Site icon Vistara News

G20 Summit 2023: ಆರ್‌ಆರ್‌ಆರ್‌ ನನ್ನನ್ನು ಮೋಡಿ ಮಾಡಿತು; ಜಿ20 ಶೃಂಗಸಭೆಯಲ್ಲಿ ಹೊಗಳಿದ ಬ್ರೆಜಿಲ್ ಅಧ್ಯಕ್ಷ!

Luiz Inacio Lula da Silva

ಬೆಂಗಳೂರು: ಬ್ರೆಜಿಲ್ ಅಧ್ಯಕ್ಷ ಲೂಯಿಸ್‌ ಇನಾಸಿಯೊ ಲುಲಾ ಡಾ ಸಿಲ್ವಾ (Luiz Inacio Lula da Silva) ಅವರು ಎಸ್ಎಸ್ ರಾಜಮೌಳಿ ಅವರ ಹಿಟ್ ಚಿತ್ರ ಆರ್‌ಆರ್‌ಆರ್‌ ಸಿನಿಮಾವನ್ನು ಜಿ 20 ಶೃಂಗಸಭೆಯಲ್ಲಿ (G20 Summit 2023) ಶ್ಲಾಘಿಸಿದ್ದಾರೆ. ಜಿ20 ಶೃಂಗಸಭೆ ದೆಹಲಿಯಲ್ಲಿ ಸೆಪ್ಟೆಂಬರ್ 9 ಹಾಗೂ 10ರಂದು ನಡೆದಿದೆ. ವಿವಿಧ ದೇಶದ ಗಣ್ಯರು ಆಗಮಿಸಿದ್ದರು. ಲೂಯಿಸ್‌ ‘ಆರ್​ಆರ್​ಆರ್​’ ಚಿತ್ರದ ಬಗ್ಗೆ ಮಾತನಾಡಿದ್ದಾರೆ. ಸಿನಿಮಾ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ನಿರ್ದೇಶಕ ರಾಜಮೌಳಿ ಕೂಡ ಪ್ರತಿಕ್ರಿಯಿಸಿದ್ದಾರೆ.

ಬ್ರೆಜಿಲ್ ಅಧ್ಯಕ್ಷ ಲೂಯಿಸ್‌ ಇನಾಸಿಯೊ ಮಾತನಾಡಿ ʻʻಆರ್‌ಆರ್‌ಆರ್’ ಮೂರು ಗಂಟೆಗಳ ಫಿಚರ್‌ ಚಲನಚಿತ್ರವಾಗಿದೆ. ತಮಾಷೆಯ ದೃಶ್ಯಗಳನ್ನು ಹೊಂದಿದೆ. ಬ್ರಿಟಿಷರ ಆಡಳಿತದ ಬಗ್ಗೆ ಇದೆ. ಚಿತ್ರವು ಪ್ರಪಂಚದಾದ್ಯಂತ ಬ್ಲಾಕ್‌ಬಸ್ಟರ್ ಆಗಬೇಕು. ನನ್ನೊಂದಿಗೆ ಮಾತನಾಡುವ ಪ್ರತಿಯೊಬ್ಬರಿಗೂ, ನಾನು ಹೇಳುವ ಮೊದಲ ವಿಷಯವೆಂದರೆ, ‘ಆರ್​ಆರ್​ಆರ್’​ ಸಿನಿಮಾ ನೋಡಿದ್ದೀರ? ಎಂದು. ಹಾಗಾಗಿ, ಚಿತ್ರದ ನಿರ್ದೇಶಕರು ಮತ್ತು ಕಲಾವಿದರನ್ನು ನಾನು ಅಭಿನಂದಿಸುತ್ತೇನೆ ಏಕೆಂದರೆ ಅದು ನನ್ನನ್ನು ಮೋಡಿ ಮಾಡಿದೆʼʼಎಂದಿದ್ದಾರೆ.

ಇದನ್ನೂ ಓದಿ; G20 Summit 2023: ಶೃಂಗಸಭೆಯಲ್ಲಿ ಭಾರತದ ಶ್ರೀಮಂತ ವಾಸ್ತುಶಿಲ್ಪ ಪರಂಪರೆ ಅನಾವರಣ!

ಲೂಯಿಸ್‌ ಇನಾಸಿಯೊ ಅವರ ಹೊಗಳಿಕೆಗೆ ಪ್ರತಿಕ್ರಿಯಿಸಿದ ಎಸ್‌ಎಸ್ ರಾಜಮೌಳಿ ʻʻನಿಮ್ಮ ಮಾತುಗಳಿಗೆ ತುಂಬಾ ಧನ್ಯವಾದಗಳು. ನೀವು ಭಾರತೀಯ ಸಿನಿಮಾವನ್ನು ಉಲ್ಲೇಖಿಸಿದ್ದೀರಿಮ ಮತ್ತು ಆರ್‌ಆರ್‌ ಸಿನಿಮಾವನ್ನು ಆನಂದಿಸಿದ್ದೀರಿ. ಇದು ಹೃದಯಸ್ಪರ್ಶಿಯಾಗಿದೆʼʼಎಂದು ಟ್ವೀಟ್‌ ಮೂಲಕ ಧನ್ಯವಾದ ಸೂಚಿಸಿದ್ದಾರೆ.

ಆರ್‌ಆರ್‌ಆರ್‌ ತೆಲುಗು ಚಿತ್ರವಾಗಿದ್ದು, ಹಿಂದಿ, ಕನ್ನಡ, ತಮಿಳು ಮತ್ತು ಮಲಯಾಳಂ ಭಾಷೆಗಳಲ್ಲಿ ಬಿಡುಗಡೆಯಾಗಿದೆ. ಇದರಲ್ಲಿ ರಾಮ್ ಚರಣ್, ಜ್ಯೂನಿಯರ್‌ ಎನ್‌ಟಿಆರ್‌, ಆಲಿಯಾ ಭಟ್, ಅಜಯ್ ದೇವಗನ್ ಮತ್ತು ಇತರರು ನಟಿಸಿದ್ದಾರೆ. ಎಂ.ಎಂ.ಕೀರವಾಣಿಯವರ ಸಂಗೀತ ಸಂಯೋಜನೆಯ ನಾಟು ನಾಟು ದ ಹಾಡು ಜಾಗತಿಕವಾಗಿ ಜನಪ್ರಿಯವಾಯಿತು. ಇದು ಅತ್ಯುತ್ತಮ ಮೂಲ ಗೀತೆ ವಿಭಾಗದಲ್ಲಿ ಗೋಲ್ಡನ್ ಗ್ಲೋಬ್ ಮತ್ತು ಅಕಾಡೆಮಿ ಪ್ರಶಸ್ತಿಯನ್ನು ಸಹ ಪಡೆದುಕೊಂಡಿತು.

Exit mobile version