Site icon Vistara News

ಆಸ್ಟ್ರೇಲಿಯಾದಲ್ಲಿ ಖಲಿಸ್ತಾನಿ ಉಗ್ರರ ಹಾವಳಿ; ಲಕ್ಷ್ಮೀ ನಾರಾಯಣ ದೇಗುಲವನ್ನು ವಿರೂಪಗೊಳಿಸಿದ ದುಷ್ಕರ್ಮಿಗಳು

Khalistan terror vandalised hindutemple in Australia

#image_title

ಆಸ್ಟ್ರೇಲಿಯಾದ ಬ್ರಿಸ್ಬೇನ್​​ನಲ್ಲಿರುವ ಹಿಂದು ದೇವಸ್ಥಾನವನ್ನು ವಿರೂಪಗೊಳಿಸಲಾಗಿದ್ದು, ಗೋಡೆಗಳ ಮೇಲೆಲ್ಲ ಗೀಚು ಬರಹ ಬರೆಯಲಾಗಿದೆ. ಕಳೆದ ಎರಡು ತಿಂಗಳಲ್ಲಿ ಆಸ್ಟ್ರೇಲಿಯಾದಲ್ಲಿ ಧ್ವಂಸಗೊಳ್ಳುತ್ತಿರುವ ನಾಲ್ಕನೇ ದೇವಸ್ಥಾನ ಇದಾಗಿದೆ. ಶನಿವಾರ ಮುಂಜಾನೆ ಈ ಲಕ್ಷ್ಮೀನಾರಾಯಣ ದೇವಸ್ಥಾನಕ್ಕೆ ಭಕ್ತರು ಆಗಮಿಸಿದಾಗಲೇ ಘಟನೆ ನಡೆದಿದ್ದು ಬೆಳಕಿಗೆ ಬಂದಿದೆ. ಗೋಡೆಯ ಮೇಲೆಲ್ಲ ಹಿಂದೂಸ್ತಾನ್​ ಮುರದಾಬಾದ್​, ಖಲಿಸ್ತಾನ್ ಜಿಂದಾಬಾದ್ ಎಂದು ಬರೆಯಲಾಗಿದ್ದು, ಇದು ಖಲಿಸ್ತಾನಿ ಉಗ್ರರದ್ದೇ (Khalistan terror) ಕೃತ್ಯ ಎನ್ನಲಾಗಿದೆ.

ಬ್ರಿಸ್ಬೇನ್​​ನ ದಕ್ಷಿಣದಲ್ಲಿರುವ ಬರ್ಬ್ಯಾಂಕ್​ ಉಪನಗರದಲ್ಲಿ ಈ ದೇವಸ್ಥಾನವಿದ್ದು, ಪ್ರತಿದಿನ ಹಲವು ಭಕ್ತರು ಇಲ್ಲಿಗೆ ಆಗಮಿಸುತ್ತಾರೆ. ದೇಗುಲವನ್ನು ಖಲಿಸ್ತಾನಿಗಳೇ ವಿರೂಪಗೊಳಿಸಿದ್ದರೂ, ಅದನ್ನವರು ಹಿಂದು ಸಮುದಾಯದವರ ತಲೆಗೇ ಕಟ್ಟುತ್ತಿದ್ದಾರೆ ಎಂದು ಟೈಮ್ಸ್ ನೌ ಮಾಧ್ಯಮ ವರದಿ ಮಾಡಿದೆ. ಆಸ್ಟ್ರೇಲಿಯಾದಲ್ಲಿರುವ ಭಾರತದ ರಾಜಕೀಯ ಪಕ್ಷಗಳ ಬೆಂಬಲಿಗರೇ ಈ ಕೃತ್ಯ ನಡೆಸಿದ್ದಾಗಿ ಖಲಿಸ್ತಾನಿ ಗುಂಪು ಹೇಳಿದ್ದಾಗಿ ವರದಿಯಲ್ಲಿ ಉಲ್ಲೇಖಿಸಿದೆ.
ಕೆನಡಾದಲ್ಲಿ ಹಿಂದು ದೇವಾಲಯಗಳನ್ನು ಖಲಿಸ್ತಾನಿಗಳು ಒಂದರ ಬೆನ್ನಿಗೆ ಒಂದರಂತೆ ವಿರೂಪಗೊಳಿಸುತ್ತಿದ್ದಾರೆ.

ಇದನ್ನೂ ಓದಿ: ಆಸ್ಟ್ರೇಲಿಯಾದಲ್ಲಿದ್ದ ತಮಿಳುನಾಡು ಮೂಲದ ವ್ಯಕ್ತಿಯನ್ನು ಶೂಟ್ ಮಾಡಿ ಕೊಂದ ಪೊಲೀಸ್​; ಕಳವಳಕಾರಿ ಎಂದ ರಾಯಭಾರಿ ಕಚೇರಿ

ಇದೀಗ ಆಸ್ಟ್ರೇಲಿಯಾದಲ್ಲಿ ಕೂಡ ಈ ಕೃತ್ಯ ಹೆಚ್ಚಾಗುತ್ತಿದೆ. ಕೆಲವೇ ದಿನಗಳ ಹಿಂದೆ ಆಸ್ಟ್ರೇಲಿಯಾದ ವಿಕ್ಟೋರಿಯಾದಲ್ಲಿರುವ ಹಿಂದು ದೇವಸ್ಥಾನ, ಮೆಲ್ಬೋರ್ನ್​​ನ ಅಲ್ಬರ್ಟ್ ಪಾರ್ಕ್​​ನಲ್ಲಿರುವ ಹರೇ ಕೃಷ್ಣ ದೇಗುಲ ಮತ್ತು ಇದೇ ಬ್ರಿಸ್ಬೇನ್​​ನಲ್ಲಿರುವ ಗಾಯತ್ರಿ ಮಂದಿರವನ್ನೂ ಖಲಿಸ್ತಾನಿ ಬೆಂಬಲಿಗರು ವಿರೂಪಗೊಳಿಸಿದ್ದರು. ಗೋಡೆಗಳ ಮೇಲೆ ಹಿಂದುಸ್ಥಾನ್ ಮುರದಾಬಾದ್​ ಎಂದು ಬರೆದಿದ್ದರು. ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ಭಾರತೀಯ ಸಮುದಾಯದವರು ಅಲ್ಲಿನ ಸ್ಥಳೀಯ ಸರ್ಕಾರಗಳನ್ನು ಒತ್ತಾಯಿಸುತ್ತಿದ್ದಾರೆ.

Exit mobile version