ಬಿಹಾರದ ಪಾಟ್ನಾ ರೈಲ್ವೆ ಸ್ಟೇಶನ್ನ (Patna Railway Junction)10ನೇ ಪ್ಲಾಟ್ಫಾರ್ಮ್ನಲ್ಲಿ ಭಾನುವಾರ ಬೆಳಗ್ಗೆ 9.30ರ ಹೊತ್ತಿಗೆ, ಮೂರು ನಿಮಿಷಗಳ ಕಾಲ ಅಶ್ಲೀಲ ಚಿತ್ರ ಪ್ರದರ್ಶನವಾಗಿತ್ತು. ಅಲ್ಲಿದ್ದ ನೂರಾರು ಪ್ರಯಾಣಿಕರು ಮುಜುಗರಗೊಂಡಿದ್ದರೆ, ಕೆಲವರು ಅದನ್ನು ವಿಡಿಯೊ ಮಾಡಿ ಸೋಷಿಯಲ್ ಮೀಡಿಯಾಗಳಲ್ಲಿ ವೈರಲ್ ಮಾಡಿದ್ದರು. ಅದರ ಬೆನ್ನಲ್ಲೇ ಈ ಟಿವಿ ಪರದೆ ಮೇಲೆ ಜಾಹೀರಾತು ಪ್ರಸಾರ ಮಾಡಲು ಗುತ್ತಿಗೆ ತೆಗೆದುಕೊಂಡಿದ್ದ ದತ್ತಾ ಸ್ಟುಡಿಯೊ ಕಂಪನಿ ಪ್ರೈವೇಟ್ ಲಿಮಿಟೆಡ್ ವಿರುದ್ಧ ರೈಲ್ವೆ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ. ಆ ಏಜೆನ್ಸಿಯನ್ನು ಬ್ಲ್ಯಾಕ್ ಲಿಸ್ಟ್ಗೆ ಹಾಕಲಾಗಿದೆ. ಇಷ್ಟೆಲ್ಲದರ ಮಧ್ಯೆ ಈ ಅಶ್ಲೀಲ ವಿಡಿಯೊ ಪ್ರಸಾರವಾದ ಬಗ್ಗೆ ಅಮೆರಿಕದ ಪೋರ್ನ್ಸ್ಟಾರ್ ಕೇಂದ್ರಾ ಲಸ್ಟ್ ಅವರು ಖುಷಿ ವ್ಯಕ್ತಪಡಿಸಿದ್ದಾರೆ. ಇದು ನನ್ನದೇ ವಿಡಿಯೊ ಇರಬಹುದು ಎನ್ನಿಸುತ್ತದೆ ಎಂದಿದ್ದಾರೆ.
ಸೋಷಿಯಲ್ ಮೀಡಿಯಾದಲ್ಲಿ ಈ ವಿಡಿಯೊ ಬ್ಲರ್ ರೂಪದಲ್ಲಿ ಹರಿದಾಡುತ್ತಿದೆ. ಕೆಲವು ವಿಡಿಯೊಗಳು ಸಂಪೂರ್ಣ ಬ್ಲರ್ ಆಗಿದ್ದರೆ, ಮತ್ತೆ ಕೆಲವು ಅರ್ಧಂಬರ್ಧ ಮಸುಬಾಗಿವೆ. ಅದರ ಮಧ್ಯೆ ಕೇಂದ್ರಾ ಲಸ್ಟ್ ಅವರು ತಮ್ಮ ಒಂದು ಮಾದಕ ಫೋಟೋವನ್ನು ಪೋಸ್ಟ್ ಮಾಡಿಕೊಂಡು, ಇಂಡಿಯಾ ಎಂದು ಬರೆದುಕೊಂಡಿದ್ದಾರೆ. ಅದರ ಮುಂದೆ ಭಾರತದ ಧ್ವಜದ ಇಮೋಜಿ ಹಾಕಿದ್ದಾರೆ. ಬಿಹಾರ ರೈಲ್ವೆ ಸ್ಟೇಶನ್ ಎಂದು ಹ್ಯಾಷ್ಟ್ಯಾಗ್ (#BiharRailwayStation) ಹಾಕಿದ್ದಾರೆ.
ಅವರ ಈ ಟ್ವೀಟ್ಗೆ ನೆಟ್ಟಿಗರೊಬ್ಬರು ಕಮೆಂಟ್ ಮಾಡಿ ‘ಇದು ನಿಮ್ಮ ವಿಡಿಯೊವಾ? ನಿಮಗೆ ಗೊತ್ತಾ?’ ಎಂದು ಪ್ರಶ್ನಿಸಿದ್ದಾರೆ. ಅದಕ್ಕೆ ಉತ್ತರಿಸಿದ ಕೇಂದ್ರಾ ಲಸ್ಟ್ ‘ನಾನೂ ಹಾಗಂದುಕೊಂಡಿದ್ದೇನೆ’ ಎಂದು ಹೇಳಿದ್ದಾರೆ. ಇನ್ನುಳಿದಂತೆ ಹಲವು ನೆಟ್ಟಿಗರು ಕೇಂದ್ರಾ ಅವರ ಟ್ವೀಟ್ಗೆ ಕಮೆಂಟ್ ಮಾಡುತ್ತಿದ್ದಾರೆ. ಇನ್ನೊಬ್ಬರಂತೂ ಪಕ್ಕಾ ಇದು ನಿಮ್ಮ ವಿಡಿಯೊವೇ. ಭಾರತದಲ್ಲಿ ಇನ್ಮುಂದೆ ನಿಮ್ಮ ಪೋರ್ನ್ ವಿಡಿಯೊಗಳು ಸಖತ್ ಫೇಮಸ್ ಆಗಲಿವೆ ಎಂದಿದ್ದಾರೆ.