Site icon Vistara News

ಕಪ್ಪು ಕುರ್ತಾ, ಪೇಟಾ ಧರಿಸಿ ಸಿದ್ಧರಾದ ಮಲ್ಲಿಕಾರ್ಜುನ್​ ಖರ್ಗೆ; ಬ್ಯಾರಿಕೇಡ್​ ಏರುತ್ತಿರುವ ಕಾರ್ಯಕರ್ತರು

Congress

ನವ ದೆಹಲಿ: ಬೆಲೆ ಏರಿಕೆ, ಜಿಎಸ್​ಟಿ ಹೆಚ್ಚಳ, ನಿರುದ್ಯೋಗ ಸಮಸ್ಯೆಗಳ ವಿರುದ್ಧ ಇಂದು ಕಾಂಗ್ರೆಸ್​​ನ ಕಾರ್ಯಕರ್ತರು, ಪ್ರಮುಖ ನಾಯಕರು ಇಂದು ರಸ್ತೆಗಳಿದು ಪ್ರತಿಭಟನೆ ನಡೆಸುತ್ತಿದ್ದಾರೆ. ಎಐಸಿಸಿ ಪ್ರಧಾನ ಕಚೇರಿ, ಸಂಸತ್ತಿನ ಹೊರಭಾಗಗಳಲ್ಲಿ ದೊಡ್ಡ ಗುಂಪು ಸೇರಿದ್ದಾರೆ. ಜೋರಾಗಿ ಮಳೆ ಸುರಿಯುತ್ತಿದ್ದರೂ ಲೆಕ್ಕಿಸದೆ ಆವೇಶದಿಂದ, ಪೊಲೀಸ್​ ಬ್ಯಾರಿಕೇಡ್​ಗಳನ್ನು ಹತ್ತಿ, ತಳ್ಳುತ್ತ ಉಗ್ರ ಪ್ರತಿಭಟನೆ ಶುರುವಿಟ್ಟುಕೊಂಡಿದ್ದಾರೆ. ಕಾಂಗ್ರೆಸ್​ ನಾಯಕರು, ಕಾರ್ಯಕರ್ತರು ಕಪ್ಪು ಬಟ್ಟೆ ಧರಿಸಿ ಪ್ರತಿಭಟನೆಯಲ್ಲಿ ತೊಡಗಿಕೊಂಡಿದ್ದಾರೆ. ಕಾಂಗ್ರೆಸ್​ ನಾಯಕ ಮಲ್ಲಿಕಾರ್ಜುನ್​ ಖರ್ಗೆ ಅವರೂ ಕಪ್ಪು ಬಣ್ಣದ ಕುರ್ತಾ, ಕಪ್ಪು ಬಣ್ಣದ ಪೇಟಾ ಕಟ್ಟಿಕೊಂಡಿದ್ದಾರೆ.

ಈ ಹಿಂದೆ ರಾಹುಲ್​ ಗಾಂಧಿ ಮತ್ತು ಸೋನಿಯಾ ಗಾಂಧಿ ವಿರುದ್ಧ ಇ ಡಿ ವಿಚಾರಣೆ ನಡೆಯುತ್ತಿರುವಾಗಲೂ ಕಾಂಗ್ರೆಸ್ ತೀವ್ರ ಪ್ರತಿಭಟನೆ ನಡೆಸಿತ್ತು. ಈಗ ಬೆಲೆ ಏರಿಕೆ-ಜಿಎಸ್​ಟಿ ಹೆಚ್ಚಳದ ವಿರುದ್ಧ ರಸ್ತೆಗಿಳಿದು ಹೋರಾಟ ಶುರು ಮಾಡಿದೆ. ಇಂದು ರಾಷ್ಟ್ರಪತಿ ಭವನ ಚಲೋ ನಡೆಸಲು , ಪ್ರಧಾನಮಂತ್ರಿ ನಿವಾಸಕ್ಕೆ ಘೇರಾವ್​ ಹಾಕಲೂ ಯೋಜನೆ ರೂಪಿಸಿದೆ. ದೆಹಲಿ ಪೊಲೀಸರು ಅಲರ್ಟ್ ಆಗಿದ್ದಾರೆ. ಡಾ. ಎಪೆಜೆ ಅಬ್ದುಲ್​ ಕಲಾಮ್​ ರಸ್ತೆ, 7 ಲೋಕ ಕಲ್ಯಾಣ ಮಾರ್ಗಗಳಲ್ಲಿ ಪೊಲೀಸ್ ಬಿಗಿ ಬಂದೋಬಸ್ತ್ ಕಲ್ಪಿಸಲಾಗಿದೆ. ಹಾಗಿದ್ದಾಗ್ಯೂ ಕಾಂಗ್ರೆಸ್ ನಾಯಕರು ಮಾತು ಕೇಳುವ ಯಾವ ಲಕ್ಷಣವೂ ಕಾಣಿಸುತ್ತಿಲ್ಲ. ಘೋಷಣೆಗಳನ್ನು ಕೂಗುತ್ತ ಮೆರವಣಿಗೆಗಳನ್ನೂ ನಡೆಸುತ್ತಿದ್ದಾರೆ.

ಇದನ್ನು ಓದಿ: ಕಾಂಗ್ರೆಸ್‌ ಪ್ರತಿಭಟನೆ ವೇಳೆ ಕಾರಿಗೆ ಬೆಂಕಿ ಹಚ್ಚಿದ ಪ್ರಕರಣ: 5 ಆರೋಪಿಗಳಿಗೆ ಜಾಮೀನು

Exit mobile version