Site icon Vistara News

Kochi blast: ಕೇರಳದ ಸ್ಫೋಟಕ್ಕೆ ಹಮಾಸ್‌ ಲಿಂಕ್?‌ ಸಾವಿನ ಸಂಖ್ಯೆ 3ಕ್ಕೆ ಏರಿಕೆ

Kerala Blast

Kochi Blast: NIA Reaches To The Convention Centre, Shah Speaks With Pinarayi Vijayan

ಕೊಚ್ಚಿ: ಕೇರಳದ ಕ್ರೈಸ್ತ ಗುಂಪಿನ ಸಮಾವೇಶದಲ್ಲಿ ನಡೆದ ಭಯೋತ್ಪಾದಕ ಬಾಂಬ್‌ ದಾಳಿಗೂ (kochi blast, Kerala blast) ಈಜಿಪ್ಟ್‌ನಲ್ಲಿ ನಡೆದ ಹಮಾಸ್ ಉಗ್ರ ದಾಳಿಗೂ (Hamas terrorists) ಸಂಬಂಧ ಇರಬಹುದು ಎಂದು ಪೊಲೀಸ್‌ ಮೂಲಗಳು ಶಂಕಿಸಿವೆ.

ಎರ್ನಾಕುಲಂ ಜಿಲ್ಲೆಯ ಕಲಮಸ್ಸೆರಿಯಲ್ಲಿ ನಿನ್ನೆ ನಡೆದ ಸ್ಫೋಟದಲ್ಲಿ ಕನಿಷ್ಠ ಮೂವರು ಸಾವನ್ನಪ್ಪಿದ್ದಾರೆ. 40ಕ್ಕೂ ಹೆಚ್ಚು ಜನರು ತೀವ್ರವಾಗಿ ಗಾಯಗೊಂಡಿದ್ದಾರೆ. ಘಟನೆ ಕುರಿತು ಗೃಹ ಸಚಿವ ಅಮಿತ್ ಶಾ ಅವರೊಂದಿಗೆ ಮಾತನಾಡಿರುವ ಮುಖ್ಯಮಂತ್ರಿ ಪಿಣರಾಯಿ ವಿಜಯನ್, ಗಾಯಗೊಂಡವರಲ್ಲಿ ಕೆಲವರ ಸ್ಥಿತಿ ಚಿಂತಾಜನಕವಾಗಿದೆ ಎಂದಿದ್ದಾರೆ.

2,000ಕ್ಕಿಂತಲೂ ಹೆಚ್ಚು ಜನರು ಪ್ರಾರ್ಥನೆಗಾಗಿ ಜಮಾಯಿಸಿದ್ದ ‘ಯೆಹೋವನ ಸಾಕ್ಷಿ’ (Jehovah’s Witness) ಸಮಾವೇಶದ ಸಮಯದಲ್ಲಿ ಸರಣಿ ಸ್ಫೋಟಗಳು ಸಂಭವಿಸಿದವು ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ. ಪ್ರಾಥಮಿಕ ತನಿಖೆ ವೇಲೆ ಇದು ಭಯೋತ್ಪಾದಕ ದಾಳಿ, ವಿಶೇಷವಾಗಿ ಸರಣಿ ಸ್ಫೋಟ ಎಂದು ಗೊತ್ತಾಗಿದೆ. ಬಾಂಬ್ ಸ್ಕ್ವಾಡ್, ಫೋರೆನ್ಸಿಕ್ಸ್ ತಂಡ ಮತ್ತು ಎನ್ಐಎ ತಂಡಗಳು ಸ್ಥಳಕ್ಕೆ ಧಾವಿಸಿವೆ. ಕಣ್ಣೂರು ರೈಲ್ವೆ ನಿಲ್ದಾಣದಿಂದ ಶಂಕಿತನನ್ನು ಬಂಧಿಸಲಾಗಿದೆ.

ಭಾನುವಾರ ರಾತ್ರಿಯವರೆಗೆ ಸಾವಿನ ಸಂಖ್ಯೆ ಎರಡಾಗಿದ್ದರೆ, 12 ವರ್ಷದ ಬಾಲಕನೊಬ್ಬ ನಂತರ ಗಾಯಗಳಿಗೆ ಬಲಿಯಾದ. ಕೇರಳದ ಆರೋಗ್ಯ ಸಚಿವೆ ವೀಣಾ ಜಾರ್ಜ್ ಮಾಹಿತಿ ನೀಡಿದ್ದು, ಭಾನುವಾರ 52 ಜನರನ್ನು ವಿವಿಧ ಆಸ್ಪತ್ರೆಗಳಿಗೆ ದಾಖಲಿಸಲಾಗಿದ್ದು, ಅದರಲ್ಲಿ 18 ಮಂದಿ ಐಸಿಯುನಲ್ಲಿದ್ದಾರೆ ಮತ್ತು 12 ವರ್ಷದ ಬಾಲಕಿ ಸೇರಿದಂತೆ ಆರು ಮಂದಿ ತೀವ್ರವಾಗಿ ಗಾಯಗೊಂಡಿದ್ದಾರೆ ಎಂದು ಹೇಳಿದ್ದಾರೆ.

