Site icon Vistara News

Lift Collapses | ಗುಜರಾತ್​​ನಲ್ಲಿ ನಿರ್ಮಾಣ ಹಂತದ ಕಟ್ಟಡದಲ್ಲಿ ಲಿಫ್ಟ್ ಕುಸಿತ; 7 ಕಾರ್ಮಿಕರು ಸಾವು

Gujarat Lift

ಅಹ್ಮದಾಬಾದ್​: ಗುಜರಾತ್​ನ ಅಹ್ಮದಾಬಾದ್​​ನಲ್ಲಿ ನಿರ್ಮಾಣ ಹಂತದಲ್ಲಿದ್ದ ಕಟ್ಟಡದ ಲಿಫ್ಟ್ ಕುಸಿದು ಬಿದ್ದು ಏಳು ಮಂದಿ ಕಾರ್ಮಿಕರು ದಾರುಣವಾಗಿ ಸಾವನ್ನಪ್ಪಿದ್ದಾರೆ. ಲಿಫ್ಟ್​ ಕುಸಿಯುವಾಗ ಅದರೊಳಗೆ ಎಂಟು ಜನರು ಇದ್ದರು. ಒಬ್ಬನಿಗೆ ಗಂಭೀರ ಗಾಯವಾಗಿದ್ದು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಗುಜರಾತ್​ ಯೂನಿವರ್ಸಿಟಿ ಬಳಿಯೇ ಈ ಕಟ್ಟಡ ನಿರ್ಮಾಣ ಕಾಮಗಾರಿ ನಡೆಯುತ್ತಿತ್ತು. ಏಳನೇ ಫ್ಲೋರ್​​ನಿಂದ ಲಿಫ್ಟ್ ಕುಸಿದು ಬಿದ್ದಿದೆ ಎಂದು ವರದಿಯಾಗಿದೆ.

ಮೃತ ಕಾರ್ಮಿಕರನ್ನು ಸಂಜಯಭಾಯಿ ಬಾಬು ಭಾಯಿ ನಾಯಕ್​, ಜಗದೀಶ್​ ಭಾಯಿ ರಮೇಶ್​ಭಾಯ್​ ನಾಯಕ್​, ಅಶ್ವಿನ್​ಭಾಯ್ ಸೋಂಬಾಯಿ ನಾಯಕ್​, ಮುಕೇಶ್​ ಭರತ್​ಭಾಯ್​ ನಾಯಕ್​, ರಾಜಮಲ್​ ಸುರೇಶ್​ ಭಾಯಿ ಖಾರಾಡಿ, ಪಂಕಜ್​ಭಾಯಿ ಶಂಕರ ಭಾಯಿ ಖಾರಾಡಿ ಎಂದು ಗುರುತಿಸಲಾಗಿದ್ದ, ಇನ್ನೊಬ್ಬರ ಹೆಸರು ತಿಳಿದುಬಂದಿಲ್ಲ.

‘ಈ ಘಟನೆ ನಡೆದರೂ ಯಾರೂ ನಮಗೆ ಕರೆ ಮಾಡಿಲ್ಲ. ಮಾಹಿತಿಯನ್ನೂ ನೀಡಿಲ್ಲ. ಮಾಧ್ಯಮಗಳಲ್ಲಿ ವರದಿ ಬರುತ್ತಿರುವುದನ್ನು ನೋಡಿದೆವು ಮತ್ತು ಅಷ್ಟೇ ಹೊತ್ತಿಗೆ ಮಾಧ್ಯಮ ಸಿಬ್ಬಂದಿ ಕರೆ ಮಾಡಿ, ಘಟನೆ ಬಗ್ಗೆ ವಿವರ ಕೊಟ್ಟರು. ಕೂಡಲೇ ಘಟನೆ ನಡೆದ ಸ್ಥಳಕ್ಕೆ ಧಾವಿಸಿದೆವು. ಆದರೆ ಆ ಕಟ್ಟಡದ ಮಾಲೀಕರಿಂದ ನಮಗೆ ಮಾಹಿತಿ ಸಿಕ್ಕಿಲ್ಲ’ ಎಂದು ಅಹ್ಮದಾಬಾದ್​ ಮುನ್ಸಿಪಲ್​ ಕಾರ್ಪೋರೇಶನ್​​ನ ಅಗ್ನಿಶಾಮಕ ಮತ್ತು ತುರ್ತು ಸೇವೆ ವಿಭಾಗ ತಿಳಿಸಿದೆ.

ಇದನ್ನೂ ಓದಿ: ಪೂಂಚ್​​ನಲ್ಲಿ ಕಂದಕಕ್ಕೆ ಉರುಳಿದ ಬಸ್​; 11 ಮಂದಿ ದುರ್ಮರಣ, 8 ಜನರಿಗೆ ಗಾಯ

Exit mobile version