ನವ ದೆಹಲಿ: ತಮ್ಮ ಹುದ್ದೆಯಿಂದ ತೊರೆಯುವಂತೆ 9 ವಿಶ್ವವಿದ್ಯಾಲಯಗಳ ಕುಲಪತಿಗಳಿಗೆ ಕೇರಳ ರಾಜ್ಯಪಾಲ (Kerala Governor) ಆರೀಫ್ ಮೊಹಮ್ಮದ್ ಖಾನ್ ನೀಡಿರುವ ಆದೇಶದ ವಿರುದ್ಧ ಕೇರಳ ಸರ್ಕಾರವು ಹೈಕೋರ್ಟ್ ಮೊರೆ ಹೋಗಿದ್ದು, ಸೋಮವಾರ ಸಂಜೆ 4 ಗಂಟೆಗೆ ಈ ನ್ಯಾಯಾಲಯವು ವಿಚಾವರಣೆ ನಡೆಸಲಿದೆ. ತಮ್ಮ ಆದೇಶಕ್ಕೆ ಕೇರಳ ರಾಜ್ಯಪಾಲ ಆರೀಫ್ ಮೊಹಮ್ಮದ್ ಖಾನ್ ಅವರು ಸುಪ್ರೀಂ ಕೋರ್ಟ್ ಆದೇಶವನ್ನು ಬೆಂಬಲವಾಗಿ ಬಳಸಿಕೊಂಡಿದ್ದಾರೆ. ಇದರೊಂದಿಗೆ ಕೇರಳ ಲೆಫ್ಟ್ ಡೆಮಾಕ್ರಟಿಕ್ ಫ್ರಂಟ್(ಎಲ್‌ಡಿಎಫ್) ಮತ್ತು ರಾಜ್ಯಪಾಲರ ನಡುವಿನ ವಿವಾದವು ತಾರಕ್ಕಕೇರಿದೆ.
ರಾಜ್ಯಪಾಲರ ಆದೇಶದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿರುವ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು, ವಿಸಿಗಳಿಗೆ ರಾಜೀನಾಮೆ ನೀಡುವಂತೆ ಹೇಳುವ ಅಧಿಕಾರ ರಾಜ್ಯಪಾಲರಿಗೆ ಇಲ್ಲ ಎಂದು ತಿಳಿಸಿದ್ದಾರೆ. ಅಲ್ಲದೇ ರಾಜ್ಯಪಾಲರ ಆರೀಫ್ ಮೊಹಮ್ಮದ್ ಅವರ ವಿರುದ್ಧ ತಮ್ಮ ತೀವ್ರ ಆಕ್ರೋಶವನ್ನು ಹೊರ ಹಾಕಿದ್ದಾರೆ.
ರಾಜ್ಯದಲ್ಲಿರುವ ವಿಶ್ವವಿದ್ಯಾಲಯಗಳನ್ನು ಹಾಳು ಮಾಡುವುದಕ್ಕಾಗಿಯೇ ರಾಜ್ಯಪಾಲರು ಈ ರೀತಿಯಾಗಿ ನಡೆದುಕೊಳ್ಳುತ್ತಿದ್ದಾರೆ. ರಾಜ್ಯಪಾಲರೇ ವಿಶ್ವ ವಿದ್ಯಾಲಯಗಳ ಕುಲಪತಿಗಳನ್ನು ನೇಮಕ ಮಾಡುತ್ತಾರೆ. ಒಂದು ವೇಳೆ, ಈ ನೇಮಕಾತಿಯಲ್ಲಿ ಯಾವುದೇ ಅವ್ಯವಹಾರ ನಡೆದಿದ್ದರೆ ಅದಕ್ಕೆ ಅವರೇ ಉತ್ತರಿಸಬೇಕಾಗುತ್ತದೆ ಎಂದು ತಿರುಗೇಟು ನೀಡಿದ್ದಾರೆ.
ಕೇರಳ ವಿವಿ, ಮಹಾತ್ಮ ಗಾಂಧಿ ವಿವಿ, ಕೊಚಿನ್ ವಿಜ್ಞಾನ ಮತ್ತು ತಂತ್ರಜ್ಞಾನ ವಿವಿ ಸೇರಿದಂತೆ ಒಬ್ಬ ವಿಶ್ವವಿದ್ಯಾಲಯಗಳ ಕುಲಪತಿಗಳಿಗೆ ಆದೇಶ ಜಾರಿ ಮಾಡಿ, ತಮ್ಮ ಹುದ್ದೆಗಳಿಗೆ ರಾಜೀನಾಮೆ ನೀಡುವಂತೆ ರಾಜ್ಯಪಾಲ ಆರೀಫ್ ಮೊಹಮ್ಮದ್ ಖಾನ್ ಅವರು ಸೂಚಿಸಿದ್ದಾರೆ. ಕೇರಳ ಸರ್ಕಾರ ಮತ್ತು ಕೇರಳ ರಾಜ್ಪಾಲರ ನಡುವೆ ಹಗ್ಗ ಜಗ್ಗಾಟವು ತುಂಬ ದಿನಗಳಿಂದಲೂ ಇದೆ.
ಇದನ್ನೂ ಓದಿ | Kerala Governor | ಕೇರಳ ಸರ್ಕಾರ v/s ಗವರ್ನರ್ : ಹಳೆ ವಿಡಿಯೋ ಷೇರ್ ಮಾಡಿದ ಖಾನ್!