ಕೊಚ್ಚಿ ಮೂಲದ ವ್ಯಕ್ತಿಯೊಬ್ಬ ಬಾಂಬ್ ಸ್ಫೋಟದ ಹೊಣೆ ಹೊತ್ತು ಕೇರಳ ಪೊಲೀಸರ ಮುಂದೆ ಶರಣಾಗಿದ್ದಾನೆ. ಡೊಮಿನಿಕ್ ಮಾರ್ಟಿನ್ ಎಂಬ ವ್ಯಕ್ತಿ ತ್ರಿಶೂರ್‌ನ ಕೊಡಕರ ಪೊಲೀಸ್ ಠಾಣೆಗೆ ತೆರಳಿ ಸರಣಿ ಸ್ಫೋಟಕ್ಕೆ ನಾನೇ ಹೊಣೆ ಎಂದು ಹೇಳಿದ್ದಾನೆ. ಈತನ ಬಗ್ಗೆ ಪೊಲೀಸ್ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ.

ಸ್ಫೋಟಕ್ಕೆ ಐಇಡಿ (ಸುಧಾರಿತ ಸ್ಫೋಟಕ ಸಾಧನ) ಬಳಸಿದ ಬಗ್ಗೆ ಪ್ರಾಥಮಿಕ ತನಿಖೆ ಹೊರಗೆಡಹಿದ್ದು, ಅದನ್ನು “ಟಿಫಿನ್ ಬಾಕ್ಸ್”ನಲ್ಲಿ ಅಳವಡಿಸಲಾಗಿತ್ತು. ಬೆಂಕಿಯಿಡುವ ಸಾಧನವನ್ನು ಬಳಸಿರುವುದು ಕೂಡ ಈಗ ತನಿಖೆಯಿಂದ ತಿಳಿದುಬಂದಿದೆ. ಗಂಭೀರ ಗಾಯಗೊಂಡವರಲ್ಲಿ ಹೆಚ್ಚಿನವರಿಗೆ ಸುಟ್ಟ ಗಾಯಗಳಾಗಿವೆ. ಆದ್ದರಿಂದ “ದಹನಕಾರಿ ಸಾಧನ” ಬಳಸಿರಬಹುದು ಎಂದು ತನಿಖಾಧಿಕಾರಿಗಳು ಊಹಿಸಿದ್ದಾರೆ. ಸುಧಾರಿತ ಬೆಂಕಿಯಿಡುವ ಸಾಧನವನ್ನು (IID) ಬಳಸಲಾಗಿದ್ದು, ಸ್ಫೋಟಿಸುವ ಬದಲು ವಿಭಿನ್ನ ರೀತಿಯಲ್ಲಿ ಬೆಂಕಿಯನ್ನು ಪ್ರಾರಂಭಿಸುತ್ತದೆ. ಒಂದೇ ಹಾಲ್‌ನಲ್ಲಿ ಅನೇಕ ಸ್ಫೋಟಗಳು ನಡೆದಿವೆ. ಇದು ಭಯೋತ್ಪಾದಕ ದಾಳಿಯ ಊಹೆಗೆ ಸಮರ್ಥನೆ ನೀಡುತ್ತದೆ ಎಂದು ಉನ್ನತ ಗುಪ್ತಚರ ಮೂಲಗಳು ತಿಳಿಸಿವೆ.

ಯೆಹೋವನ ಸಮುದಾಯವನ್ನು ದ್ವೇಷಿಸುವ ಗುಂಪುಗಳು ಸಾಂಪ್ರದಾಯಿಕ ಕ್ರಿಶ್ಚಿಯನ್ನರು ಹಾಗೂ ಮುಸ್ಲಿಮರಲ್ಲಿ ಇವೆ. ಇವರು ಪ್ರತ್ಯೇಕ ಕ್ರಿಶ್ಚಿಯನ್ ಗುಂಪು. ಭಿನ್ನಾಭಿಪ್ರಾಯಗಳ ಕಾರಣದಿಂದಾಗಿ ಇತರ ಸಮುದಾಯಗಳ ಟೀಕೆಗೆ ಗುರಿಯಾಗಿದ್ದಾರೆ, ಇದು ಸಣ್ಣ ಗುಂಪು ಆದ್ದತಿಂದ ಆಕ್ರಮಣಕ್ಕೆ ಸುಲಭ ತುತ್ತಾಗಿದೆ. ಘಟನೆಯಲ್ಲಿ ಮೃತಪಟ್ಟ ವ್ಯಕ್ತಿಯ ಬಗ್ಗೆ ಮಾಹಿತಿ ನೀಡಿದ ಕೇರಳ ಸಚಿವ ವಿಎನ್ ವಾಸವನ್, ಸ್ಫೋಟದಿಂದ ಉಂಟಾದ ಬೆಂಕಿಯಿಂದ ಮಹಿಳೆ ಸಾವನ್ನಪ್ಪಿದ್ದಾಳೆ ಎಂದು ಹೇಳಿದ್ದಾರೆ.

