ಒಂದು ಹಂತದ ಯುದ್ಧ ಗೆದ್ದು ಮತ್ತೊಂದು ಹಂತದ ಯುದ್ಧಕ್ಕೆ ಹೋಗುವಾಗ ʼಯೇ ದಿಲ್ ಮಾಂಗೇ ಮೋರ್ʼ ಎಂದು ಡೈಲಾಗ್ ಹೊಡೆದಿದ್ದ ಕ್ಯಾಪ್ಟನ್ ವಿಕ್ರಮ್ ಬಾತ್ರಾ (Captain Vikram Batra) ಅವರ ನುಡಿಗಳು ಇಂದಿಗೂ ದೇಶ ಭಕ್ತರ ಮನದಲ್ಲಿ ಅನುರಣಿಸುತ್ತಿದೆ. ಕಾರ್ಗಿಲ್ ವಿಜಯ್ ದಿವಸ್‌ನ (Kargil Vijay Diwas 2024) ಈ ಸಂದರ್ಭದಲ್ಲಿ ಇಂತಹ ವೀರ ಘೋಷಗಳು (army leader) ಮತ್ತೆ ಮತ್ತೆ ನೆನಪಾಗುತ್ತವೆ.
ಯೇ ದಿಲ್ ಮಾಂಗೇ ಮೋರ್…ಎನ್ನುವುದು ಕೇವಲ ಕ್ಯಾಪ್ಟನ್ ವಿಕ್ರಮ್ ಬಾತ್ರಾ ಅವರು ಆಡಿದ ಮಾತುಗಳು ಮಾತ್ರ ಆಗಿರಲಿಲ್ಲ. ಅದು ಎಲ್ಲ ಅಡೆತಡೆಗಳನ್ನು ಎದುರಿಸಿ ಪಾಕಿಸ್ತಾನದ ಸೇನೆಯ ವಿರುದ್ಧ ಜಯ ಗಳಿಸಲು ಅವರ ಅಚಲವಾದ ಇಚ್ಛೆಯನ್ನು ಬಿಂಬಿಸಿತ್ತು. ಇದು ಉಳಿದ ಸೈನಿಕರಿಗೆ ಸ್ಫೂರ್ತಿಯ ಸೆಲೆಯಾಯಿತು.
ಕ್ಯಾಪ್ಟನ್ ಬಾತ್ರಾ ಅವರ ಹೇಳಿಕೆಗಳು ಇಂದಿಗೂ ಅನೇಕ ಭಾರತೀಯರು ದೇಶಕ್ಕಾಗಿ ತಮ್ಮ ಶೌರ್ಯ, ಬದ್ಧತೆ ಮತ್ತು ಎಂದಿಗೂ ಬಿಟ್ಟುಕೊಡದ ಮನಸ್ಥಿತಿಯನ್ನು ತೋರಿಸಲು ಪ್ರೇರೇಪಿಸುತ್ತಿದೆ. ಕಾರ್ಗಿಲ್ ವಿಜಯ್ ದಿವಸ್‌ನ ಈ ಸಂದರ್ಭದಲ್ಲಿ ದೇಶ ಪ್ರೇಮ ನಮ್ಮಲ್ಲೂ ಜಾಗೃತಗೊಳಿಸುವ ಕೆಲವು ಪ್ರೇರಕ ಮಾತುಗಳು ಇಲ್ಲಿವೆ. ಇದನ್ನು ಪ್ರತಿಯೊಬ್ಬರೂ ಓದಲೇಬೇಕು.
ಕ್ಯಾಪ್ಟನ್ ವಿಕ್ರಮ್ ಬಾತ್ರಾ ಅವರ ಅಮರ ನುಡಿಗಳು
ಕಾರ್ಗಿಲ್ ಯುದ್ಧದ ಸನ್ನಿವೇಶದಲ್ಲಿ ಕ್ಯಾಪ್ಟನ್ ವಿಕ್ರಮ್ ಬಾತ್ರಾ ಅವರ ಹೇಳಿರುವ ಸ್ಫೂರ್ತಿದಾಯಕ ಮಾತುಗಳು ಇಂತಿವೆ:
- – ನಾನು ಖಂಡಿತ ಮರಳಿ ಬರುತ್ತೇನೆ. ಒಂದೋ ನಾನು ತ್ರಿವರ್ಣ ಧ್ವಜವನ್ನು ಹಾರಿಸಿ ಬರುತ್ತೇನೆ. ಅಥವಾ ನಾನು ಅದರಲ್ಲಿ ಸುತ್ತಿಕೊಂಡು ಬರುತ್ತೇನೆ. ಆದರೆ ನಾನು ಹಿಂತಿರುಗುವುದು ಮಾತ್ರ ಖಚಿತ!
