ಲಿ ಪಾಲ್ಗೊಳ್ಳಬೇಕು. ನಾನು ಪ್ರಧಾನಿ ನರೇಂದ್ರ ಮೋದಿ ಬಗ್ಗೆ ಟೀಕೆ ಮಾಡುವುದಿಲ್ಲ. ಆದರೆ ಅವರೇನು ಸುಧಾರಣೆ ಮಾಡಿಕೊಳ್ಳಬೇಕು ಎಂಬುದನ್ನು ಹೇಳುತ್ತೇನೆ’ ಎಂದು ಕಪಿಲ್​ ಸಿಬಲ್ ಅವರು ಇಂದು ತಮ್ಮ ನಿವಾಸದಲ್ಲಿ ನಡೆಸಿದ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ. ಈ ದೇಶದ ಮೂಲೆಮೂಲೆಯಲ್ಲೂ ಅನ್ಯಾಯ ತಾಂಡವವಾಡುತ್ತಿದೆ ಎಂದು ಅವರು ಪ್ರತಿಪಾದಿಸಿದ್ದಾರೆ.
ನಮ್ಮದು ರಾಜಕೀಯ ಪಾರ್ಟಿ ಅಲ್ಲ. ಸಾಮಾಜಿಕ, ಆರ್ಥಿಕ, ಕಾನೂನು, ರಾಜಕಾರಣ ಎಲ್ಲವನ್ನೂ ಒಳಗೊಂಡ ಒಂದು ವೇದಿಕೆ. ನಮ್ಮ ನ್ಯಾಯ ಆಂದೋಲನ ಚಳವಳಿಯಲ್ಲಿ ವಕೀಲರೇ ಮುಂಚೂಣಿಯಲ್ಲಿ ಇರುತ್ತಾರೆ.

ಇದನ್ನೂ ಓದಿ: ಕಪಿಲ್‌ ಸಿಬಲ್‌ ಕಾಂಗ್ರೆಸ್‌ ಬಿಟ್ರು, ಉಳಿದ ಜಿ-23 ನಾಯಕರು ಏನ್ಮಾಡ್ತಾರಂತೆ?

ಆಡಳಿತಕ್ಕಾಗಿ ರಚನಾತ್ಮಕ ಐಡಿಯಾಗಳನ್ನು ಮತ್ತು ಸಲಹೆಗಳನ್ನು ನಾವು ನೀಡಲಿದ್ದೇವೆ ಎಂದು ಹೇಳಿರುವ ಕಪಿಲ್ ಸಿಬಲ್​ ‘ನಾವು ನಿರ್ದಿಷ್ಟವಾಗಿ ಯಾವುದೇ ರಾಜಕೀಯ ಪಕ್ಷದ ವಿರುದ್ಧವೂ ಕೆಲಸ ಮಾಡುವುದಿಲ್ಲ. ಆದರೆ ನಾನು ನನ್ನ ವೇದಿಕೆಗೆ ಸಹಕಾರ ಕೊಡುವಂತೆ ಪ್ರತಿಪಕ್ಷಗಳ ನಾಯಕರಲ್ಲಿ ಮಾತ್ರ ಕೇಳಿಕೊಂಡಿದ್ದರಿಂದ ಇದು ಒಂದು ಆ್ಯಂಟಿ-ಬಿಜೆಪಿ ವೇದಿಕೆಯಂತೆ ಕಾಣಬಹುದು ಎಂದು ಹೇಳಿದ್ದಾರೆ. ಅಷ್ಟೇ ಅಲ್ಲ, Insaaf ke Sipahi ಎಂಬ ವೆಬ್​ಸೈಟ್ ಕೂಡ ಪ್ರಾರಂಭಿಸಿದ್ದಾಗಿ ತಿಳಿಸಿದ್ದಾರೆ.

Exit mobile version