ಹಮಾಸ್‌ ಲಿಂಕ್?‌

ಕೇರಳದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಹಮಾಸ್ ಉಗ್ರನೊಬ್ಬ ವರ್ಚುವಲ್‌ ಆಗಿ ಭಾಗವಹಿಸಿದ್ದಕ್ಕೆ ಸಂಬಂಧಿಸಿದಂತೆ ನಡೆಯುತ್ತಿರುವ ವಿವಾದದ ನಡುವೆಯೇ ಈ ಸ್ಫೋಟ ಸಂಭವಿಸಿದೆ. ರಾಜ್ಯದಲ್ಲಿ ಇಸ್ಲಾಮಿಸ್ಟ್ ಗುಂಪು ಆಯೋಜಿಸಿದ್ದ ಪ್ರತಿಭಟನಾ ಕಾರ್ಯಕ್ರಮದಲ್ಲಿ ಹಮಾಸ್ ನಾಯಕ ಖಲೀದ್ ಮಶಾಲ್ ವರ್ಚುವಲ್‌ ಆಗಿ ಭಾಗವಹಿಸಿ ಮಾತನಾಡಿದ್ದ.

ಖಾಲಿದ್ ಮಶಾಲ್ ಹಮಾಸ್ ಪಾಲಿಟ್‌ಬ್ಯುರೊದ ಸ್ಥಾಪಕ ಸದಸ್ಯ ಮತ್ತು 2017ರವರೆಗೆ ಅದರ ಅಧ್ಯಕ್ಷನಾಗಿದ್ದ. ಹಮಾಸ್ ಪ್ರತಿನಿಧಿ ಭಾಗವಹಿಸುವಿಕೆಗೂ ಈ ಸ್ಫೋಟಕ್ಕೂ ಸಂಬಂಧ ಇರಬಹುದು ಎಂದು ಊಹಿಸಲು ಸಾಕ್ಷಿಗಳು ಸಿಕ್ಕಿಲ್ಲ. ಆದರೆ ಆ ಆಯಾಮದಲ್ಲಿಯೂ ತನಿಖೆ ನಡೆಯುತ್ತಿದೆ. ಇವರನ್ನು ಯಹೂದಿಗಳು ಎಂದು ತಪ್ಪಾಗಿ ಭಾವಿಸಿ ಈ ಸಮುದಾಯದ ಮೇಲೆ ದಾಳಿ ಮಾಡಿರುವ ಸಾಧ್ಯತೆಯೂ ಇದೆ.

ಕೇರಳದ ರ್ಯಾಲಿಯಲ್ಲಿ ಹಮಾಸ್ ನಾಯಕ ಭಾಗವಹಿಸಿದ ಘಟನೆಯು “ಪಿಣರಾಯಿ ವಿಜಯನ್ ಸರ್ಕಾರದ ವೈಫಲ್ಯ”ವನ್ನು ತೋರಿಸುತ್ತದೆ ಎಂದು ಭಾರತೀಯ ಜನತಾ ಪಕ್ಷ (ಬಿಜೆಪಿ) ಟೀಕಿಸಿದೆ. ಏತನ್ಮಧ್ಯೆ, ಕೇರಳ ಸ್ಫೋಟದ ನಂತರ ದಿಲ್ಲಿಯನ್ನು ಹೈ ಅಲರ್ಟ್ ಮಾಡಲಾಗಿದೆ. ದಿಲ್ಲಿಯ ಎಲ್ಲಾ ಚರ್ಚ್‌ಗಳ ಭದ್ರತೆಯನ್ನು ಹೆಚ್ಚಿಸಲು ಸೂಚನೆಗಳನ್ನು ನೀಡಲಾಗಿದೆ ಎಂದು ಮೂಲಗಳು ತಿಳಿಸಿವೆ.

ಇದನ್ನೂ ಓದಿ: Kochi Blast : ಕೇರಳ ಸ್ಫೋಟದ ಆರೋಪಿ ಶರಣಾಗತಿ; ಸಾವಿನ ಸಂಖ್ಯೆ 2ಕ್ಕೆ ಏರಿಕೆ

Exit mobile version