- – ಯೇ ದಿಲ್ ಮಾಂಗೇ ಮೋರ್!
- – ನಮ್ಮ ದೇಶದ ಧ್ವಜವನ್ನು ಕಾಪಾಡುವುದು ನಮಗೆ ಜೀವಕ್ಕಿಂತ ಹೆಚ್ಚು. ಸೈನಿಕರ ಕೊನೆಯ ಉಸಿರು ಇರುವವರೆಗೂ ಅದು ಹಾರುತ್ತದೆ. ನಾನು ನನ್ನ ಸಮವಸ್ತ್ರಕ್ಕೆ ಮಾತ್ರ ಅಂಟಿಕೊಂಡಿಲ್ಲ. ನನ್ನ ರಾಷ್ಟ್ರದ ಗೌರವಕ್ಕೂ ಅಂಟಿಕೊಂಡಿದ್ದೇನೆ.
- – ನಾವು ಗೆಲ್ಲಲು ಹೋರಾಡುತ್ತೇವೆ. ಹೋರಾಡಿ ಗೆಲ್ಲುತ್ತೇವೆ. ಎಂದಿಗೂ ಭರವಸೆ ಕಳೆದುಕೊಳ್ಳಬೇಡಿ.
- – ಸ್ವಯಂಸೇವಕನ ಹೃದಯಕ್ಕಿಂತ ಬಲವಾದದ್ದು ಯಾವುದೂ ಇಲ್ಲ.
ಕಾರ್ಗಿಲ್ ಸಮರ ಸೇನಾನಿಗಳು ಹೇಳಿದ್ದ ಮಾತುಗಳಿವು:
ಶತ್ರುಗಳು ನಮ್ಮಿಂದ ಕೇವಲ 50 ಗಜಗಳಷ್ಟು ದೂರದಲ್ಲಿದ್ದಾರೆ. ಅವರು ಬೆಂಕಿ ಉಗುಳುತ್ತಿದ್ದಾರೆ. ಆದರೆ ಒಂದೊಂದು ಇಂಚೂ ಹಿಂತೆಗೆದುಕೊಳ್ಳದೆ ಬಿಡುವುದಿಲ್ಲ. ಕೊನೆಯವರೆಗೂ ಹೋರಾಡುತ್ತೇವೆ.
– ಮೇಜರ್ ಸೋಮನಾಥ ಶರ್ಮಾ
ಇದನ್ನೂ ಓದಿ: Kargil Vijay Diwas 2024: ಗುಂಡುಗಳು ದೇಹ ತೂರಿದ್ದರೂ ಹಿಂದೆ ಸರಿಯದೆ ಶತ್ರುಗಳನ್ನು ಹಿಮ್ಮೆಟ್ಟಿಸಿದರು!
ಶತ್ರುಗಳು ಎಷ್ಟೇ ಜೋರಾಗಿ ದಾಳಿ ಮಾಡಲಿ. ನಾನು ನನ್ನ ಟ್ಯಾಂಕ್ ಬಿಟ್ಟು ಕದಲುವುದಿಲ್ಲ. ನನ್ನ ಗನ್ ಇನ್ನೂ ಕೆಲಸ ಮಾಡುತ್ತಿದೆ. ಕಿಡಿಗೇಡಿಗಳನ್ನು ನಾನು ಬಲಿ ಪಡೆಯುತ್ತೇನೆ.
– ಲೆಫ್ಟಿನೆಂಟ್ ಅರುಣ್ ಖೇತರ್ ಪಾಲ್
ಏನೂ ಮಾಡದೇ ಬದುಕುವುದಕ್ಕಿಂತ ಏನಾದರೂ ಸಾಧಿಸಿ ಸಾಯುವುದೇ ಮೇಲು.
– ಕ್ಯಾಪ್ಟನ್ ಮನೋಜ್ ಕುಮಾರ್ ಪಾಂಡೆ