Site icon Vistara News

Lalit Modi | ಐಪಿಎಲ್​ ಮಾಜಿ ಮುಖ್ಯಸ್ಥ ಲಲಿತ್ ಮೋದಿಗೆ ತೀವ್ರ ಅನಾರೋಗ್ಯ; ಲಂಡನ್​​ನಲ್ಲಿ ಚಿಕಿತ್ಸೆ

Lalit Modi

ನವ ದೆಹಲಿ: ಐಪಿಎಲ್​ ಮಾಜಿ ಮುಖ್ಯಸ್ಥ ಲಲಿತ್​ ಮೋದಿ (Lalit Modi) ಆರೋಗ್ಯ ತೀವ್ರವಾಗಿ ಹದಗೆಟ್ಟಿದೆ. ಅವರಿಗೆ ಕೊರೊನಾ ಸೋಂಕು ತಗುಲುವ ಜತೆ, ಗಂಭೀರಸ್ವರೂಪದ ನ್ಯುಮೋನಿಯಾ ಕೂಡ ಉಂಟಾಗಿದೆ. ಉಸಿರಾಟಕ್ಕೆ ಕಷ್ಟಪಡುತ್ತಿರುವ ಲಲಿತ್​ ಮೋದಿಗೆ ಈಗ ಬಾಹ್ಯವಾಗಿ ಆಮ್ಲಜನಕ ಪೂರೈಕೆ ಮಾಡಲಾಗುತ್ತಿದೆ ಎಂದು ಹೇಳಲಾಗಿದೆ.

ತಾವು ಚಿಕಿತ್ಸೆ ಪಡೆಯುತ್ತಿರುವ ಫೋಟೋವನ್ನು ಲಲಿತ್​ ಮೋದಿ ತಮ್ಮ ಇನ್​ಸ್ಟಾಗ್ರಾಂ ಪೇಜ್​​ನಲ್ಲಿ ಹಂಚಿಕೊಂಡಿದ್ದಾರೆ. ಹಾಗೇ, ತಾವು 2 ವಾರಗಳಲ್ಲಿ 2 ಬಾರಿ ಕೊವಿಡ್​ 19ಗೆ ತುತ್ತಾಗಿದ್ದಾಗಿ ಮತ್ತು ನ್ಯುಮೋನಿಯಾ ರೋಗ ಬಿಟ್ಟೂಬಿಡದೆ ತನ್ನನ್ನು ಕಾಡುತ್ತಿದೆ ಎಂಬ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ. ಸದ್ಯ ಲಂಡನ್​​ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದೇನೆ. ನನ್ನೊಂದಿಗೆ ನನ್ನ ಪುತ್ರ ಇದ್ದಾನೆ. 24ಗಂಟೆಯೂ ಆಕ್ಸಿಜನ್​ ಸಪೋರ್ಟ್​​ನಲ್ಲೇ ಇರಬೇಕು’ ಎಂದು ಬರೆದುಕೊಂಡಿದ್ದಾರೆ.

ಇಂಡಿಯನ್‌ ಪ್ರೀಮಿಯರ್‌ ಲೀಗ್ (ಐಪಿಎಲ್‌) ಅನ್ನು ಹುಟ್ಟುಹಾಕಿ ಭಾರತೀಯ ಕ್ರಿಕೆಟ್‌ನಲ್ಲಿ ಹೊಸ ಇತಿಹಾಸ ಬರೆದಿದ್ದ ಲಲಿತ್‌ ಮೋದಿ ತೆರಿಗೆ ವಂಚನೆ ಹಾಗೂ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಬಂಧನಕ್ಕೊಳಗಾಗುವುದರಿಂದ ತಪ್ಪಿಸಿಕೊಳ್ಳಲು 2010ರಲ್ಲಿಯೇ ಪಲಾಯನಗೈದಿದ್ದು, ಸದ್ಯ ಲಂಡನ್‌ನಲ್ಲಿಯೇ ನೆಲೆಸಿದ್ದಾರೆ. ಅವರು ಜುಲೈ ತಿಂಗಳಲ್ಲಿ ಒಮ್ಮೆ, ಬಾಲಿವುಡ್​ ನಟಿ, ಮಾಜಿ ಭುವನ ಸುಂದರಿ ಸುಷ್ಮಿತಾ ಸೇನ್​​ ಜತೆ ಡೇಟಿಂಗ್​ ವಿಚಾರಕ್ಕೆ ಭರ್ಜರಿ ಸುದ್ದಿಯಾಗಿದ್ದರು.

ಇದನ್ನೂ ಓದಿ: ಲಲಿತ್‌ ಮೋದಿ ಜತೆ ಡೇಟಿಂಗ್‌: ಕೊನೆಗೂ ಮೌನ ಮುರಿದ ಸುಶ್ಮಿತಾ ಸೇನ್‌ ಹೇಳಿದ್ದೇನು?

Exit mobile version