Site icon Vistara News

Kargil Vijay Diwas 2024: ಕಾರ್ಗಿಲ್ ಯುದ್ಧದ ಹೃದಯಸ್ಪರ್ಶಿ ಕಥೆ ಹೇಳುವ ಈ 9 ಪುಸ್ತಕಗಳನ್ನು ಓದಲೇಬೇಕು!

Kargil Vijay Diwas 2024

ಯುದ್ಧ (WAR) ಎಂದಿಗೂ ಸಂಭ್ರಮ ಪಡುವ ಸಂಗತಿಯಲ್ಲ. ಇದು ಆಳವಾಗಿ ಬೇರೂರಿರುವ ದ್ವೇಷದಿಂದ ಉದ್ಭವಿಸುತ್ತದೆ. ಇದರ ಪರಿಣಾಮವಾಗಿ ಸಾವಿರಾರು ಸೈನಿಕರು ಜೀವ ಕಳೆದುಕೊಂಡರೆ ಅವರ ಕುಟುಂಬಗಳು ಅತಂತ್ರವಾಗುತ್ತವೆ. 1999ರ ಕಾರ್ಗಿಲ್ ಯುದ್ಧವೂ (Kargil Vijay Diwas 2024) ಇದೇ ರೀತಿಯ ಸನ್ನಿವೇಶವನ್ನು ಉಂಟು ಮಾಡಿತ್ತು. ಭಾರತದ ಗಡಿ ಭಾಗದಲ್ಲಿ ಪಾಕಿಸ್ತಾನದ (India and pakistan) ಸೈನಿಕರು ಆಕ್ರಮಿಸಿಕೊಂಡಿದ್ದ ಭೂಭಾಗವನ್ನು ಮರಳಿ ಪಡೆಯಲು ಭಾರತ ಮತ್ತು ಪಾಕಿಸ್ತಾನದ ನಡುವೆ ಸಂಘರ್ಷ ಏರ್ಪಟ್ಟಿತು.

ಯುದ್ಧದಲ್ಲಿ ಭಾರತದ ವಿಜಯದ ಹೊರತಾಗಿಯೂ ಹಲವಾರು ಸೈನಿಕರು ಜೀವ ಕಳೆದುಕೊಂಡರು. ಅವರ ತ್ಯಾಗಕ್ಕೆ ಬೆಲೆಯನ್ನು ಕಟ್ಟಲಾಗದು. ಧೈರ್ಯಶಾಲಿಯಾದ ಈ ಸೈನಿಕರಿಗೆ ಗೌರವ ಸಲ್ಲಿಸುವ ಮತ್ತು ಯುದ್ಧದ ಸಂಕೀರ್ಣ ರಾಜಕೀಯ ಆಯಾಮಗಳ ಮೇಲೆ ಬೆಳಕು ಚೆಲ್ಲುವ ಹಲವು ಪುಸ್ತಕಗಳು ಲಭ್ಯವಿವೆ. ಇದನ್ನು ಓದುವ ಅವಕಾಶ ಸಿಕ್ಕರೆ ತಪ್ಪಿಸಿಕೊಳ್ಳಬೇಡಿ.

ಕಾರ್ಗಿಲ್ ವಿಜಯ್ ದಿವಸ್ ನ 25ನೇ ವಾರ್ಷಿಕೋತ್ಸವದ ಈ ಸಂದರ್ಭದಲ್ಲಿ ಕಾರ್ಗಿಲ್ ಯುದ್ಧದ ಕುರಿತು ಓದಲೇಬೇಕಾದ 9 ಪುಸ್ತಕಗಳ ಪಟ್ಟಿ ಇಲ್ಲಿದೆ.

