ಮುಂಬಯಿ: ಮಹಾರಾಷ್ಟ್ರ ವಿಕಾಸ ಅಘಾಡಿ ಸರಕಾರವನ್ನು ಆಪತ್ತಿಗೆ ಸಿಲುಕಿಸಿರುವ ಶಿವಸೇನಾ ನಾಯಕ ಏಕನಾಥ ಶಿಂಧೆ ಅವರ ಮುಂದಿನ ನಡೆಯ ಬಗ್ಗೆ ಎಲ್ಲರ ಕಣ್ಣು ನೆಟ್ಟಿದೆ. ಅದರ ಜತೆಗೆ ಅವರು ಏನು ಹೇಳುತ್ತಾರೆ ಎಂಬ ಕುತೂಹಲ ಕೂಡಾ. ಈಗ ಅವರು ಈ ಕುತೂಹಲವನ್ನು ತಣಿಸುವ ಸಣ್ಣ ಬೆಳವಣಿಗೆ ನಡೆದಿದೆ. ಏಕನಾಥ ಶಿಂಧೆ ಅವರು ಸೂರತ್‌ನ ರೆಸಾರ್ಟ್‌ನಿಂದಲೇ ಟ್ವೀಟ್ ಮಾಡಿದ್ದು ತಮ್ಮ ನಿಲುವನ್ನು ಸ್ಪಷ್ಟಪಡಿಸಿದ್ದಾರೆ.
ಏಕನಾಥ್ ಶಿಂಧೆ ಹೇಳಿದ್ದೇನು?
ʻʻನಾವು ಬಾಳಾಸಾಹೇಬ್ ಅವರ ಶಿವಸೈನಿಕರು. ಅಧಿಕಾರಕ್ಕಾಗಿ ನಾವೆಂದೂ ಮೋಸ ಮಾಡುವುದಿಲ್ಲ. ಬಾಳಾಸಾಹೇಬ್ ಅವರು ನಮಗೆ ಹಿಂದುತ್ವವನ್ನು ಕಲಿಸಿದ್ದಾರೆʼʼ ಎಂದು ಏಕನಾಥ್ ಶಿಂಧೆ ಹೇಳಿದ್ದಾರೆ.
ಸೋಮವಾರ ರಾತ್ರಿ ಮುಂಬಯಿಯಿಂದ ಸೂರತ್‌ಗೆ ಸುಮಾರು ೩೦ ಶಾಸಕರ ಗುಂಪು ಕಟ್ಟಿಕೊಂಡು ಹೋಗಿದ್ದ ಏಕನಾಥ ಶಿಂಧೆ ಆ ಬಳಿಕ ಶಿವಸೇನೆಯ ಹಿರಿಯ ನಾಯಕರಿಂದ ಸಂಪೂರ್ಣ ಸಂಪರ್ಕ ಕಳೆದುಕೊಂಡಿದ್ದರು.
ಇದೀಗ ಅವರು ಸಾರ್ವಜನಿಕವಾಗಿ ಹೇಳಿಕೆ ನೀಡಿ, ಬಾಳಾ ಸಾಹೇಬ್ ಠಾಕ್ರೆ ಅವರ ಹಿಂದುತ್ವದ ಬಗ್ಗೆ ಮಾತನಾಡಿರುವುದು ಕುತೂಹಲ ಮೂಡಿಸಿದೆ. ಅಧಿಕಾರಕ್ಕಾಗಿ ನಾವೆಂದೂ ಮೋಸ ಮಾಡುವುದಿಲ್ಲ ಎಂಬ ಅವರ ಹೇಳಿಕೆ ಮುಂದೆ ಬಿಜೆಪಿ ಜೋಡಿಸುವ ಸೂಚನೆಯೇ ಎನ್ನುವ ಪ್ರಶ್ನೆಯನ್ನು ಮುಂದಿಟ್ಟಿದೆ.
ಇದನ್ನೂ ಓದಿ| ಮಹಾರಾಷ್ಟ್ರದ ಮೈತ್ರಿ ಸರಕಾರ: ಉರುಳುವುದೇ? ಉಳಿಯುವುದೇ?