Site icon Vistara News

Lok Sabha : ಪ್ರತಿಪಕ್ಷಗಳ ಒಟ್ಟು 30 ಸಂಸದರು ಲೋಕಸಭೆಯಿಂದ ಅಮಾನತು

3 more opposition mps suspended and total number goes up to 143

ನವದೆಹಲಿ: ಕಾಂಗ್ರೆಸ್ ಮುಖಂಡ ಅಧೀರ್ ರಂಜನ್ ಚೌಧರಿ ಸೇರಿದಂತೆ ವಿರೋಧ ಪಕ್ಷಗಳ 30 ಸಂಸದರನ್ನು ಸಂಸತ್ತಿನ ಚಳಿಗಾಲದ ಅಧಿವೇಶನದ ಉಳಿದ ಅವಧಿಗೆ ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರು ಅಮಾನತುಗೊಳಿಸಿದ್ದಾರೆ. ಲೋಕಸಭಾ ಭದ್ರತಾ ಉಲ್ಲಂಘನೆಯ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಹೇಳಿಕೆ ನೀಡುವಂತೆ ಒತ್ತಾಯಿಸಿ ನಡೆದ ಪ್ರತಿಭಟನೆಯ ಸಂದರ್ಭದಲ್ಲಿ ಸಂಸದರು ಸದನದ ಒಳಗೆ ಫಲಕಗಳನ್ನು ಪ್ರದರ್ಶಿಸಿದ್ದರಿಂದ ಈ ಕ್ರಮ ಕೈಗೊಳ್ಳಲಾಗಿದೆ. ಕಳೆದ ಕೆಲವು ದಿನಗಳಿಂದ ಅಮಾನತು ಪ್ರಕ್ರಿಯೆಗಳು ನಡೆಯುತ್ತಿದ್ದು ಒಟ್ಟು ಸದಸ್ಯರ ಸಂಖ್ಯೆ 30 ದಾಟಿದೆ.

ಭಿತ್ತಿ ಪತ್ರಗಳನ್ನು ಪ್ರದರ್ಶಿಸಿದ್ದಕ್ಕಾಗಿ ಮತ್ತು ಅಶಿಸ್ತಿನ ವರ್ತನೆಗಾಗಿ ಕಾಂಗ್ರೆಸ್​ನ ಒಂಬತ್ತು ಸಂಸದರು ಸೇರಿದಂತೆ 13 ಸಂಸದರನ್ನು ಅಮಾನತುಗೊಳಿಸಿದ ನಂತರ ಇದೀಗ ಹಲವರನ್ನು ಅಮಾನತು ಮಾಡಲಾಗಿದೆ. ಲೋಕಸಭೆಯಲ್ಲಿ ಘಟಿಸಿರುವ ಭದ್ರತಾ ಲೋಪದ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಮತ್ತು ಅಮಿತ್ ಶಾ ಅವರಿಂದ ಹೇಳಿಕೆಗಳನ್ನು ನೀಡುವಂತೆ ಪ್ರತಿಪಕ್ಷಗಳು ಕಳೆದ ವಾರದಿಂದ ಒತ್ತಾಯಿಸುತ್ತಿವೆ ಹಾಗೂ ಸದಸ್ಯರು ಕಲಾಪಗಳಿಗೆ ಅಡ್ಡಿ ಮಾಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಸತತವಾಗಿ ಅಮಾನತು ಮಾಡಲಾಗುತ್ತಿದೆ.

ಶನಿವಾರ, ಪಿಎಂ ಮೋದಿ ಸಂದರ್ಶನವೊಂದರಲ್ಲಿ ಈ ಘಟನೆಯ ಬಗ್ಗೆ ತನಿಖೆಯ ಅಗತ್ಯವಿದೆ, ಸಂಸತ್ತಿನಲ್ಲಿ ಚರ್ಚೆಯಲ್ಲ ಎಂದು ಹೇಳಿದ್ದರು. ಈ ಹೇಳಿಕೆಗೆ ಪ್ರತಿಕ್ರಿಯಿಸಿದ ಕಾಂಗ್ರೆಸ್, ಲೋಕಸಭೆಯಲ್ಲಿ ಕೋಲಾಹಲ ಸೃಷ್ಟಿಸಿದ ಇಬ್ಬರು ಒಳನುಗ್ಗುವವರಿಗೆ ಪ್ರವೇಶ ಪತ್ರ ಕೊಟ್ಟಿದ್ದ ತಮ್ಮ ಪಕ್ಷದ ಸಂಸದ ಪ್ರತಾಪ್ ಸಿಂಹ ಅವರನ್ನು ರಕ್ಷಿಸಲು ಬಿಜೆಪಿ ಪ್ರಯತ್ನಿಸುತ್ತಿದೆ. ಅದಕ್ಕಾಗಿ ವಿಷಯದ ಬಗ್ಗೆ ಚರ್ಚೆಯಿಂದ ಫಲಾಯನ ಮಾಡಲಾಗುತ್ತಿದೆ ಎಂದು ಸಂಸದರು ಆರೋಪಿಸಿದ್ದಾರೆ.

