Site icon Vistara News

Kerala Govt: ಕೇರಳ ಸರ್ಕಾರಿ ನೌಕರರ ಪೈಕಿ ಮೂರರಲ್ಲಿ ಒಬ್ಬ ಮುಸ್ಲಿಂ ಅಥವಾ ಕ್ರಿಶ್ಚಿಯನ್

Kerala govt

ಕೇರಳ ಸರ್ಕಾರದ (Kerala Govt) ಪ್ರತಿ ಮೂರು ಸರ್ಕಾರಿ ಉದ್ಯೋಗಿಗಳಲ್ಲಿ ಒಬ್ಬ (government employee) ಮುಸ್ಲಿಂ (Muslim) ಅಥವಾ ಕ್ರಿಶ್ಚಿಯನ್ (Christian) ಆಗಿದ್ದಾರೆ. ಈ ರಾಜ್ಯದಲ್ಲಿ ಕೇವಲ 26 ಯಾದವರು, 28 ಕ್ಷತ್ರಿಯರು, 27 ಜೈನರು ಸರ್ಕಾರಿ ಉದ್ಯೋಗದಲ್ಲಿದ್ದಾರೆ ಎಂಬುದನ್ನು ಒಪಿಂಡಿಯಾ ಡೇಟಾ ಬಹಿರಂಗಪಡಿಸಿದೆ.

ಕೇರಳ ವಿಧಾನಸಭೆಯಲ್ಲಿ (kerala vidhansabha) ಮಂಡಿಸಲಾದ ಈ ಅಂಕಿ ಅಂಶವು ರಾಜ್ಯದಲ್ಲಿ ಪ್ರಸ್ತುತ 5,45,423 ನೌಕರರು ವಿವಿಧ ಇಲಾಖೆಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಅವರಲ್ಲಿ 73,774 ಮುಸ್ಲಿಮರಾಗಿದ್ದಾರೆ. ಇದು ರಾಜ್ಯದ ಎಲ್ಲ ಸರ್ಕಾರಿ ನೌಕರರಲ್ಲಿ ಶೇ. 13.5ರಷ್ಟಿದೆ ಎಂದು ಡೇಟಾ ಬಹಿರಂಗಪಡಿಸಿದೆ.

ರಾಜ್ಯ ಸರ್ಕಾರದಲ್ಲಿ ಮುಸ್ಲಿಮರಿಗಿಂತ ಹೆಚ್ಚು ಕ್ರಿಶ್ಚಿಯನ್‌ ನೌಕರರಿದ್ದಾರೆ. ಲ್ಯಾಟಿನ್ ಚರ್ಚ್‌ನ ಸದಸ್ಯರಾಗಿರುವ 22,452 ಕಾರ್ಮಿಕರು ಕೇರಳ ಸರ್ಕಾರದ ಪರವಾಗಿ ಕೆಲಸ ಮಾಡುತ್ತಿದ್ದಾರೆ. 2,399 ಉದ್ಯೋಗಿಗಳು ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಗೊಂಡಿದ್ದಾರೆ. 929 ಕಾರ್ಮಿಕರನ್ನು ನಾಡಾರ್ ಕ್ರಿಶ್ಚಿಯನ್ ಎಂದು ಗುರುತಿಸಲಾಗಿದೆ. ಕೇರಳದಲ್ಲಿ ಸರ್ಕಾರಿ ಉದ್ಯೋಗದಲ್ಲಿರುವ ಎಲ್ಲಾ ಕ್ರಿಶ್ಚಿಯನ್ ಸಮುದಾಯಗಳ ಸಂಖ್ಯೆ 99,494. ಅವರ ಶೇಕಡಾವಾರು ಪ್ರಮಾಣವು ಶೇ. 18.25 ರಷ್ಟಾಗಿದೆ. ಅಂದರೆ ಈ ಸಂಖ್ಯೆ ಮುಸ್ಲಿಮರಿಗಿಂತ ಹೆಚ್ಚು.


ರಾಜ್ಯದಲ್ಲಿ 1,73,268 ಮುಸ್ಲಿಮರು ಮತ್ತು ಕ್ರಿಶ್ಚಿಯನ್ನರು ರಾಜ್ಯ ಸರ್ಕಾರದ ಕರ್ತವ್ಯದ ಭಾಗವಾಗಿದ್ದಾರೆ. ಒಟ್ಟು ಉದ್ಯೋಗಿಗಳಲ್ಲಿ ಈ ಎರಡೂ ಸಮುದಾಯದವರು ಶೇ. 31.5ರಷ್ಟು ಪ್ರಮಾಣದಷ್ಟಿದ್ದಾರೆ. ಗಮನಾರ್ಹ ಸಂಗತಿ ಎಂದರೆ ಸುಮಾರು ಮೂರನೇ ಒಂದು ಭಾಗದಷ್ಟು ರಾಜ್ಯ ಕಾರ್ಮಿಕರನ್ನು ಕ್ರಿಶ್ಚಿಯನ್ನರು ಮತ್ತು ಮುಸ್ಲಿಮರು ಎಂದು ವರ್ಗೀಕರಿಸಲಾಗಿದೆ.

ಇದನ್ನೂ ಓದಿ: 2025ರ ವೇಳೆಗೆ ಬಾಹ್ಯಾಕಾಶ, ಸಮುದ್ರದ ಆಳಕ್ಕೆ ಮಾನವ ಸಹಿತ ಮಿಷನ್;‌ ಕೇಂದ್ರ ಸಚಿವ ಮಹತ್ವದ ಘೋಷಣೆ

Exit mobile version