Kargil Vijay Diwas 2024


1. ಕಾರ್ಗಿಲ್: ಅನ್‌ಟೋಲ್ಡ್‌ ಸ್ಟೋರೀಸ್

ರಚನಾ ಬಿಷ್ತ್ ರಾವತ್ ಅವರ ಈ ಪುಸ್ತಕ ಕಾರ್ಗಿಲ್ ಯುದ್ಧದ ಸಂದರ್ಭದಲ್ಲಿ ಎದುರಾಗಿದ್ದ ಹಲವು ಕಥೆಗಳನ್ನು ಹೇಳುತ್ತದೆ. ಸೈನಿಕರ ಅಸಾಧಾರಣದ ಧೈರ್ಯದ ಕಥೆಗಳನ್ನು ಹೇಳುತ್ತದೆ. ಇದರಲ್ಲಿ ಕೇವಲ ಸೈನಿಕರ ಕಥೆ ಇಲ್ಲ ಅವರನ್ನು ಹೆಚ್ಚು ಪ್ರೀತಿಸುವವರ ಬಗ್ಗೆಯೂ ಉಲ್ಲೇಖವಿದೆ. ಯುದ್ಧದಲ್ಲಿ ಬದುಕುಳಿದವರು ಮತ್ತು ಹುತಾತ್ಮರ ಕುಟುಂಬದ ಸಂದರ್ಶನಗಳನ್ನು ಇದು ಒಳಗೊಂದಿಗೆ. ಈ ಪುಸ್ತಕವು ನಮಗಾಗಿ ತಮ್ಮ ಪ್ರಾಣವನ್ನು ತ್ಯಾಗ ಮಾಡಿದ 527 ಯುವ ವೀರರಿಗೆ ಮತ್ತು ಅದೇ ರೀತಿ ಮಾಡಲು ಸಿದ್ಧರಾದ ಅಸಂಖ್ಯಾತ ಇತರರಿಗೆ ನೀಡಿರುವ ಗೌರವವಾಗಿದೆ.
ಪುಸ್ತಕದ ದರ: 194 ರೂ.

Kargil Vijay Diwas 2024


2. ವಿಜಯಂತ್ ಅಟ್ ಕಾರ್ಗಿಲ್

ಕಾರ್ಗಿಲ್‌ ವೀರ ವಿಜಯಂತ್‌ ಅವರ ಸಾಹಸದ ಕುರಿತು ಕರ್ನಲ್ ವಿ.ಎನ್. ಥಾಪರ್ ಮತ್ತು ನೇಹಾ ದ್ವಿವೇದಿ ಈ ಕೃತಿ ರಚಿಸಿದ್ದಾರೆ. ವಿಜಯಂತ್‌ ಅವರು ಇಪ್ಪತ್ತೆರಡನೇ ವಯಸ್ಸಿನಲ್ಲಿ ಕಾರ್ಗಿಲ್ ಯುದ್ಧದಲ್ಲಿ ಹುತಾತ್ಮರಾಗುವ ಮೊದಲು ತಮ್ಮ ಕುಟುಂಬಕ್ಕೆ ಕಳುಹಿಸಿದ ಕೊನೆಯ ಪತ್ರದಲ್ಲಿ ಏನಿದೆ ಎಂಬುದು ಇದರಲ್ಲಿದೆ. ಟೋಲೋಲಿಂಗ್ ಮತ್ತು ನಾಲ್ ಯುದ್ಧದಲ್ಲಿ ಅವರು ತೋರಿರುವ ಶೌರ್ಯವನ್ನು ಈ ಕೃತಿಯಲ್ಲಿ ವರ್ಣಿಸಲಾಗಿದೆ.
ಪುಸ್ತಕದ ದರ: 283 ರೂ.

Kargil Vijay Diwas 2024


3. ಕಾರ್ಗಿಲ್ ವಾರ್: ಫ್ರಮ್ ಸರ್ಪ್ರೈಸ್ ಟು ವಿಕ್ಟರಿ

ಜನರಲ್ ವಿ.ಪಿ. ಮಲಿಕ್ ಅವರ ಈ ಕೃತಿ 1999ರ ಫೆಬ್ರುವರಿಯಲ್ಲಿ ಜಿಹಾದಿ ಉಗ್ರಗಾಮಿಗಳಂತೆ ವೇಷ ಧರಿಸಿ ಪಾಕಿಸ್ತಾನಿ ಸೇನೆಯ ಸಿಬ್ಬಂದಿ ಕಾರ್ಗಿಲ್‌ನ ಒರಟಾದ ಪ್ರದೇಶದಲ್ಲಿ ನುಸುಳಿದ್ದನ್ನು ವಿವರಿಸಿದೆ. ಇದು ಯುದ್ಧವನ್ನು ಪ್ರಚೋದಿಸಿದ್ದನ್ನು ಅವರು ವಿವರಿಸಿದ್ದಾರೆ. ಜನರಲ್ ವಿ.ಪಿ. ಮಲಿಕ್ ಅವರ ಈ ಪುಸ್ತಕವು ಶತ್ರುಗಳ ತಂತ್ರಗಳು, ಭಾರತದ ರಕ್ಷಣಾ ಸನ್ನದ್ಧತೆ ಮತ್ತು ಕಲಿತ ನಿರ್ಣಾಯಕ ಪಾಠಗಳನ್ನು ವಿಶ್ಲೇಷಿಸುತ್ತದೆ.
ಪುಸ್ತಕದ ದರ: 383 ರೂ.