ಮೆಟ್ಟಿಲ ಮೇಲೆ ಪ್ರತಿಭಟನೆ

ಅಮಾನತುಗೊಂಡ 13 ಲೋಕಸಭಾ ಸಂಸದರನ್ನು ಮತ್ತೆ ಕರೆದುಕೊಳ್ಳುವಂತೆ ಪ್ರತಿಪಕ್ಷಗಳು ಒತ್ತಾಯಿಸಿದ್ದವು. ಅವರಲ್ಲಿ ಕೆಲವರು ಸಂಸತ್ತಿನ ಮೆಟ್ಟಿಲುಗಳ ಮೇಲೆ ಭಿತ್ತಿ ಪತ್ರ ಹಿಡಿದು ಪ್ರತಿಭಟಿಸಿದ್ದರು. ಕಾಂಗ್ರೆಸ್ ಸಂಸದರಾದ ಮೊಹಮ್ಮದ್ ಜಾವೈದ್, ಹಿಬಿ ಈಡನ್, ಬೆನ್ನಿ ಬೆಹನನ್, ಡೀನ್ ಕುರಿಯಾಕೋಸ್ ಮತ್ತು ಸಿಪಿಐ (ಎಂ) ನ ಎಸ್ ವೆಂಕಟೇಶನ್ ಸಂಸತ್ತಿನ ದ್ವಾರಗಳ ಮೆಟ್ಟಿಲುಗಳ ಮೇಲೆ ಕುಳಿತು ಫಲಕಗಳನ್ನು ಹಿಡಿದು ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಿದ್ದರು.

ಬಿಜೆಪಿ ನಾಯಕರು ಹೊಸ ಸಂಸತ್ ಕಟ್ಟಡವನ್ನು ಹೊಗಳುತ್ತಿದ್ದಾರೆ. ಅದು ಸಂಪೂರ್ಣವಾಗಿ ಸುರಕ್ಷಿತವಾಗಿದೆ ಎಂದು ಹೇಳಿಕೊಂಡಿದ್ದೀರಿ. ಉದ್ಘಾಟನೆಗೊಂಡು ನಾಲ್ಕು ತಿಂಗಳೂ ಆಗಿಲ್ಲ ಅಷ್ಟರಲ್ಲೇ ಕಲಾಪದ ಸಮಯದಲ್ಲಿ ಒಳನುಸುಳುವವರು ಲೋಕಸಭೆಯ ಕೊಠಡಿಗೆ ನುಗ್ಗಿದ್ದಾರೆ. ಇದಕ್ಕಿಂತ ದೊಡ್ಡ ಉಲ್ಲಂಘನೆ ಏನಿದೆ| ಆದ್ದರಿಂದ ಪ್ರಧಾನಿ ಅಥವಾ ಗೃಹ ಸಚಿವರು (ಅಮಿತ್ ಶಾ) ಸದನದಲ್ಲಿ ಹೇಳಿಕೆ ನೀಡಬೇಕು” ಎಂದು ಕಿಶನ್​ಗಂಜ್​ನ ಕಾಂಗ್ರೆಸ್ ಸಂಸದ ಆರೋಪಿಸಿದ್ದಾರೆ.

ಇದಕ್ಕೂ ಮುನ್ನ ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್ ಅವರು ಎಕ್ಸ್ ಪೋಸ್ಟ್ ನಲ್ಲಿ, ಗೃಹ ಸಚಿವರ ಹೇಳಿಕೆಯ ಬೇಡಿಕೆಯನ್ನು ಸ್ವೀಕರಿಸಲು ಸರ್ಕಾರ ನಿರಾಕರಿಸಿದ್ದರಿಂದ ಪ್ರತಿಪಕ್ಷಗಳು ಪ್ರತಿಭಟನೆ ನಡೆಸುತ್ತಿವೆ ಎಂದು ಹೇಳಿದ್ದರು.

ಲೋಕಸಭೆಯಲ್ಲಿ ಡಿಸೆಂಬರ್ 13 ರಂದು ನಡೆದ ಅತ್ಯಂತ ಗಂಭೀರ ಭದ್ರತಾ ಉಲ್ಲಂಘನೆಯ ಬಗ್ಗೆ ಪ್ರಧಾನಿ ಪ್ರಮುಖ ಪತ್ರಿಕೆಯೊಂದಿಗೆ ಮಾತನಾಡುತ್ತಾರೆ. ಭದ್ರತಾ ಉಲ್ಲಂಘನೆಯ ಬಗ್ಗೆ ಗೃಹ ಸಚಿವರು ಟಿವಿ ಚಾನೆಲ್ ನೊಂದಿಗೆ ಮಾತನಾಡುತ್ತಾರೆ. ಆದರೆ, ಸಂಸತ್ತಿಗೆ ಉತ್ತರ ಕೊಡುವುದಿಲ್ಲ ಎಂದು ಹೇಳಿದ್ದರು.

Exit mobile version