ನವದೆಹಲಿ: ಇನ್ಫೋಸಿಸ್ ಸಹ ಸಂಸ್ಥಾಪಕ ಕ್ರಿಸ್ ಗೋಪಾಲಕೃಷ್ಣನ್ (Kris Gopalakrishnan:) ಭಾರತದ ಐಟಿ ಉದ್ಯಮದ ಖ್ಯಾತ ವ್ಯಕ್ತಿ. ಕೋಟ್ಯಧೀಶ ಉದ್ಯಮಿ. ಇನ್ಫೋಸಿಸ್‌ನಲ್ಲಿ 2007ರಿಂದ 214ರವರೆಗೆ ನಾನಾ ಹುದ್ದೆಗಳನ್ನು ನಿಭಾಯಿಸಿ ಸೈ ಎನಿಸಿಕೊಂಡಿದ್ದಾರೆ. 2014ರಲ್ಲಿ ಇನ್ಫೋಸಿಸ್‌ನಿಂದ ನಿವೃತ್ತರಾದ ಕ್ರಿಸ್‌ಗೆ ಈಗ 68 ವರ್ಷ. ಅವರ ಆಸ್ತಿ ಮೌಲ್ಯ ಈಗ 25 ಸಾವಿರ ಕೋಟಿ ರೂ.!
ಸುಮಾರು 33 ವರ್ಷಗಳ ಕಾಲ ಇನ್ಫೋಸಿಸ್‌ನಲ್ಲಿದ್ದ ಕ್ರಿಸ್, 2014ರಲ್ಲಿ ನಿವೃತ್ತರಾದ ಬಳಿಕ ತಮ್ಮದೇ ಆಕ್ಸಿಲರ್ ವೆಂಚರ್ಸ್ ಆರಂಭಿಸಿದರು. ನವೋದ್ಯಮಗಳಿಗೆ ಉತ್ತೇಜನ ನೀಡುವುದು ಈ ಕಂಪನಿಯ ಉದ್ದೇಶವಾಗಿದೆ. ಸದ್ಯ ಅವರು ಈ ಕಂಪನಿಯ ಚೇರ್ಮನ್ನರಾಗಿ ಕೆಲಸ ಮಾಡುತ್ತಿದ್ದಾರೆ. ಆ ಮೂಲಕ ಸಾಕಷ್ಟು ಹೊಸ ಹೊಸ ನವೋದ್ಯಮಗಳಿಗೆ ಆರ್ಥಿಕ ಚೈತನ್ಯವನ್ನು ತುಂಬುತ್ತಿದ್ದಾರೆ.
ಕ್ರಿಸ್ ಗೋಪಾಲಕೃಷ್ಣನ್ ಅವರು ತಮ್ಮ ಆಕ್ಸಿಲರ್ ವೆಂಚರ್ಸ್ ಮತ್ತು ಕೆಲವು ವೆಂಚರ್ ಫಂಡ್‌ಗಳ ಮೂಲಕ ಹಲವಾರು ಸ್ಟಾರ್ಟ್‌ಅಪ್‌ಗಳಲ್ಲಿ ಹೂಡಿಕೆ ಮಾಡಿದ್ದಾರೆ. ಗೋಪಾಲಕೃಷ್ಣನ್ ಅವರು ಭಾರತದ ಐಟಿ ಉದ್ಯಮದ ವಿಕಸನವನ್ನು ವಿವರಿಸುವ ಡಿಜಿಟಲ್ ಅಪ್ಲಿಕೇಶನ್‌ಕ್ಕೂ ಸಹ ಧನಸಹಾಯ ಮಾಡಿದ್ದಾರೆ.
ಇದನ್ನೂ ಓದಿ:Infosys | 3ನೇ ತ್ರೈಮಾಸಿಕದಲ್ಲಿ 6000 ಫ್ರೆಶರ್ಸ್ ನೇಮಕ ಮಾಡಿಕೊಂಡ ಇನ್ಫೋಸಿಸ್!
ಐಐಟಿ ಮದ್ರಾಸ್ ಹಳೆಯ ವಿದ್ಯಾರ್ಥಿಯಾಗಿರುವ ಕ್ರಿಸ್, ತಮ್ಮ ಪತ್ನಿ ಹೆಸರಿನಲ್ಲಿ ರಿಸರ್ಚ್ ಸೆಂಟರ್ ಆರಂಭಿಸಿದ್ದಾರೆ. ಸುಧಾ ಗೋಪಾಲಕೃಷ್ಣನನ್ ಬ್ರೈನ್ ರಿಸರ್ಚ್ ಸೆಂಟರ್ ಅದರ ಹೆಸರು. ಪದ್ಮಭೂಷಣ ಸೇರಿದಂತೆ ಹಲವು ಪ್ರಶಸ್ತಿಗಳನ್ನು ಪಡೆದುಕೊಂಡಿದ್ದಾರೆ. ಅಷ್ಟೇ ಅಲ್ಲದೇ, ಪ್ರತಿಕ್ಷಾ ಟ್ರಸ್ಟ್ ಮೂಲಕ ಸಾಮಾಜಿಕ ಸೇವೆಯಲ್ಲೂ ತೊಡಗಿಸಿಕೊಂಡಿದ್ದಾರೆ.
ಫೋರ್ಬ್ಸ್ ಪ್ರಕಾರ, ಕ್ರಿಸ್ ಗೋಪಾಲಕೃಷ್ಣನ್ ಅವರು 3.1 ಬಿಲಿಯನ್ ಡಾಲರ್ ಮೌಲ್ಯದ ಆಸ್ತಿಯನ್ನು ಹೊಂದಿದ್ದಾರೆ. ಅಂದರೆ, ರೂಪಾಯಿ ಲೆಕ್ಕಾಚಾರದಲ್ಲಿ ಸುಮಾರು 25370 ಕೋಟಿ ರೂಪಾಯಿಯಾಗುತ್ತದೆ. ಕೋಟ್ಯಧೀಶರ ಪಟ್ಟಿಯಲ್ಲಿ ಅವರು 905ನೇ ಸ್ಥಾನದಲ್ಲಿದ್ದಾರೆ.