Kargil Vijay Diwas 2024

4. ಡಿಸ್‌ಪ್ಯಾಚೆಸ್ ಫ್ರಮ್ ಕಾರ್ಗಿಲ್‌

ಶೃಂಜೋಯ್ ಚೌಧರಿ ಅವರ ಈ ಕೃತಿ ಯುದ್ಧದ ವಾಸ್ತವತೆಯನ್ನು ವಿವರಿಸುತ್ತದೆ. ಪ್ರಮುಖ ದಾಳಿಗಳು ಮತ್ತು ಸೈನಿಕರು ಮತ್ತು ಅಧಿಕಾರಿಗಳ ಕಟುವಾದ ನಿರ್ಧಾರಗಳು, ಯುದ್ಧದ ಸಾರವನ್ನು ಇದು ಒಳಗೊಂಡಿದೆ. ಗ್ರೆನೇಡಿಯರ್ ಯೋಗೇಂದ್ರ ಸಿಂಗ್ ಯಾದವ್ ಅವರ ಶೂರ ಹೋರಾಟವನ್ನು ಇದು ಪ್ರತಿಬಿಂಬಿಸಿದೆ.
ಪುಸ್ತಕದ ದರ: 211 ರೂ.

Kargil Vijay Diwas 2024

5. ತ್ರಿಶೂಲ್, ಲಡಾಖ್ ಆಂಡ್ ಕಾರ್ಗಿಲ್

ಕಾರ್ಗಿಲ್ ಯುದ್ಧದ ಸಮಯದಲ್ಲಿ ಸೇವೆ ಸಲ್ಲಿಸಿದ ನಿವೃತ್ತ ಬ್ರಿಗೇಡಿಯರ್ ಅಶೋಕ್ ಮಲ್ಹೋತ್ರಾ ಅವರು ಯುದ್ಧಗಳು ಮತ್ತು ಕೆಚ್ಚೆದೆಯ ಸೈನಿಕರು ಅನುಭವಿಸಿದ ಕಷ್ಟಗಳನ್ನು ಪುಸ್ತಕದ ರೂಪದಲ್ಲಿ ದಾಖಲಿಸಿದ್ದಾರೆ.
ಪುಸ್ತಕದ ದರ: 595 ರೂ.

Kargil Vijay Diwas 2024

6. ದಿ ಕಾರ್ಗಿಲ್ ವಾರ್

ಪ್ರವೀಣ್ ಸ್ವಾಮಿಯವರು ಬರೆದಿರುವ ಈ ಕೃತಿ 1999ರಲ್ಲಿ ಕಾರ್ಗಿಲ್‌ನಲ್ಲಿ ಪಾಕಿಸ್ತಾನದ ಒಳನುಗ್ಗುವಿಕೆಯನ್ನು ಭಾರತ ಹೇಗೆ ಹಿಮ್ಮೆಟ್ಟಿಸಿತು ಎಂಬುದನ್ನು ವರ್ಣಿಸಿದೆ. ಕಾರ್ಗಿಲ್ ಸಂಘರ್ಷದ ವೇಳೆ ನಿರ್ಲಕ್ಷಿಸಲ್ಪಟ್ಟ ಅಂಶಗಳು, ರಾಜಕೀಯ ಚಿತ್ರಣ, ಪೋಖ್ರಾನ್ ಪರೀಕ್ಷೆ ಮತ್ತು ಯುದ್ಧದ ನಡುವಿನ ಪರಿಸ್ಥಿತಿ ಸೇರಿದಂತೆ ಈ ಕೃತಿ ಭೌಗೋಳಿಕ ರಾಜಕೀಯ ಸಂಕೀರ್ಣತೆಗಳ ಮೇಲೆ ಬೆಳಕು ಚೆಲ್ಲುತ್ತದೆ.
ಪುಸ್ತಕದ ದರ: 175 ರೂ.

