Site icon Vistara News

ಉಗ್ರ ಚಟುವಟಿಕೆ; ಅಸ್ಸಾಂನಲ್ಲಿ ಮದರಸಾವನ್ನು ನೆಲಸಮ ಮಾಡಿದ ಜಿಲ್ಲಾಡಳಿತ

Assam

ದಿಸ್ಪುರ್​: ಅಸ್ಸಾಂನ ಬೊಂಗೈಗಾಂವ್​​​ನ ಮರ್ಕಝುಲ್ ಮಾ-ಆರಿಫ್ ಕ್ವಾರಿಯಾನದಲ್ಲಿರುವ ಮದರಸಾವೊಂದನ್ನು ಧ್ವಂಸಗೊಳಿಸಲಾಗಿದೆ. ಇತ್ತೀಚೆಗೆ ಬಾಂಗ್ಲಾದೇಶ ಮೂಲದ ಪ್ರತ್ಯೇಕತಾ ಗುಂಪೊಂದರ ಜತೆ ಸಂಪರ್ಕವಿರುವ ಐವರನ್ನು ಬಂಧಿಸಲಾಗಿತ್ತು. ಅವರನ್ನು ವಿಚಾರಣೆಗೆ ಒಳಪಡಿಸಿದ ಬೆನ್ನಲ್ಲೇ, ಈ ಮದರಸಾ ನಾಶವಾಗಿದೆ. ಮದರಸಾಕ್ಕೆ ಅಲ್​ ಖೈದಾ ಉಗ್ರಸಂಘಟನೆಯೊಂದಿಗೆ ಲಿಂಕ್​ ಇದೆ. ಇಲ್ಲಿ ಉಗ್ರ ಚಟುವಟಿಕೆಗಳು ನಡೆಯುತ್ತವೆ ಎಂಬ ಆರೋಪದಡಿ ಮದರಸಾವನ್ನು ಕೆಡವಲಾಗಿದೆ.

ಈ ಬಗ್ಗೆ ಮಾಹಿತಿ ನೀಡಿದ ಸ್ಥಳೀಯ ಎಸ್​ಪಿ ಸ್ವಪ್ನಾನೀಲ್​​ ದೇಕಾ, ‘ಈ ಮದರಸಾ ಸುಸ್ಥಿಯಲ್ಲಿ ಇರಲಿಲ್ಲ. ಮನುಷ್ಯರು ವಾಸಿಸಲು ಯೋಗ್ಯವಾಗಿರಲಿಲ್ಲ. ಅಷ್ಟೇ ಅಲ್ಲ, ಲೋಕೋಪಯೋಗಿ ಇಲಾಖೆಯ ನಿಯಮಗಳಿಗೆ ಅನುಸಾರವಾಗಿ ಕಟ್ಟಿಲ್ಲ. ಯಾವುದೇ ಕಾನೂನು ಪಾಲನೆ ಮಾಡದೆ ಕಟ್ಟಲಾಗಿದೆ. ಹಾಗಾಗಿ ಕೆಡವಲಾಗಿದೆ ಎಂದು ಜಿಲ್ಲಾಡಳಿತ ತಿಳಿಸಿದೆ’ ಎಂಬುದಾಗಿ ಮಾಹಿತಿ ನೀಡಿದ್ದಾರೆ. ಸದ್ಯ ಮದರಸಾದಲ್ಲಿ ಉಗ್ರ ಚಟುವಟಿಕೆ ನಡೆಯುತ್ತಿರುವ ಬಗ್ಗೆ ತನಿಖೆ ನಡೆಯುತ್ತಿದೆ. ಜಿಲ್ಲಾಡಳಿತದ ನಿಯಮದ ಅನುಸಾರ ಅದನ್ನು ಕೆಡವಿದ್ದೇವೆ’ ಎಂದು ಹೇಳಿದ್ದಾರೆ.

ಇದನ್ನೂ ಓದಿ: Terrorists Killed | ಲಷ್ಕರೆ ತೊಯ್ಬಾದ ಮೂವರು ಉಗ್ರರನ್ನು ಹತ್ಯೆಗೈದ ಭದ್ರತಾ ಪಡೆ ಸಿಬ್ಬಂದಿ

Exit mobile version