Kargil Vijay Diwas 2024


7. ದಿ ಬ್ರೇವ್: ಪರಮ್‌ ವೀರ್‌ ಚಕ್ರ ಸ್ಟೋರೀಸ್‌

ರಚನಾ ಬಿಷ್ತ್ ರಾವತ್ ಅವರ ಈ ಕೃತಿ ದೇಶದ ಅತ್ಯುನ್ನತ ಮಿಲಿಟರಿ ಗೌರವವನ್ನು ನೀಡಲು ಕಾರಣವಾದ ಅಸಾಮಾನ್ಯ ಸಾಹಸ ಚಿತ್ರಣಗಳನ್ನು ಒಳಗೊಂಡಿದೆ. ಭಾರತದ ಮಿಲಿಟರಿ ಇತಿಹಾಸದ ಆಳವನ್ನು ವರ್ಣಿಸಿದೆ. ರಾವತ್ ಅವರು ಭಾರತದ ವೀರ ಸೈನಿಕರ ಧೈರ್ಯದ ಕಥೆಗಳಿಗೆ ಜೀವ ತುಂಬುವ ಇಪ್ಪತ್ತೊಂದು ಅಂಶಗಳನ್ನು ಪ್ರಸ್ತುತಪಡಿಸಿದ್ದಾರೆ. ಪೋಷಕರು, ಒಡಹುಟ್ಟಿದವರು, ಮಕ್ಕಳು ಮತ್ತು ಅವರ ಸಹ ಸೈನಿಕರು ಸೇರಿದಂತೆ ಅವರ ಕುಟುಂಬಗಳೊಂದಿಗೆ ಹೃತ್ಪೂರ್ವಕ ಸಂಭಾಷಣೆಗಳನ್ನು ಈ ಕೃತಿಯಲ್ಲಿ ಹೇಳಲಾಗಿದೆ.
ಪುಸ್ತಕದ ದರ: 194 ರೂ.

Kargil Vijay Diwas 2024


8. ಟೈಗರ್ ಆಫ್ ಡ್ರಾಸ್: ಕ್ಯಾಪ್ಟನ್ ಅನುಜ್ ನಯ್ಯರ್, 23, ಕಾರ್ಗಿಲ್ ಹೀರೋ

ಮೀನಾ ನಯ್ಯರ್ ಮತ್ತು ಹಿಮ್ಮತ್ ಸಿಂಗ್ ಶೇಖಾವತ್ ಅವರು ಬರೆದಿರುವ ಈ ಕೃತಿ ಕ್ಯಾಪ್ಟನ್ ಅನುಜ್ ನಯ್ಯರ್ ಮತ್ತು ಅವರೊಂದಿಗೆ ಇದ್ದ 17 ಸೈನಿಕರ ಹೋರಾಟದ ಕಥೆಯನ್ನು ವರ್ಣಿಸುತ್ತದೆ. ಕ್ಯಾಪ್ಟನ್ ನಯ್ಯರ್ ರಾಕೆಟ್ ಚಾಲಿತ ಗ್ರೆನೇಡ್‌ನಿಂದ ಶತ್ರುಗಳನ್ನು ತಟಸ್ಥಗೊಳಿಸುವಾಗ ಹದಿನೈದು ಜನರನ್ನು ಉಳಿಸುವಾಗ ತನ್ನ ಪ್ರಾಣವನ್ನು ತ್ಯಾಗ ಮಾಡಿದರು. ಅವರಿಗೆ ಮರಣೋತ್ತರವಾಗಿ ಭಾರತದ ಎರಡನೇ ಅತ್ಯುನ್ನತ ಶೌರ್ಯ ಪ್ರಶಸ್ತಿಯಾದ ಮಹಾವೀರ ಚಕ್ರವನ್ನು 2000ರಲ್ಲಿ ನೀಡಲಾಯಿತು.
ಪುಸ್ತಕದ ದರ: 194 ರೂ.

ಇದನ್ನೂ ಓದಿ: Union Budget 2024: ಹಳೇ ತೆರಿಗೆ Vs ಹೊಸ ತೆರಿಗೆ; ಯಾರಿಗೆ ಯಾವುದು ಅನುಕೂಲ? ಇಲ್ಲಿದೆ ಕಂಪ್ಲೀಟ್ ಮಾಹಿತಿ

Kargil Vijay Diwas 2024


9. ದಿ ಕಾರ್ಗಿಲ್ ಗರ್ಲ್: ಆನ್ ಬಯೋಗ್ರಫಿ

ನಿವೃತ್ತ ಲೆಫ್ಟಿನೆಂಟ್ ಗುಂಜನ್ ಸಕ್ಸೇನಾ ಅವರೊಂದಿಗೆ ಕಿರಣ್ ನಿರ್ವಾಣ್ ಬರೆದಿರುವ ಈ ಕೃತಿ ಗುಂಜನ್ ಸಕ್ಸೇನಾ ಅವರ ಜೀವನ ಕಥೆಯನ್ನು ಒಳಗೊಂಡಿದೆ. 1999ರ ಕಾರ್ಗಿಲ್ ಸಂಘರ್ಷದ ಸಮಯದಲ್ಲಿ ಅವರು ತಮ್ಮ ಸಾಮರ್ಥ್ಯದಿಂದ ‘ಕಾರ್ಗಿಲ್ ಗರ್ಲ್’ ಎಂದೇ ಕರೆಯಲ್ಪಡುತ್ತಾರೆ.
ಪುಸ್ತಕದ ದರ: 234 ರೂ.

Exit mobile version